Advertisement
ಇಸ್ಲಾಮಾಬಾದ್: ಸಾಮಾಜಿಕವಾಗಿ ಹಿನ್ನ°ಡೆಯನ್ನೇ ಕಾಯ್ದುಕೊಂಡಿರುವ ದೇಶವಾದ ಪಾಕಿಸ್ತಾನದಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಇದೇ ಮೊದಲ ಬಾರಿಗೆ ಲೈಂಗಿಕ ಅಲ್ಪಸಂಖ್ಯಾತ ವ್ಯಕ್ತಿಯೊಬ್ಬರು ಇಲ್ಲಿ ಸುದ್ದಿ ವಾಚಕಿಯಾಗಿ ಕಾರ್ಯ ಆರಂಭಿಸಿದ್ದಾರೆ.
ಕೊಹೆನೂರ್ ನ್ಯೂಸ್ ಎಂಬ ವಾಹಿನಿಯಲ್ಲಿ ಇವರು ಸುದ್ದಿ ನಿರೂಪಕಿ. ಮಾರ್ವಿಯಾ ಹೇಳುವಂತೆ ಅವರು ತಮ್ಮ ಬಾಲ್ಯದ ಕನಸನ್ನು ಸಾಕಾರಗೊಳಿಸಿ ಕೊಂಡಿದ್ದಾರೆ. ಮಾರ್ವಿಯಾ ಕಳೆದ ತಿಂಗಳು ವಾಹಿನಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಾಗ ತೃತೀಯಲಿಂಗಿಯೊಬ್ಬರು ವಾರ್ತಾ ವಾಚಕಿಯಾಗುವ ಕುರಿತು ಪರ ವಿರೋಧ ಚರ್ಚೆಗಳು ನಡೆದಿದ್ದವು. ಕಳೆದ ಒಂದು ತಿಂಗಳಿಂದ ಮಾರ್ವಿಯಾ ಸತತವಾಗಿ ಟೀವಿಯಲ್ಲಿ ಸುದ್ದಿ ಓದುತ್ತಿದ್ದಾರೆ. ಜೊತೆಗೆ ತಮ್ಮ ಸಾಧನೆಯಿಂದ ತಾವೂ ಸುದ್ದಿಯಾಗುತ್ತಿದ್ದಾರೆ.
Related Articles
Advertisement