Advertisement

36ರ ವ್ಯಕ್ತಿಗೆ ಏಕಕಾಲಕ್ಕೆ ಕೊರೊನಾ, ಮಂಕಿಪಾಕ್ಸ್‌, ಎಚ್‌ಐವಿ ಪಾಸಿಟಿವ್‌

07:13 PM Aug 25, 2022 | Team Udayavani |

ರೋಮ್‌: ಜಗತ್ತಿನಲ್ಲೇ ಮೊದಲ ಬಾರಿಗೆ ಇಟಲಿಯ 36 ವರ್ಷದ ಯುವಕನೊಬ್ಬನಿಗೆ ಏಕಕಾಲಕ್ಕೆ ಕೊರೊನಾ, ಮಂಕಿಪಾಕ್ಸ್‌ ಹಾಗೂ ಎಚ್‌ಐವಿ ಸೋಂಕು ತಗುಲಿದ ಪ್ರಕರಣ ಈಗ ಬೆಳಕಿಗೆ ಬಂದಿದೆ.

Advertisement

ಸ್ಪೇನ್‌ ಪ್ರವಾಸದಿಂದ ಮರಳಿದ 9 ದಿನಗಳಲ್ಲೇ ಈ ಯುವಕನಿಗೆ ಜ್ವರ, ಗಂಟಲು ನೋವು, ಬಳಲಿಕೆ, ತಲೆನೋವು ಮತ್ತು ತೊಡೆಸಂದಿನಲ್ಲಿ ಉರಿ ಮುಂತಾದ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ರೋಗಲಕ್ಷಣಗಳು ಕಂಡುಬಂದ ಮೂರು ದಿನಗಳಲ್ಲೇ ಈತನಿಗೆ ಕೊರೊನಾ ಪಾಸಿಟಿವ್‌ ಆಗಿರುವುದು ತಿಳಿದುಬಂತು.

ಇದೇ ವೇಳೆ, ಆತನ ಮುಖ ಹಾಗೂ ದೇಹದ ಇತರೆ ಭಾಗದ ಚರ್ಮದಲ್ಲಿ ದದ್ದುಗಳು ಹಾಗೂ ಗುಳ್ಳೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತುರ್ತು ಚಿಕಿತ್ಸಾ ವಿಭಾಗದಲ್ಲಿ ದಾಖಲಿಸಲಾಯಿತು. ಆಗ ಆತನ ಯಕೃತ್ತು, ಸ್ಪ್ಲೀನ್‌ ಮತ್ತಿತರ ಅಂಗಗಳು ಊದಿಕೊಂಡಿರುವುದು ಕೂಡ ಗಮನಕ್ಕೆ ಬಂದಿದೆ. ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದಾಗ, ಆ ವ್ಯಕ್ತಿಗೆ ಕೊರೊನಾ ಮಾತ್ರವಲ್ಲದೇ, ಮಂಕಿಪಾಕ್ಸ್‌ ಸೋಂಕು ಹಾಗೂ ಎಚ್‌ಐವಿ ಸೋಂಕು ಕೂಡ ಇರುವುದು ದೃಢಪಟ್ಟಿದೆ. ಈತ ಫೈಜರ್‌ ಕಂಪನಿಯ ಎಂಆರ್‌ಎನ್‌ಎ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿದ್ದ.

ಮೂರೂ ಸೋಂಕುಗಳಿಗೆ ಚಿಕಿತ್ಸೆ ಆರಂಭಿಸಿದ ಬಳಿಕ ಒಂದೇ ವಾರದಲ್ಲಿ ಈತ ಗುಣಮುಖನಾಗಿ ಡಿಸಾcರ್ಜ್‌ ಆಗಿದ್ದ. ಮಂಕಿಪಾಕ್ಸ್‌ ಮತ್ತು ಕೊರೊನಾ ವರದಿ ನೆಗೆಟಿವ್‌ ಎಂದು ಬಂದಿದ್ದು, ಎಚ್‌ಐವಿ ಸೋಂಕಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ವೈದ್ಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next