ಇಂದೋರ್: ಸಾಕುನಾಯಿಗಳ ವಿಚಾರವಾಗಿ ನೆರೆಹೊರೆಯವರ ಜೊತೆ ನಡೆದ ಜಗಳದ ವೇಳೆ ವ್ಯಕ್ತಿಯೊಬ್ಬ ಜನರ ಗುಂಪಿನ ಮೇಲೆ ಗುಂಡು ಹಾರಿಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಎಂಟು ಮಂದಿ ಗಾಯಗೊಂಡ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.
ಮೃತರನ್ನು ರಾಹುಲ್ (28) ಮತ್ತು ವಿಮಲ್ (35) ಎಂದು ಗುರುತಿಸಲಾಗಿದೆ. ಆರು ಮಂದಿ ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಏನಿದು ಪ್ರಕರಣ: ಖಜರಾಣಾ ಪೊಲೀಸ್ ಠಾಣೆ ವ್ಯಾಪ್ತಿಯ ಕೃಷ್ಣಾ ಬಾಗ್ ಕಾಲೋನಿಯಲ್ಲಿ ಘಟನೆ ನಡೆದಿದ್ದು. ಖಾಸಗಿ ಬ್ಯಾಂಕ್‌ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಆರೋಪಿ ರಾಜ್‌ಪಾಲ್ ರಾಜಾವತ್ ಅವರು ತನ್ನ ನಾಯಿಯೊಂದಿಗೆ ವಾಕಿಂಗ್ ಹೋದ ವೇಳೆ ನೆರೆಯ ಮನೆಯ ನಾಯಿ ರಾಜಾವತ್ ಅವರ ನಾಯಿ ಜೊತೆ ಕಚ್ಚಾಡಿಕೊಂಡಿದೆ ಈ ವಿಚಾರವಾಗಿ ನಾಯಿ ಮಾಲೀಕರು ಪರಸ್ಪರ ಜಗಳವಾಡಿಕೊಂಡಿದ್ದಾರೆ. ಮನೆಯ ಹೊರಗೆ ಜಗಳ ನಡೆಯುತ್ತಿದ್ದರಿಂದ ನೆರೆಹೊರೆಯ ಹಲವು ಮಂದಿ ಅಲ್ಲಿ ಸೇರಿದ್ದರು ಈ ವೇಳೆ ಕೋಪಗೊಂಡ ರಾಜಾವತ್ ಮನೆಗೆ ತೆರಳಿ ಮನೆಯೊಳಗಿದ್ದ ತನ್ನ ಬಂದೂಕನ್ನು ತಂದು ತಾರಸಿ ಮೇಲಿಂದ ಮನೆಯ ಹೊರಗೆ ನಿಂತಿದ್ದ ಜನರ ಮೇಲೆ ಗುಂಡು ಹಾರಿಸಿದ್ದಾನೆ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ ಆರು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಮರೇಂದ್ರ ಸಿಂಗ್ ತಿಳಿಸಿದ್ದಾರೆ.
ಆರೋಪಿ ರಾಜ್‌ಪಾಲ್ ರಾಜಾವತ್ ಎಂಬಾತನನ್ನು ಬಂಧಿಸಲಾಗಿದ್ದು, ಆತನ ಬಳಿಯಿದ್ದ ಗನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: Nepal:ನೇಪಾಳದಿಂದ ಬಾಂಗ್ಲಾ ಮೂಲಕ ಭಾರತಕ್ಕೆ ವಿದ್ಯುತ್ ಸರಬರಾಜು: ಶೀಘ್ರವೇ ಒಪ್ಪಂದ