ಹೊಸದಿಲ್ಲಿ: ಭಾರತವು ಇದೇ ಮೊದಲ ಬಾರಿಗೆ ಸಣ್ಣ ವಿಮಾನಗಳು ಮತ್ತು ಮನುಷ್ಯ ರಹಿತ ಆಗಸ ಸಂಚಾರಿ ವಾಹನಗಳಿಗೆ ಉಪಯೋಗಿಸುವ ವೈಮಾನಿಕ ಇಂಧನ ತೈಲವನ್ನು ರಫ್ತು ಮಾಡಿದೆ.
ದೇಶದ ಅತೀ ದೊಡ್ಡ ತೈಲ ಸಂಸ್ಕಾರಕ ಮತ್ತು ವಿತರಕ ಇಂಡಿಯನ್ ಆಯಿಲ್ ಸಂಸ್ಥೆಯು ಪಿಸ್ಟನ್ ಎಂಜಿನ್ ಹೊಂದಿರುವ ವಿಮಾನಗಳು ಮತ್ತು ಮನುಷ್ಯರಹಿತ ಆಗಸ ಸಂಚಾರಿ ವಾಹನಗಳಲ್ಲಿ ಉಪಯೋಗಿಸುವ ಎವಿಜಿಎಎಸ್ 100 ಎಲ್‌ಎಲ್ ಇಂಧನ ತೈಲವನ್ನು ಪಪುವಾ ನ್ಯೂಗಿನಿಗೆ ಶನಿವಾರ ಕಳುಹಿಸಿಕೊಟ್ಟಿದೆ.
ರಫ್ತು ಮಾಡಲಾಗಿರುವ ಸರಕಿನಲ್ಲಿ 80 ಬ್ಯಾರಲ್‌ಗಳಲ್ಲಿ ತುಂಬಿಸಿರುವ 16 ಕಿಲೊ ಲೀಟರ್ ಎವಿಜಿಎಎಸ್ ಇಂಧನ ಇತ್ತು. ಭಾರತವು ವೈಮಾನಿಕ ಇಂಧನವಾಗಿರುವ ಎವಿಜಿಎಸ್ ರಫ್ತು ಮಾಡುತ್ತಿರುವುದು ಇದೇ ಪ್ರಥಮ.