Advertisement

ಅಕ್ರಮ ಹಣ ಸಿಕ್ಕರೆ ಪ್ರಕರಣ ದಾಖಲು

06:21 AM Mar 17, 2019 | Team Udayavani |

ಕಲಬುರಗಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಕುರುಡ ಕಾಂಚಾಣ ಕುಣಿದಾಡುವ ಸಂಭವವಿದ್ದು, ದಾಖಲೆಯಿಲ್ಲದ ಅಕ್ರಮ ಹಣ ಕಂಡು ಬಂದಲ್ಲಿ ಕೂಡಲೇ ವಶಕ್ಕೆ ಪಡೆದು, ಸಂಬಂಧಿಸಿದವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಆರ್‌. ವೆಂಕಟೇಶ ಕುಮಾರ ಫ್ಲೈಯಿಂಗ್‌ ಸ್ಕ್ವಾ ಡ್‌ ಮತ್ತು ಎಸ್‌.ಎಸ್‌.ಟಿ. ತಂಡಗಳಿಗೆ ಖಡಕ್‌ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಲಬುರಗಿ ಲೋಕಸಭೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಹಾಯಕ ಚುನಾವಣಾಧಿಕಾರಿಗಳು, ಅಬಕಾರಿ, ವಾಣಿಜ್ಯ, ಆದಾಯ ತೆರಿಗೆ ಹಾಗೂ ಬ್ಯಾಂಕ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಚುನಾವಣೆ ಆಯೋಗದ ನಿರ್ದೇಶನದ ಪ್ರಕಾರ ಯಾವುದೇ ವ್ಯಕ್ತಿ 50 ಸಾವಿರ ರೂ. ವರೆಗೆ ಹಣವನ್ನು ವೈಯಕ್ತಿಕವಾಗಿ ಇಟ್ಟುಕೊಂಡಿದ್ದಲ್ಲಿ ಅದಕ್ಕೆ ಅಭ್ಯಂತರವಿಲ್ಲ. 50 ಸಾವಿರ ರೂ. ಮೇಲ್ಪಟ್ಟು 10 ಲಕ್ಷ ರೂ. ವರೆಗೆ ಹಣವಿದ್ದಲ್ಲಿ ಅದಕ್ಕೆ ಸೂಕ್ತ ದಾಖಲಾತಿಗಳಿದ್ದರೆ ಪರವಾಗಿಲ್ಲ, ಸಂಶಾಯಸ್ಪದ ಹಣ ಕಂಡುಬಂದಲ್ಲಿ ವಶಕ್ಕೆ ಪಡೆದು ಜಿಲ್ಲಾ ಖಜಾನೆಗೆ ಸಲ್ಲಿಸಬೇಕು ಎಂದರು.

10 ಲಕ್ಷ ರೂ. ಮೇಲ್ಟಟ್ಟು ಹಣ ಪತ್ತೆಯಾದಲ್ಲಿ ದಾಖಲೆ ಇರಲಿ, ಇಲ್ಲದಿರಲಿ ಕೂಡಲೇ ಆದಾಯ ತೆರಿಗೆ ಅಧಿಕಾರಿಗಳಿಗೆ ಮಾಹಿತಿ ರವಾನಿಸಬೇಕು. ದಾಖಲೆ ಇಲ್ಲದ ಹಣವಾದಲ್ಲಿ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಬೇಕು. ವಸತಿ ಪ್ರದೇಶಗಳಲ್ಲಿ ಸಾರ್ವಜನಿಕ ಮನೆಗಳಲ್ಲಿ ಅಕ್ರಮ ಹಣ ಇರುವ ಬಗ್ಗೆ ಖಾತ್ರಿಯಾದಲ್ಲಿ ಎಸ್‌.ಎಸ್‌.ಟಿ., ಫ್ಲೆ„ಯಿಂಗ್‌ ಸ್ಕ್ವಾಡ್‌ ಮತ್ತು ಸಹಾಯಕ ನಾವಣಾಧಿಕಾರಿಗಳು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ರವಾನಿಸಿದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸುವರು ಎಂದು ತಿಳಿಸಿದರು.

