ಗದಗ: ಜಿಲ್ಲೆಯಲ್ಲಿ ಜೂ. 3 ರಿಂದ 7ರ ವರೆಗೆ ವಿಸ್ತರಿಸಲಾದ ಕಠಿಣ ಮಾರ್ಗಸೂಚಿಗಳ ಸಂಪೂರ್ಣ ಲಾಕ್‌ಡೌನ್ ಅನ್ನು ಸರಿಯಾಗಿ ಅನುಷ್ಠಾನ ಮಾಡುವುದರ ಮೂಲಕ ಸೋಂಕಿನ ಸರಪಳಿ ತುಂಡರಿಸಿ ಜೀವ ಹಾನಿ ತಡೆಗೆ ಮುಂದಾಗುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ತಿಳಿಸಿದರು.
ಜಿಲ್ಲಾಡಳಿತ ಭವನದಲ್ಲಿ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಸಚಿವರು ಮಾತನಾಡಿದರು. ಜಿಲ್ಲೆಯ ಕೋವಿಡ್ ಅಂಕಿ ಅಂಶಗಳ ಸ್ಥಿತಿಗತಿ ಸೋಂಕಿನ ಶೇಕಡಾವಾರು ಪ್ರಮಾಣ ಹಾಗೂ ಸೋಂಕು ನಿಯಂತ್ರಣಕ್ಕೆ ವಿಧಿ ಸಲಾದ ಕಠಿಣ ಮಾರ್ಗಸೂಚಿಗಳ ಪಾಲನೆ ಕುರಿತಂತೆ ಮಾಹಿತಿ ಪಡೆದ ಸಚಿವರು, ಮಾರ್ಗಸೂಚಿಗಳ ಅನುಷ್ಠಾನ ಕಟ್ಟುನಿಟ್ಟಿನಿಂದ ಕೂಡಿರಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಡಾ.ಸತೀಶ ಬಸರಿಗಿಡದ ಹಾಗೂ ಆರ್‌ಸಿಎಚ್ ಅಧಿ ಕಾರಿ ಡಾ.ಬಿ.ಎಂ.ಗೋಜನುರ ಅವರಿಂದ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ವೈದ್ಯಕೀಯ ಉಪಕರಣಗಳು ಹಾಗೂ ಔಷಧ ಸಂಗ್ರಹ ಕುರಿತು ಮಾಹಿತಿ ಪಡೆದರು. ಜತೆಗೆ ಜಿಲ್ಲೆಯಲ್ಲಿ ಜರುಗುತ್ತಿರುವ ಲಸಿಕಾಕರಣದ ಕುರಿತು ಮಾಹಿತಿ ಪಡೆದ ಸಚಿವರು, ಸರ್ಕಾರ ನಿಗದಿಪಡಿಸಿದ ಆದ್ಯತಾ ಗುಂಪುಗಳಿಗೆ ಶೀಘ್ರವೇ ಲಸಿಕಾಕರಣ ಮಾಡಬೇಕು. ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಔಷಧಗಳನ್ನು ನಿಗದಿತ ಸಮಯಕ್ಕೆ ಒದಗಿಸುವ ಮೂಲಕ ಸೋಂಕಿತರ ಜೀವ ಹಾನಿ ತಪ್ಪಿಸಬೇಕು. ಈ ಕಾರ್ಯದಲ್ಲಿ ನಿಯೋಜಿತ ಆರೋಗ್ಯ ಇಲಾಖೆ ಸಿಬ್ಬಂದಿ ಸರಿಯಾಗಿ ಕಾರ್ಯನಿರ್ವಹಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಸೂಚಿಸಿದರು.
ಜಿಲ್ಲಾದ್ಯಂತ ಜಾರಿಗೊಳಿಸಲಾದ ಕಠಿಣ ಮಾರ್ಗಸೂಚಿಗಳ ಪಾಲನೆಯಲ್ಲಿ ಪೊಲೀಸ್ ಇಲಾಖಾ ಅಧಿ ಕಾರಿಗಳ ಪಾತ್ರ ಪ್ರಮುಖವಾಗಿದೆ. ಅನಗತ್ಯ ಸಾರ್ವಜನಿಕರ ಸಂಚಾರ ಹಾಗೂ ಜನರ ಗುಂಪುಗೂಡುವಿಕೆಯನ್ನು ತಡೆಯಬೇಕು. ಆದಷ್ಟು ಸಾರ್ವಜನಿಕರು ಸಾಮಾಜಿಕ ಅಂತರದೊಂದಿಗೆ ಕಡ್ಡಾಯ ಮಾಸ್ಕ ಧರಿಸುವಂತೆ ನಿಗಾ ವಹಿಸಬೇಕೆಂದು ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು, ಜಿಪಂ ಸಿಇಒ ಭರತ ಎಸ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್., ಉಪ ವಿಭಾಗಾ ಧಿಕಾರಿ ರಾಯಪ್ಪ ಹುಣಸಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಡಾ.ಸತೀಸ ಬಸರಿಗಿಡದ, ಆರ್‌ಸಿಎಚ್ ಅಧಿ ಕಾರಿ ಡಾ|ಬಿ.ಎಂ.ಗೋಜನೂರ ಇತರರು ಭಾಗವಹಿಸಿದ್ದರು.