Advertisement
ಶಾಲಾ ಕಟ್ಟಡದ ಎರಡು ಕೊಠಡಿಗಳು, ಛಾವಣಿ ಕುಸಿದು ಗೋಡೆ ಬೀಳುವ ಸ್ಥಿತಿ ಮನಗಂಡ “ಉದಯವಾಣಿ’ ಸುದಿನ ವರ್ಷದ ಹಿಂದೆಯೇ ವರದಿ ಪ್ರಕಟಿಸಿತ್ತು. ಶಿಕ್ಷಣ ಇಲಾಖಾಧಿಕಾರಿಗಳು ಭೇಟಿ ನೀಡಿ, ತರಗತಿಗಳನ್ನು ಬದಲಿ ಕೊಠಡಿಗಳಿಗೆ ಸ್ಥಳಾಂತರಿಸಲು ಸೂಚಿಸಿದ್ದರು. ಸ್ಥಳಾಂತ ರಿಸಿದ ಕೊಠಡಿಗಳು ಅಪಾಯದ ಅಂಚಿನಲ್ಲಿರುವ ಕೊಠಡಿಗಳಿಗೆ ಹೊಂದಿಕೊಂಡಿವೆ. ಮಕ್ಕಳ ಹೆತ್ತವರು ಗ್ರಾಮಸಭೆಯಲ್ಲಿ ಅಪಾಯಕಾರಿ ಕೊಠಡಿ ಕೆಡವಲು ಆಗ್ರಹಿಸಿದ್ದರು. ಜಿ.ಪಂ. ಎಂಜಿನಿಯರ್ ಗಫೂರ್ ಶಾಲೆಗೆ ಭೇಟಿ ನೀಡಿ, ಹರಾಜಿಗೆ ದಾಖಲೆ ಸಿದ್ಧಪಡಿಸಿ, ಶಿಕ್ಷಣ ಇಲಾಖೆಗೆ ಕಳುಹಿಸಿಕೊಟ್ಟಿದ್ದರು.ಕೊಠಡಿಗಳ ಕೆಡವಲು ಎಂಜಿನಿಯರ್ ಅಂದಾಜಿಸಿದ 38 ಸಾವಿರ ರೂ. ಮೊತ್ತದಲ್ಲಿ ಯಾರೂ ಗುತ್ತಿಗೆ ವಹಿಸಿಕೊಳ್ಳಲು ಮುಂದಾಗುತ್ತಿಲ್ಲ. ಕಟ್ಟಡ ಸ್ಥಿತಿಗತಿ ನೋಡಿ ಯಾರೂ 38 ಸಾವಿರ ರೂ. ಕಟ್ಟಲು ಸಿದ್ಧರಿಲ್ಲ. ಹಳೆ ಕಟ್ಟಡ ಶಿಥಿಲವಾಗಿದೆ. ಮರದ ತುಂಡುಗಳು ಗೆದ್ದಲು ಹಿಡಿದಿವೆ. ಇದರಿಂದಾಗಿ ಗುತ್ತಿಗೆದಾರರು ಮುಂದೆ ಬರುತ್ತಿಲ್ಲ. ಸಿಗುವ ಸಾಮಗ್ರಿ ಹರಾಜಿಗೆ ಸಿಗುವುದೇ ಕಷ್ಟ . ಸಾಮಾನ್ಯ ಜ್ಞಾನವಿಲ್ಲದೆ ಈ ರೀತಿಯಾಗಿದೆ ಎಂದು ಗ್ರಾಮಸ್ಥ ಶರೀಫ್ ಹೇಳುತ್ತಾರೆ.
ಎಂಜಿನಿಯರಿಂಗ್ ವಿಭಾಗದಿಂದ ಎಂಜಿನಿಯರ್ ಕಟ್ಟಡ ಕೆಡವಲು 38 ಸಾವಿರ ರೂ. ಎಂದು ನಿಗದಿಪಡಿಸಿದ್ದು, ಯಾರೂ ಗುತ್ತಿಗೆ ವಹಿಸಿಕೊಳ್ಳಲು ಮುಂದಾಗುತ್ತಿಲ್ಲ. ಈ ಆದೇಶ ಶಾಲೆಗೆ ಬಂದ ಬಳಿಕ ಎಸ್‌ಡಿಎಂಸಿ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುವುದು.
– ಜಯವಿಕ್ರಮ್ ಕಲ್ಲಾಪ
ತಣ್ಣೀರುಪಂತ ಗ್ರಾ.ಪಂ. ಅಧ್ಯಕ್ಷರು ಎಂ.ಎಸ್. ಭಟ್