ಅಕ್ರಮ ಹಣ ಹರಿದಾಡುವುದನ್ನು ಸಂಪೂರ್ಣ ತಡೆಯಲು ಸಹಾಯಕ ಚುನಾವಣಾ ಅಧಿಕಾರಿಗಳು ಗುಪ್ತಚರ ಮಾಹಿತಿ  ಬಲಪಡಿಸಬೇಕು ಎಂದರು.

ಒಂದು ಲಕ್ಷ ಮೇಲ್ಪಟ್ಟ ನಗದು ವ್ಯವಹಾರ ಹಾಗೂ 10 ಲಕ್ಷ ರೂ. ಮೇಲ್ಪಟ್ಟ ಎಲ್ಲ ರೀತಿಯ ವ್ಯವಹಾರಗಳನ್ನು ಬ್ಯಾಂಕುಗಳು ರಾಜ್ಯ ಚುನಾವಣಾ ಮುಖ್ಯಾಧಿಕಾರಿಗಳಿಗೆ ಅಲ್ಲದೆ ಜಿಲ್ಲಾ ಚುನಾವಣಾಧಿಕಾರಿಗಳಿಗೂ ಮಾಹಿತಿ ನೀಡಬೇಕು.

Advertisement

ಚುನಾವಣೆ ವರ್ಷ ಇದಾಗಿರುವುದರಿಂದ ಜಿಲ್ಲೆಯ ಎಲ್ಲ ವಾಣಿಜ್ಯ, ಸಹಕಾರ ಹಾಗೂ ಖಾಸಗಿ ಬ್ಯಾಂಕುಗಳಿಗೆ ಮಾದರಿ
ನೀತಿ ಸಂಹಿತೆ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಲು ನಿರ್ದೇಶನ ನೀಡಬೇಕು ಎಂದು ಬ್ಯಾಂಕ್‌ ಅಧಿ ಕಾರಿಗಳಿಗೆ ಸೂಚಿಸಿದರು.

ಅಕ್ರಮ ಮದ್ಯ ಸಾಗಾಣಿಕೆಗೆ ತಡೆಯೊಡ್ಡಲು ಜಿಲ್ಲೆಯ ಮಿರಿಯಾಣ, ಕುಂಚಾವರಂ, ರಿಬ್ಬನಪಲ್ಲಿ ಅಂತರಾಜ್ಯ ಗಡಿ ಚೆಕ್‌ಪೋಸ್ಟ್‌ ಸೇರಿದಂತೆ ಒಂಭತ್ತು ಕಡೆ ಅಬಕಾರಿ ಚೆಕ್‌ ಪೋಸ್ಟ್‌ ಸ್ಥಾಪಿಸಲಾಗಿದೆ. ಇಲ್ಲಿ ಅಬಕಾರಿ ಗಾರ್ಡ್‌ಗಳು 24 ತಾಸು ಕಾರ್ಯಾಚರಣೆ ನಡೆಸಲಿದ್ದಾರೆ. ಪ್ರತಿ ಚೆಕ್‌ ಪೋಸ್ಟ್‌ನಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಲಾಗಿದೆ. ಅಕ್ರಮ ಮದ್ಯ ನಿಗ್ರಹಣೆಗೆ 11 ತಂಡ ರಚನೆ ಮಾಡಿದೆ.

 ಸಾರ್ವಜನಿಕರಿಂದ ದೂರು ಸ್ವೀಕರಿಸಲು ಎಂಟು ನಿಯಂತ್ರಣ ಕೊಠಡಿ ತೆರೆಯಲಾಗಿದೆ. ಕಳೆದ ವರ್ಷದ ಇದೇ ಅವಧಿ ಹೋಲಿಸಿದಾಗ ಈಗಿನ ಮಾರಾಟದ ಪ್ರತಿಶತ ಪ್ರಮಾಣ ಎಷ್ಟಿದೆ ಎಂಬುದರ ಬಗ್ಗೆ ಅಬಕಾರಿ ತಂಡಗಳು ಮಾಹಿತಿ
ಕಲೆ ಹಾಕಬೇಕು ಎಂದರು.

