Advertisement

2030ರಲ್ಲಿ  ಭಾರತ ಸೂಪರ್‌ ಪವರ್‌

01:15 PM Apr 24, 2018 | Team Udayavani |

ಉಡುಪಿ: ಭಾರತ ಆರ್ಥಿಕವಾಗಿ ಸಬಲ ಗೊಳ್ಳುತ್ತಿದೆ. 2030ರಲ್ಲಿ ನಂ.1 ಆರ್ಥಿಕ ಶಕ್ತಿಯಾಗಿ ಹೊಮ್ಮಲಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಮಣಿಪಾಲ ಕಂಟ್ರಿ ಇನ್‌ ಹೊಟೇಲ್‌ ಸಭಾಂಗಣದಲ್ಲಿ ಸೋಮವಾರ ಚಿಂತಕರ ಜತೆ ಸಂವಾದ ನಡೆಸಿದ ಅವರು, ಈಗ ಜಗತ್ತಿನ ಶ್ರೇಷ್ಠ 10 ದೇಶಗಳಲ್ಲಿ ಭಾರತ ಒಂದಾಗಿದೆ. 2030ಕ್ಕೆ ಸೂಪರ್‌ ಪವರ್‌ ಆಗಲಿದೆ ಎಂದರು. 

ರಾಜಕೀಯದ ಗುರಿ ಏನು? 
ಪ್ರಧಾನಿ ಮೇಕ್‌ ಇನ್‌ ಇಂಡಿಯ, ಮೇಡ್‌ ಇನ್‌ ಇಂಡಿಯ ಘೋಷಣೆಯೊಂದಿಗೆ ಮಹತ್ವದ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತರುತ್ತಿದ್ದಾರೆ. ರಾಜಕೀಯ ಪಕ್ಷವಾಗಿ ನಮ್ಮ ಗುರಿ ಕೇವಲ ಸರಕಾರ ಸ್ಥಾಪಿಸುವುದಲ್ಲ, ನಮ್ಮ ರಾಜಕೀಯ ರಾಷ್ಟ್ರ ನಿರ್ಮಾಣಕ್ಕೆ ಎಂದರು. 

ರೈತರ ಆದಾಯ ದ್ವಿಗುಣ ಗುರಿ
ಪ್ರಧಾನಿ ಮೋದಿ ಸಾಮಾಜಿಕ – ರಾಜಕೀಯ ಕಾರ್ಯಕರ್ತ ಎಂಬ ಪರಿಕಲ್ಪನೆಯ ಅನುಸಾರ ಮನೆ ಮನೆ ಗಳಲ್ಲಿ ಶೌಚಾಲಯ ನಿರ್ಮಾಣ, ಸ್ವತ್ಛತಾ ಅಭಿ ಯಾನಕ್ಕೆ ಚಾಲನೆ ನೀಡಿದ್ದಾರೆ. 2020ರಲ್ಲಿ ಕೃಷಿಕರ ಆದಾಯ ದ್ವಿಗುಣಗೊಳ್ಳಬೇಕೆಂಬ ಇರಾದೆಯಿಂದ ಪ್ರಧಾನಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು. 

ರಾಜ್ಯದಲ್ಲಿ 5 ವರ್ಷಗಳಲ್ಲಿ 3,700 ರೈತರ ಆತ್ಮಹತ್ಯೆ ನಡೆದಿದೆ. ಆತ್ಮಹತ್ಯೆ ಮಾಡಿಕೊಳ್ಳದಂತೆ ಕ್ರಮ ಕೈಗೊಳ್ಳಬೇಕು ಎಂದು ಸಿಂಗ್‌ ಆಗ್ರಹಿಸಿದರು. 

Advertisement

ಬಗೆಬಗೆ ಸಮಸ್ಯೆಗಳ ಉಲ್ಲೇಖ
ಉಡುಪಿ ಚೇಂಬರ್‌ ಆಫ್ ಕಾಮರ್ಸ್‌ ಅಧ್ಯಕ್ಷ ಕೃಷ್ಣ ರಾವ್‌ ಕೊಡಂಚ ಜಿಎಸ್‌ಟಿ ನೋಂದಣಿಯಾದವರಿಗೆ ವಿಮಾ ಸೌಲಭ್ಯ ಕೊಡಿಸಬೇಕು ಎಂದರು. ಭಾರ ತೀಯ ಕಿಸಾನ್‌ ಸಂಘದ ಸತ್ಯನಾರಾಯಣ ಉಡುಪ ಅವರು ಕಸ್ತೂರಿರಂಗನ್‌ ವರದಿ, ಸಿಆರ್‌ಝಡ್‌ ಕಾನೂನು, ಕಾಡುಪ್ರಾಣಿ ಹಾವಳಿಯಿಂದ ರೈತರಿಗೆ ನಷ್ಟವಾಗುತ್ತಿದೆ, ಯಾವ ಸರಕಾರಗಳೂ ಸಮಸ್ಯೆ ಬಗೆಹರಿಸುತ್ತಿಲ್ಲ ಎಂದರು. ಬಸ್‌ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್‌, ಪ್ರೊ| ಸದಾಶಿವ ರಾವ್‌, ಅಜಿತ್‌ ಶೆಟ್ಟಿ, ಅಶೋಕ ಕುಮಾರ್‌ ಕೊಡ್ಗಿ, ಅಜಿತ್‌ ಕುಮಾರ್‌ ಶೆಟ್ಟಿ, ದಾವಣಗೆರೆಯ ಈಶ್ವರಿ, ಡಾ| ವಿಜಯೀಂದ್ರ ಪ್ರಶ್ನೆಗಳನ್ನು ಕೇಳಿದರು. ಸ್ಮಾರ್ಟ್‌ ಸಿಟಿ ಬದಲು ಸ್ಮಾರ್ಟ್‌ ವಿಲೇಜ್‌ಗಳನ್ನು ಘೋಷಿಸಬೇಕು, ಪೊಲೀಸ್‌- ಸೈನಿಕರ ವೇತನ ಹೆಚ್ಚಿಸಬೇಕು, ಸಾಮಾನ್ಯ ಕಲ್ಯಾಣ ಮಂಟಪಗಳಿಗೆ ಶೇ. 5 ಜಿಎಸ್‌ಟಿ ವಿಧಿಸಬೇಕು ಇತ್ಯಾದಿ ಬೇಡಿಕೆಗಳನ್ನು ಮಂಡಿಸಲಾಯಿತು. 

