Advertisement

ಲವ್‌ ಜೆಹಾದ್‌: ಯುವಕನಿಗೆ 10 ವರ್ಷ ಜೈಲು, ದಂಡ

12:58 AM Dec 23, 2021 | Team Udayavani |

ಲಕ್ನೋ: ಕರ್ನಾಟಕದಲ್ಲಿ  ಮತಾಂತರ ನಿಷೇಧ ಕಾಯ್ದೆಯ ಜಾರಿ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿರುವಂತೆಯೇ ಉತ್ತರ ಪ್ರದೇಶದಲ್ಲಿ ಜಾರಿಯಾಗಿರುವ ಮದುವೆಯಾಗು­ವುದಕ್ಕಾಗಿ ಮತಾಂತರ ಕಾಯ್ದೆಯಡಿ ಮೊದಲ ಶಿಕ್ಷೆ ವಿಧಿಸಲಾಗಿದೆ.

Advertisement

ಯುವಕನೊಬ್ಬನಿಗೆ 10 ವರ್ಷ ಕಠಿನ ಸಜೆ ಮತ್ತು 30 ಸಾವಿರ ರೂ. ದಂಡ ವಿಧಿಸಲಾಗಿದೆ.  ಕಳೆದ ವರ್ಷ ಸಿಎಂ ಯೋಗಿ ಆದಿತ್ಯನಾಥ್‌ ನೇತೃತ್ವದ ಸರಕಾರ ಈ ಕಾಯ್ದೆ ಜಾರಿಗೊಳಿಸಿತ್ತು. ಉತ್ತರ ಪ್ರದೇಶದಲ್ಲಿ ಮದುವೆಯಾಗುವ ಉದ್ದೇಶದಿಂದಾಗಿ ಮತಾಂತರ ನಿಷೇಧ ಅಧ್ಯಾದೇಶ ಅನ್ವಯ ಕಾನ್ಪುರದಲ್ಲಿ ಈ ಪ್ರಕರಣ ದಾಖಲಾಗಿತ್ತು.

2017ರಲ್ಲಿ ಅಪ್ರಾಪೆ¤ಯೊಬ್ಬಳ ಬಳಿ ತನ್ನನ್ನು ಮುನ್ನಾ ಎಂದು ಪರಿಚಯಿಸಿಕೊಂಡು ಆತ ಪ್ರೇಮಿಸುವ ನಾಟಕವಾಡಿದ್ದ ಎಂದು ಆರೋಪಿಸಲಾಗಿತ್ತು. ಆಕೆಯನ್ನು ಮನೆಗೆ ಕರೆದುಕೊಂಡು ಹೋದ ಬಳಿಕ ಯುವಕ ನೈಜ ಹೆಸರು ಹಾಗೂ ಧರ್ಮವನ್ನು ತಿಳಿಸಿ, ನಿಖಾಕ್ಕೆ (ಮದುವೆಗೆ) ಒತ್ತಾಯಿಸಿದ್ದ. ಅದನ್ನು ಆಕೆ ನಿರಾಕರಿಸಿ, ಪೊಲೀಸರಿಗೆ ದೂರು ನೀಡಿದ್ದಳು. ಅದರ ವಿಚಾರಣೆಯಾಗಿ ಯುವಕನಿಗೆ 10 ವರ್ಷ ಕಠಿನ ಸಜೆ ಮತ್ತು  30 ಸಾವಿರ ರೂ. ದಂಡ ವಿಧಿಸಲಾಗಿದೆ.

ಇದನ್ನೂ ಓದಿ:“ಪ್ರಳಯ್‌’ ಪರೀಕ್ಷೆ ಯಶಸ್ವಿ : ಪಯಣದ ಮಧ್ಯೆಯೇ ಪಥ ಬದಲಿಸುವ ಹೊಸ ತಲೆಮಾರಿನ ಕ್ಷಿಪಣಿ

ಅಧ್ಯಾದೇಶದಲ್ಲಿ ಏನಿದೆ?-
-ಯಾರೇ ಆಗಲಿ ಧಾರ್ಮಿಕ ಮೂಲ ಮರೆಮಾಚಿ ಪ್ರಭಾವ, ಬಲವಂತ ದಿಂದ ಮತಾಂತರ ಮಾಡುವಂತಿಲ್ಲ
-ಆಕರ್ಷಣೆ, ಕಪಟ ಮಾರ್ಗಗಳಿಂದ ಮದುವೆ ಮಾಡಿ, ಅನಿವಾರ್ಯತೆಯ ಮತಾಂತರ ಶಿಕ್ಷಾರ್ಹ ಅಪರಾಧ

Advertisement

ಶಿಕ್ಷೆಯ ಪ್ರಮಾಣವೆಷ್ಟು?

-ಬಲವಂತದ ಮತಾಂತರ: ಕನಿಷ್ಠ 1ರಿಂದ 5 ವರ್ಷ ಜೈಲು; ಕನಿಷ್ಠ 15,000 ರೂ.ವರೆಗೆ  ದಂಡ.
-ಅಪ್ರಾಪ್ತರು, ಎಸ್ಸಿ, ಎಸ್ಟಿ ಮಹಿಳೆಯರ ಮತಾಂತರ: 3-10ವರ್ಷ ಜೈಲು
-ಸಾಮೂಹಿಕ ಮತಾಂತರ- 3 ರಿಂದ 10 ವರ್ಷ ಜೈಲು; 50 ಸಾವಿರ ರೂ.ದಂಡ
-ಮತಾಂತರದ ಉದ್ದೇಶದಿಂದ ಮಾತ್ರ ಆಗಿರುವ ಮದುವೆಗಳನ್ನು “ಅಸಿಂಧು’ ಎಂದು ಘೋಷಿಸಲು ಅವಕಾಶ.

Advertisement

Udayavani is now on Telegram. Click here to join our channel and stay updated with the latest news.

Next