ಪೆಟ್ರೋಲ್‌ ಬಂಕ್‌ ಮೇಲೂ ನಿಗಾ: ಸಾರ್ವಜನಿಕ ಸಭೆ-ಸಮಾರಂಭ ಹಾಗೂ ಬೈಕ್‌ ರ್ಯಾಲಿ ಆಯೋಜನೆ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕೂಪನ್‌ ಮೂಲಕ ಉಚಿತವಾಗಿ ಪೆಟ್ರೋಲ್‌, ಡೀಸೆಲ್‌ ನೀಡುವ ಸಂಭವವಿದ್ದು, ಇದರ ಮೇಲೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ತೀವ್ರ ನಿಗಾವಹಿಸಲು ನಿರ್ದೇಶನ ನೀಡಲಾಗುವುದು ಎಂದರು. 

ಜಿಪಂ ಸಿಇಒ ಹಾಗೂ ಮಾದರಿ ನೀತಿ ಸಂಹಿತೆ ನೋಡಲ್‌ ಅಧಿಕಾರಿ ಡಾ| ಪಿ. ರಾಜಾ ಮಾತನಾಡಿ, ಚೆಕ್‌ ಪೋಸ್ಟ್‌ಗಳಲ್ಲಿ
ಆಯಾ ಇಲಾಖೆಗಳ ತಂಡಗಳು ತಮ್ಮ ಕಾರ್ಯ ವ್ಯಾಪ್ತಿಗೆ ಸಂಬಂಧಿಸಿದಂತೆ ಮಾತ್ರ ತಪಾಸಣೆ ಮಾಡದೆ, ಅಕ್ರಮ ಹಾಗೂ ಸಂಶಯ ರೀತಿಯಲ್ಲಿ ಅಥವಾ ಚುನಾವಣೆಗೆ ಸಂಬಂಧಿಸಿದ ಆಯಾ ಪಕ್ಷ ಅಥವಾ ಅಭ್ಯರ್ಥಿಗಳಿಗೆ ಸಂಬಂಧಿಸಿದ ದಾಖಲೆಗಳಿದ್ದಲ್ಲಿ ಅದನ್ನು ವಶಕ್ಕೆ ಪಡೆಯಬೇಕು ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಐಎಎಸ್‌ ಪ್ರೊಬೆಷನರಿ ಅಧಿಕಾರಿ ಸ್ನೇಹಲ್‌ ಸುಧಾಕರ ಲೋಖಂಡೆ ಹಾಗೂ ಜಿಲ್ಲೆಯ ಸಹಾಯಕ ಚುನಾವಣಾಧಿಕಾರಿಗಳು, ಅಬಕಾರಿ, ವಾಣಿಜ್ಯ, ಬ್ಯಾಂಕರ್, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇದ್ದರು.

