Advertisement

24 ಗಂಟೆಗಳಲ್ಲಿ 5 ಕೋಟಿ ರೂ.ಗೂ ಅಧಿಕ ಚುನಾವಣ ಅಕ್ರಮ ಜಪ್ತಿ

10:52 PM Mar 19, 2024 | Team Udayavani |

ಬೆಂಗಳೂರು: ನೀತಿ ಸಂಹಿತೆ ಜಾರಿ ತಂಡಗಳಿಂದ ಚುನಾವಣ ಅಕ್ರಮಗಳ ಬೇಟೆ ಮುಂದುವರಿದಿದ್ದು, ಕಳೆದ 24 ಗಂಟೆಗಳಲ್ಲಿ ನಗದು, ಮದ್ಯ, ಮಾದಕ ವಸ್ತುಗಳು, ಉಚಿತ ಉಡುಗೊರೆಗಳು ಸೇರಿ 5 ಕೋಟಿ ರೂ.ಗೂ ಅಧಿಕ ಚುನಾವಣ ಅಕ್ರಮ ಜಪ್ತಿ ಮಾಡಲಾಗಿದೆ. ಈವರೆಗಿನ ಒಟ್ಟು ಚುನಾವಣ ಅಕ್ರಮ 20.62 ಕೋಟಿ ರೂ. ಆಗಿದೆ.

Advertisement

ಕಳೆದ 24 ಗಂಟೆಗಳಲ್ಲಿ ಚುನಾವಣ ನೀತಿ ಸಂಹಿತೆ ಜಾರಿ ತಂಡಗಳು, ಆದಾಯ ತೆರಿಗೆ ಅಧಿಕಾರಿಗಳು, ಅಬಕಾರಿ ತಂಡಗಳು ಸೇರಿ 1.42 ಕೋಟಿ ನಗದು, 5.45 ಲಕ್ಷ ರೂ. ಮೌಲ್ಯದ ಉಚಿತ ಉಡುಗೊರೆಗಳು, 3.17 ಕೋಟಿ ರೂ ಮೊತ್ತದ 2.37 ಲಕ್ಷ ಲೀಟರ್‌ ಮದ್ಯ, 5.06 ಲಕ್ಷ ಮೌಲ್ಯದ 3.5 ಕೆಜಿ ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಸಂಬಂಧ ನೀತಿ ಸಂಹಿತೆ ಜಾರಿ ತಂಡಗಳು ಹಾಗೂ ಪೊಲೀಸರು 135 ಎಫ್ಐಆರ್‌ಗಳನ್ನು ದಾಖಲಿಸಿಕೊಂಡಿದ್ದು ಅಬಕಾರಿ ಇಲಾಖೆಯು 142 ಗಂಭೀರ ಸ್ವರೂಪದ, 126 ಪರವಾನಗಿ ನಿಯಮ ಉಲ್ಲಂಘಿಸಿದ, 7 ಎನ್‌ಡಿಪಿಎಸ್‌, ಕರ್ನಾಟಕ ಅಬಕಾರಿ ಕಾಯ್ದೆ-1965ರ ಸೆಕ್ಷನ್‌ 15ರಡಿ 531 ಕೇಸ್‌ಗಳನ್ನು ದಾಖಲಿಸಿಕೊಳ್ಳಲಾಗಿದ್ದು, ವಿವಿಧ ಬಗೆಯ 89 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ಚುನಾವಣ ನೀತಿ ಸಂಹಿತೆ ಜಾರಿಗೆ ಬಂದಾಗಿನಿಂದ ಈವರೆಗೆ 1.87 ಕೋಟಿ ನಗದು, 5.45 ಲಕ್ಷ ಮೌಲ್ಯದ ಉಚಿತ ಉಡುಗೊರೆಗಳು, 18.58 ಕೋಟಿ ಮೌಲ್ಯದ 5.94 ಲಕ್ಷ ಲೀಟರ್‌ ಮದ್ಯ, 10.73 ಲಕ್ಷ ಮೌಲ್ಯದ 10 ಕೆಜಿ ಮಾದಕ ವಸ್ತುಗಳು ಸೇರಿ ಒಟ್ಟಾರೆ 20.62 ಕೋಟಿಯಷ್ಟು ಚುನಾವಣಾ ಅಕ್ರಮ ಜಪ್ತಿ ಮಾಡಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಾಣಾಧಿಕಾರಿ ಕಚೇರಿ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next