ಕೆ. ರಘುಪತಿ ಭಟ್‌ ಸ್ವಾಗತಿಸಿ, ಮಟ್ಟಾರ್‌ ರತ್ನಾಕರ ಹೆಗ್ಡೆ ಪ್ರಸ್ತಾವನೆಗೈದರು. ಶ್ರೀನಾಥ ರಾವ್‌ ನಿರ್ವಹಿಸಿ ದರು. ಶೋಭಾ ಕರಂದ್ಲಾಜೆ, ಕೆ. ಜಯಪ್ರಕಾಶ್‌ ಹೆಗ್ಡೆ, ಕೆ. ಉದಯಕುಮಾರ ಶೆಟ್ಟಿ ಉಪಸ್ಥಿತರಿದ್ದರು. 

ಕಾಂಗ್ರೆಸ್‌-ಭ್ರಷ್ಟಾಚಾರ ನಾಣ್ಯದ ಎರಡು ಮುಖ
ಭ್ರಷ್ಟಾಚಾರ ಮತ್ತು ಕಾಂಗ್ರೆಸ್‌ ಒಂದೇ ನಾಣ್ಯದ ಎರಡು ಮುಖಗಳು ಎನ್ನುವಂತಾಗಿದೆ. ಇಲ್ಲಿರುವುದು ಸಿದ್ದ ಸರಕಾರ ವಲ್ಲ, ನಿದ್ದೆಯ ಸರಕಾರ ಎಂದು ರಾಜನಾಥ್‌ ಸಿಂಗ್‌ ಹೇಳಿದರು. ಕಾರ್ಕಳ ಅಭ್ಯರ್ಥಿ ಸುನಿಲ್‌ ಕುಮಾರ್‌ ನಾಮಪತ್ರ ಸಲ್ಲಿಕೆ ಹಿನ್ನೆಲೆ ಯಲ್ಲಿ ಸೋಮವಾರ ಇಲ್ಲಿಗೆ ಆಗಮಿಸಿದ್ದ ಅವರು ರಾಜ್ಯಕ್ಕೆ 88,000 ಕೋ. ರೂ. ಅನುದಾನ ನೀಡಲಾಗಿದೆ. ಆದರೆ ಅಭಿವೃದ್ಧಿ ಕಾರ್ಯ ನಡೆದಿಲ್ಲ, ಬದಲಾವಣೆಯೂ ಆಗಿಲ್ಲ ಎಂದರು.
ಲೋಕಾಯುಕ್ತ ನ್ಯಾಯಮೂರ್ತಿ ಅವರಿಗೆ ಚೂರಿ ಇರಿತ ರಾಜ್ಯದಲ್ಲಿ ನಡೆದಿದೆ. ಕಾನೂನು ಸುವ್ಯವಸ್ಥೆ ವಿಫ‌ಲವಾಗಿದೆ. ರಾಜ್ಯದಲ್ಲಿಯೂ ಬಿಜೆಪಿ ಸರಕಾರ ಬಂದು ರೈತರ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕಿದೆ ಎಂದರು.

ಶಸ್ತ್ರಾಸ್ತ್ರ  ಸ್ವಾವಲಂಬನೆ: ಸಿಂಗ್‌
ಶಸ್ತ್ರಾಸ್ತ್ರ ಆಮದು ಕಡಿಮೆಗೊಳಿಸಿ, ದೇಶೀಯವಾಗಿ ಉತ್ಪಾದಿಸಲು ಯೋಜನೆ ಸಿದ್ಧಪಡಿಸಲಾಗುತ್ತಿದೆ. ಭದ್ರತೆ ವಿಚಾರದಲ್ಲಿ ರಾಜಿ ಇಲ್ಲ, ಈಗಾಗಲೇ ನಮ್ಮ ಸೈನಿಕರು ನಕ್ಸಲರ ಹತ್ಯೆ ಮಾಡಿದ್ದಾರೆ ಎಂದು ರಾಜನಾಥ್‌ ಸಿಂಗ್‌ ಹೇಳಿದರು. ಬಿಜೆಪಿ ಅಭ್ಯರ್ಥಿ ಹರೀಶ್‌ ಪೂಂಜಾ ನಾಮಪತ್ರ ಸಲ್ಲಿಕೆ ಬಳಿಕ ಬೆಳ್ತಂಗಡಿ ಮಂಜುನಾಥೇಶ್ವರ ಕಲಾಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ  ಮಾತನಾಡಿದರು.

ಯಡಿಯೂರಪ್ಪ ರೈತಪರ ಕಾರ್ಯ ಕೈಗೊಂಡು ರೈತಸ್ನೇಹಿ ಎಂದು ನಿರೂಪಿಸಿ ದ್ದಾರೆ. ಯಡಿಯೂರಪ್ಪ ಅವರನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತಂದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯ ಮಾಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next