ವಿಡಿಯೋ ವೀಕ್ಷಣಾ ತಂಡ ರಚನೆ
 „34-ಅಫಜಲಪುರ ವಿಧಾನಸಭಾ ಕ್ಷೇತ್ರ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಅಧೀಕ್ಷಕ ರಾಜು ದೇಶಪಾಂಡೆ ಮೊ. 891492068.
„35-ಜೇವರ್ಗಿ ವಿಧಾನಸಭಾ ಕ್ಷೇತ್ರ: ಸಮಾಜ ಕಲ್ಯಾಣ ಅಧಿಕಾರಿ ಅಶೋಕ ನಾಯಕ ಮೊ. ಸಂಖ್ಯೆ 9448219322.
„40-ಚಿತ್ತಾಪುರ ವಿಧಾನಸಭಾ ಕ್ಷೇತ್ರ: ಶಿಶು ಅಭಿವೃದ್ಧಿ ಯೋಜನಾ ಧಿಕಾರಿ ಶಿವಶರಣಪ್ಪ ಮೊ. ಸಂಖ್ಯೆ 9973153251.
„41-ಸೇಡಂ ವಿಧಾನಸಭಾ ಕ್ಷೇತ್ರ: ಸೇಡಂ ತೋಟಗಾರಿಕಾ ಅಧಿಕಾರಿ ರಮೇಶ ಗುಡಸುಲ್‌ ಮೊ. ಸಂಖ್ಯೆ 7406504120.
„42-ಚಿಂಚೋಳಿ ವಿಧಾನಸಭಾ ಕ್ಷೇತ್ರ: ಬಿ.ಸಿ.ಎಂ. ಅಧಿಕಾರಿ ಶರಣಬಸಪ್ಪ ಮೊ. ಸಂಖ್ಯೆ 9148070022.
„43-ಗುಲಬರ್ಗಾ (ಗ್ರಾಮೀಣ) ವಿಧಾನಸಭಾ ಕ್ಷೇತ್ರ: ಕಲಬುರಗಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಹುಲ್‌ಕುಮಾರ ಭಾವಿದೊಡ್ಡಿ ಮೊ. ಸಂಖ್ಯೆ 9972045458.
„44-ಗುಲಬರ್ಗಾ (ದಕ್ಷಿಣ) ವಿಧಾನಸಭಾ ಕ್ಷೇತ್ರ: ಕಲಬುರಗಿ ವಕ್ಫ್  ಅಧಿಕಾರಿ ಹಜರತ್‌ ಅಲಿ ನದಾಫ್‌ ಮೊ.ಸಂಖ್ಯೆ 9449848582.
„45-ಗುಲಬರ್ಗಾ (ಉತ್ತರ) ವಿಧಾನಸಭಾ ಕ್ಷೇತ್ರ: ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಜಗದೇವಪ್ಪ ಮೊ. ಸಂಖ್ಯೆ 9449985479.
„46-ಆಳಂದ ವಿಧಾನಸಭಾ ಕ್ಷೇತ್ರ:ಆಳಂದ ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ| ಸಂಜಯ ರೆಡ್ಡಿ ಮೊ.ಸಂಖ್ಯೆ 9480695209.

