Advertisement

ಪಠ್ಯದ ಜತೆಗೆ ವೃತ್ತಿ ಕೌಶಲ, ಜೀವನ ಸಬಲೀಕರಣ ಕಡ್ಡಾಯ: ಸಚಿವ ಅಶ್ವಥ ನಾರಾಯಣ

04:25 PM Feb 12, 2022 | Team Udayavani |

ಕಲಬುರಗಿ: ವೃತ್ತಿಪರ ಕೋರ್ಸುಗಳಲ್ಲಿ ಹಾಗೂ ಪದವಿಗಳಲ್ಲಿ ವೃತ್ತಿ ಕೌಶಲ ಹಾಗೂ ಜೀವನ ಸಬಲೀಕರಣ ಸಹ ಕಡ್ಡಾಯಗೊಳಿಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಹೇಳಿದರು.

Advertisement

ನಗರದ ಪಿಡಿಎ ಇಂಜನಿಯರಿಂಗ್ ಕಾಲೇಜ್ ದಲ್ಲಿ ಹಮ್ಮಿಕೊಂಡ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು.

ಜಾಗತಿಕವಾಗಿ ನಾವು ಬೆಳೆಯಬೇಕಾದರೆ ಬರೀ ಶಿಕ್ಷಣ ಒಂದೇ ಸಾಲದು.‌ ಅದರ ಜತೆಗೇ ನನಗೆ ಯಾವುದು ಗೊತ್ತಿಲ್ಲ ಎನ್ನುವಂತಾಗಬೇಕು.‌ ಪ್ರಮುಖವಾಗಿ ಜೀವನ‌ ಸಬಲೀಕರಣ ಅಂದರೆ ಹಣ ನಿರ್ವಹಣೆ, ಕಲಿಕೆ ನಿರ್ವಹಣೆ ಸೇರಿದಂತೆ ಇತರ ವೃತ್ತಿ ಕೌಶಲ ಹೊಂದಿರಬೇಕು.‌ ಈ ನಿಟ್ಟಿನಲ್ಲಿ ತರಬೇತಿ ನೀಡಲು ಹಾಗೂ ಉತ್ತಮ ಮಾರ್ಗದರ್ಶನ ನೀಡಲು ಕೆಲವು ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಸಚಿವರು ವಿವರಿಸಿದರು.

ಕಲ್ಯಾಣ ಕರ್ನಾಟಕದಲ್ಲಿ ನಿರುದ್ಯೋಗ ನಿವಾರಣೆಗೆ ಹೆಚ್ಚಿನ ಒತ್ತು ನೀಡಲಾಗುವುದು. ‌ಇದಕ್ಕಾಗಿ ಸ್ಟಾರ್ಟ್ ಪ್ ಬಲಪಡಿಸಲಾಗುದು ಎಂದು ಸಚಿವ ಅಶ್ವಥ್ ನಾರಾಯಣ ಇದೇ ಸಂದರ್ಭದಲ್ಲಿ ಹೇಳಿದರು.

ಕೌಶಲ ವಿವಿ ಸ್ಥಾಪನೆಗೆ ಕೈ ಜೋಡಿಸಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ದತ್ತಾತ್ರೇಯ ಪಾಟೀಲ್ ರೇವೂರ ಸಮಾರಂಭದ ಅಧ್ಯಕ್ಷತೆ ವಹಿಸಿ, ಕಲ್ಯಾಣ ಕರ್ನಾಟಕ ಭಾಗದಲ್ಲಿನ ಯುವಕರು ಹಾಗೂ ವಿದ್ಯಾರ್ಥಿಗಳಲ್ಲಿ ವೃತ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಕೌಶಲ ವಿವಿಗೆ ಕೆಕೆ ಆರ್ ಡಿಬಿ ಮಂಡಳಿಯಿಂದ ಮೂಲ ಸೌಕರ್ಯ ಕಲ್ಪಿಸಲು ಬದ್ದತೆ ಹೊಂದಿದೆ ಎಂದು ಹೇಳಿದರು.

Advertisement

ವಿವಿ ಸ್ಥಾಪನೆಗೆ ಕೌಶಲ ಅಭಿವೃದ್ಧಿ ನಿಗಮ ಕೈ ಜೋಡಿಸಬೇಕೆಂದು ವಿನಂತಿಸಿದ ಅಪ್ಪುಗೌಡ, ಪ್ರಧಾನಿ ಮೋದಿ ಅವರ ಉದ್ಯೋಗ ಸೃಷ್ಟಿಸುವ ಮನೋಬಲಕ್ಕೆ ಕೈ ಜೋಡಿಸುತ್ತಿರುವ ಸಚಿವ ಡಾ. ಅಶ್ವಥ್ ನಾರಾಯಣ ಅವರ ಕಾರ್ಯ ಮಾದರಿಯಾಗಿದೆ ಎಂದು ಶ್ಲಾಘಿಸಿದರು.

ಬೆಂಗಳೂರಿನಲ್ಲಿ ಈ ಭಾಗದಿಂದ ಓದಲು ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು 60 ಕೋ.‌ರೂ ವೆಚ್ಚದಲ್ಲಿ ವಸತಿ ನಿಲಯ ಸ್ಥಾಪಿಸಲಾಗುತ್ತಿದೆ. ಈಗಾಗಲೇ ಮುಖ್ಯಮಂತ್ರಿ ಅವರು ಅಡಿಗಲ್ಲು ನೇರವೇರಿಸಿದ್ದಾರೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next