Advertisement

ಐಸಿಸ್‌ ನಂಟಿನ ಪ್ರಕರಣಗಳಲ್ಲಿ ಮೊದಲ ಶಿಕ್ಷೆ: ಇಬ್ಬರಿಗೆ 7 ವರ್ಷ ಜೈಲು

03:58 PM Apr 21, 2017 | Team Udayavani |

ಹೊಸದಿಲ್ಲಿ : ಐಸಿಸ್‌ ಉಗ್ರ ಸಂಘಟನೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಇದೇ ಮೊದಲ ಬಾರಿಗೆ ಇಲ್ಲಿನ ವಿಶೇಷ ನ್ಯಾಯಾಯಲಯವು ಐಸಿಸ್‌ ಉಗ್ರ ಸಂಘಟನೆಗೆ ನಿಧಿ ಸಂಗ್ರಹಿಸಿದ ಮತ್ತು ಯುವಕರ ನೇಮಕಾತಿಯಲ್ಲಿ ತೊಡಗಿಕೊಂಡ ಅಪರಾಧಕ್ಕಾಗಿ ಐಸಿಸ್‌ ಜತೆ ನಂಟು ಹೊಂದಿದ್ದ  ಇಬ್ಬರಿಗೆ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ 

Advertisement

ಜಿಲ್ಲಾ ನ್ಯಾಯಾಧೀಶ ಅಮರ್‌ ನಾಥ್‌ ಅವರು ಆರೋಪಿಗಳಾದ, ಜಮ್ಮು ಕಾಶ್ಮೀರದ ಅಜರ್‌ ಉಲ್‌ ಇಸ್ಲಾಮ್‌ (24) ಮತ್ತು ಮಹಾರಾಷ್ಟ್ರದ ಮೊಹಮ್ಮದ್‌ ಫ‌ರಾನ್‌ ಶೇಖ್‌ (24) ಎಂಬವರಿಗೆ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದರು. 

ಅಪರಾಧಿಗಳು ವಕೀಲ ಎಂ ಎಸ್‌ ಖಾನ್‌ ಮೂಲಕ, “ನಮ್ಮ ಕೃತ್ಯಗಳಿಗೆ ನಾವು ಪಶ್ಚಾತ್ತಾಪ ಪಡುತ್ತೇವೆ. ನಮ್ಮ ವಿರುದ್ಧ ಯಾವುದೇ ಪೂರ್ವ ಕ್ರಿಮಿನಲ್‌ ದಾಖಲೆಗಳು ಇರುವುದಿಲ್ಲ; ನಾವು ಸಮಾಜದ ಮುಖ್ಯವಾಹಿನಿಯನ್ನು ಸೇರಬಯಸುತ್ತೇವೆ ಮತ್ತು ಸಮಾಜಕ್ಕೆ ನಾವು ಉತ್ಪಾದಕ ಶಕ್ತಿಯಾಗಿ ಕೆಲಸ ಮಾಡಲು ಬಯಸುತ್ತೇವೆ; ಅಂತೆಯೇ ನಮ್ಮ ಪುನರ್‌ ವಸತಿಯನ್ನು ನಾವು ಕೋರುತ್ತೇವೆ’ ಎಂದು ಯೂಟರ್ನ್ ಮಾಡಿದ್ದರು. 

ಈ ಇಬ್ಬರು ಆರೋಪಿಗಳ ಜತೆಗೆ ಅದ್‌ನಾನ್‌ ಹಸನ್‌ ಎಂಬ ಮತ್ತೋರ್ವ ಆರೋಪಿಯನ್ನು ಕೂಡ ಎನ್‌ಐಎ ಕಳೆದ ವರ್ಷ ಜನವರಿ 28ರಂದು ಬಂಧಿಸಿತ್ತು. ಅದ್‌ನಾನ್‌ ಹಸನ್‌ ವಿರುದ್ಧದ ವಿಚಾರಣೆ ಈಗಲೂ ಜಾರಿಯಲ್ಲಿದೆ. 

ತನಿಖಾ ಸಂಸ್ಥೆಯ ಪ್ರಕಾರ ಹಸನ್‌ ಮತ್ತು ಶೇಖ್‌ 2008 ಮತ್ತು 2012ರಲ್ಲಿ ಯುಎಇಗೆ ತಮ್ಮ ಉದ್ಯೋಗ ಸಂಬಂಧವಾಗಿ ಆಗೀಗ ಎಂಬಂತೆ ಹೋಗಿಬರುತ್ತಲೇ ಇದ್ದರು. 2015ರ ಜುಲೈ ತಿಂಗಳಲ್ಲಿ ಇಸ್ಲಾಮ್‌ ಇವರನ್ನು ಯುಎಯಲ್ಲಿ ಸೇರಿಕೊಳ್ಳಲಿದ್ದ ಎಂದು ಮೂಲಗಳು ತಿಳಿಸಿವೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next