ಸಹಾಯಕ ಖರ್ಚು ವೆಚ್ಚ ವೀಕ್ಷಕರ ನೇಮಕ
1. 34-ಅಫಜಲಪುರ ವಿಧಾನಸಭಾ ಕ್ಷೇತ್ರ: ಪಿ.ಎಂ.ಜಿ.ಎಸ್‌.ವೈ. ಕಲಬುರಗಿ ವಿಭಾಗದ ಲೆಕ್ಕ ಅ ಧೀಕ್ಷಕ ಶಿವರಾಜ ಪಾಟೀಲ ಅವರ
ಮೊ. ಸಂಖ್ಯೆ 9902567991.
2. 35-ಜೇವರ್ಗಿ ವಿಧಾನಸಭಾ ಕ್ಷೇತ್ರ: ಕಲಬುರಗಿ ಲೋಕಲ್‌ ಅಡಿಟ್‌ ಸರ್ಕಲ್‌ನ ಜಂಟಿ ನಿರ್ದೇಶಕರ ಕಚೇರಿಯ ಅಡಿಟ್‌ ಆಫೀಸರ್‌ ರಾಜಕುಮಾರ ಅವರ ಮೊ. ಸಂಖ್ಯೆ 7624808486.
3. 40-ಚಿತ್ತಾಪುರ ವಿಧಾನಸಭಾ ಕ್ಷೇತ್ರ: ಕಲಬುರಗಿ ಕಮರ್ಷಿಯಲ್‌ ಟ್ಯಾಕ್ಸ್‌ ಕಚೇರಿಯ ಅಸಿಸ್ಟಂಟ್‌ ಕಮೀಶನರ್‌ ಶರಣಗೌಡ
ಪಾಟೀಲ ಅವರ ಮೊ.ಸಂಖ್ಯೆ 9901315286.
4. 41-ಸೇಡಂ ವಿಧಾನಸಭಾ ಕ್ಷೇತ್ರ: ಕಲಬುರಗಿ ಕಮರ್ಶಿಯಲ್‌ ಟ್ಯಾಕ್ಸ್‌ ಆಫೀಸಿನ ಸಿ.ಟಿ.ಒ. ಕಲ್ಯಾಣರಾವ್‌ ಬಿರಾದಾರ ಅವರ
ಮೊ. ಸಂಖ್ಯೆ 9448752193.
5. 42-ಚಿಂಚೋಳಿ ವಿಧಾನಸಭಾ ಕ್ಷೇತ್ರ: ಕಲಬುರಗಿ ಲೋಕಲ್‌ ಆಡಿಟ್‌ ಸರ್ಕಲ್‌ನ ಅಡೀಟ್‌ ಆಫೀಸರ್‌ ಶ್ರೀಪಾದ ಭಟ್‌ ಜೋಶಿ ಅವರ ಮೊ. ಸಂಖ್ಯೆ 9972369431.
6. 43-ಗುಲಬರ್ಗಾ (ಗ್ರಾಮೀಣ) ವಿಧಾನಸಭಾ ಕ್ಷೇತ್ರ: ಕಲಬುರಗಿ ಕಮರ್ಶಿಯಲ್‌ ಟ್ಯಾಕ್ಸ್‌ ಆಫೀಸರ್‌ ಬಾಬು ಅವರ ಮೊ. ಸಂಖ್ಯೆ
9448649510.
7. 44-ಗುಲಬರ್ಗಾ (ದಕ್ಷಿಣ) ವಿಧಾನಸಭಾ ಕ್ಷೇತ್ರ: ಕಲಬುರಗಿ ಲೋಕಲ್‌ ಅಡಿಟ್‌ ಸರ್ಕಲ್‌ ಆμàಸಿನ ಜಂಟಿ ನಿರ್ದೇಶಕಿ
ಭಾರತಿ ಜ್ಯೋತಿ ಅವರ ಮೊ. ಸಂಖ್ಯೆ 9901666873.
8. 45-ಗುಲಬರ್ಗಾ (ಉತ್ತರ) ವಿಧಾನಸಭಾ ಕ್ಷೇತ್ರ: ಕಲಬುರಗಿ ಕಮರ್ಶಿಯಲ್‌ ಟ್ಯಾಕ್ಸ್‌ ಕಚೇರಿಯ ಅಡಿಟ್‌ ಸಿ.ಟಿ.ಒ. ಕೃಷ್ಣಾ
ಕುಲಕರ್ಣಿ ಅವರ ಮೊ. ಸಂಖ್ಯೆ 9448505300.
9. 46-ಆಳಂದ ವಿಧಾನಸಭಾ ಕ್ಷೇತ್ರ: ಕಲಬುರಗಿ ಕಮರ್ಶಿಯಲ್‌ ಟ್ಯಾಕ್ಸ್‌ ಕಚೇರಿಯ ಅಕೌಂಟ್‌ ಎಲ್‌.ವಿ.ಒ. ಮಹ್ಮದ್‌ ವಹೀದ್‌
ಅವರ ಮೊ. ಸಂಖ್ಯೆ 9480005854.

ಉಡುಗೊರೆ ಮೇಲೆ ಕಣ್ಣು
ಚುನಾವಣೆ ಸಂದರ್ಭ ಇದಾಗಿರು ವುದರಿಂದ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತದಾರರಿಗೆ ಹಂಚಲೆಂದೆ ಸಾಮಾನ್ಯವಾಗಿ
ಉಡುಗೊರೆ ನೀಡುತ್ತಾರೆ. ಇದಕ್ಕೆಲ್ಲ ಅವಕಾಶ ನೀಡಬಾರದು. ಎಸ್‌.ಎಸ್‌.ಟಿ. ತಂಡ ಹಾಗೂ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಇಂತಹ ಉಡುಗೊರೆಗಳ ಮೇಲೆ 24 ತಾಸು ಕಣ್ಣಿಟ್ಟು ವಶಕ್ಕೆ ಪಡೆಯಬೇಕು ಎಂದು ಚುನಾವಣಾಧಿಕಾರಿ
ವೆಂಕಟೇಶಕುಮಾರ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next