Advertisement

Israel ಮತ್ತು ಲೆಬನಾನ್ ನಡುವೆ ಕದನ ವಿರಾಮ ಒಪ್ಪಂದ:‌ ಅಮೆರಿಕ ಮಧ್ಯಸ್ಥಿಕೆಗೆ ಹಸಿರು ನಿಶಾನೆ

03:53 AM Nov 28, 2024 | Team Udayavani |

ಟೆಲ್‌ ಅವಿವ್(ಇಸ್ರೇಲ್):‌ ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸಬೇಕು ಎಂಬ ಜಾಗತಿಕ ಮಟ್ಟದ ಒತ್ತಡದ ನಡುವೆ ಇಸ್ರೇಲ್‌ ಮತ್ತು ಹೆಜ್ಬುಲ್ಲಾ ಲೆಬನಾನ್‌ ನಲ್ಲಿ ಕದನ ವಿರಾಮ ಘೋಷಿಸುವ ನಿರ್ಧಾರಕ್ಕೆ ಬಂದಿರುವುದಾಗಿ ವರದಿ ತಿಳಿಸಿದೆ. ಆದರೆ ಗಾಜಾದಲ್ಲಿ ಇಸ್ರೇಲ್‌ ಯುದ್ಧ ಮುಂದುವರಿದಿದೆ.

Advertisement

ಶಾಶ್ವತವಾಗಿ ಯುದ್ಧ ನಿಲ್ಲಿಸುವ ನಿಟ್ಟಿನಲ್ಲಿ ಲೆಬನಾನ್‌ ಮೂಲದ ಭಯೋ*ತ್ಪಾದಕ ಸಂಘಟನೆ ಹೆಜ್ಬುಲ್ಲಾ ಮತ್ತು ಇಸ್ರೇಲ್‌ ಅಮೆರಿಕದ ಉಸ್ತುವಾರಿಯಲ್ಲಿ ಕದನ ವಿರಾಮಕ್ಕೆ ಸಹಮತ ಸೂಚಿಸಿರುವಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಮಂಗಳವಾರ (ನ.26) ಘೋಷಿಸಿದ್ದಾರೆ.

ಕದನ ವಿರಾಮ ಒಪ್ಪಂದಕ್ಕೆ ಇಸ್ರೇಲ್‌ ನ ಭದ್ರತಾ ಕ್ಯಾಬಿನೆಟ್‌ ಅನುಮತಿ ನೀಡಿದ ಬಳಿಕ ಮಾತನಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್‌, ಮುಂದಿನ 60 ದಿನದೊಳಗೆ ಕದನ ವಿರಾಮದ ಒಪ್ಪಂದದ ಪ್ರಕಾರ ಇಸ್ರೇಲ್‌ ಲೆಬನಾನ್‌ ನಿಂದ ತನ್ನ ಸೇನಾಪಡೆಯನ್ನು ಹಂತ, ಹಂತವಾಗಿ ವಾಪಸ್‌ ಕರೆಯಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಇಸ್ರೇಲ್‌ ಮತ್ತು ಇರಾನ್‌ ಬೆಂಬಲಿತ ಹೆಜ್ಬುಲ್ಲಾ ನಡುವಿನ ಯುದ್ಧವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಇಸ್ರೇಲ್‌ ಪ್ರಧಾನಮಂತ್ರಿ ಬೆಂಜಮಿನ್‌ ನೆತನ್ಯಾಹು ಅವರು ಕದನ ವಿರಾಮ ಒಪ್ಪಂದವನ್ನು ಸೆಕ್ಯುರಿಟಿ ಕ್ಯಾಬಿನೆಟ್‌ ನಲ್ಲಿ ಮಂಡಿಸಿರುವುದಾಗಿ ವರದಿ ತಿಳಿಸಿದೆ.

Advertisement

ಇಸ್ರೇಲ್‌ ಪ್ರಧಾನಮಂತ್ರಿ ಬೆಂಜಮಿನ್‌ ನೆತನ್ಯಾಹು ಮತ್ತು ಲೆಬನಾನ್‌ ಪ್ರಧಾನಿ ನಜೀಬ್‌ ಮಿಕಾಟಿ ಅವರಗೊಂದಿಗೆ ಮಾತುಕತೆ ನಡೆಸಿರುವುದಾಗಿ ಬೈಡನ್‌ ಪ್ರತಿಕ್ರಿಯೆ ನೀಡಿದ್ದಾರೆ. ಇಸ್ರೇಲ್‌ ಮತ್ತು ಹೆಜ್ಬುಲ್ಲಾ ನಡುವೆ ನಡೆಯುತ್ತಿರುವ ಅನಾಹುತಕಾರಿ ಯುದ್ಧವನ್ನು ನಿಲ್ಲಿಸಬೇಕೆಂಬ ಅಮೆರಿಕದ ಪ್ರಸ್ತಾವನೆಯನ್ನು ಇಸ್ರೇಲ್‌ ಸರ್ಕಾರ ಒಪ್ಪಿರುವುದಾಗಿ ನಾವು ಘೋಷಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರೋನ್‌ ಅವರಿಗೆ ಧನ್ಯವಾದ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಬೈರೂತ್‌ನಲ್ಲಿ ಸಂಭ್ರಮಾಚರಣೆ:
14 ತಿಂಗಳುಗಳ ಕಾಲ ಯುದ್ಧದಿಂದಾಗಿ ನಲುಗಿ ಹೋಗಿದ್ದ ಲೆಬನಾನ್‌ ರಾಜಧಾನಿ ಬೈರೂತ್‌ನ ಜನ ಬುಧವಾರ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಈ ಕದನ ವಿರಾಮ ಘೋಷಣೆಯನ್ನು ಭಾರತ ಸಹ ಸ್ವಾಗತಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next