ನವದೆಹಲಿ : ದೇಶದ ಮೂರು ಸೇನಾಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಆರು ವರ್ಷಗಳ ಹಿಂದೆ ಹೆಲಿಕಾಪ್ಟರ್ ಅಪಘಾತದಲ್ಲಿ ಪಾರಾಗಿದ್ದ ಘಟನೆ ಈಗ ಮತ್ತೆ ನೆನಪಾಗುತ್ತಿದೆ.
ಬುಧವಾರ ತಮಿಳುನಾಡಿನ ಕೂನುರು ಸಮೀಪ ವಾಯುಸೇನೆಯ ಅತ್ಯಾಧುನಿಕ MI-17 V5 ಪತನಕ್ಕೀಡಾಗಿ ರಾವತ್ ಪತ್ನಿ ಮಧುಲಿಕಾ ಸೇರಿ ಹನ್ನೊಂದು ಮಂದಿ ಬಲಿಯಾದ ಭೀಕರ ದುರಂತ ವೇಳೆಯಲ್ಲಿ ಹಳೆಯ ಕಹಿ ಘಟನೆ ಮತ್ತೆ ನೆನಪಾಗುತ್ತಿದೆ.
ಫೆಬ್ರವರಿ 3, 2015 ರಂದು ನಾಗಾಲ್ಯಾಂಡ್‌ನ ದಿಮಾಪುರ್‌ನಲ್ಲಿ ಪತನಗೊಂಡ ಚೀತಾ ಹೆಲಿಕಾಪ್ಟರ್‌ನಲ್ಲಿ ರಾವತ್ ಇದ್ದರು. ಆ ಸಮಯದಲ್ಲಿ ಅವರು ಲೆಫ್ಟಿನೆಂಟ್ ಜನರಲ್ ಆಗಿದ್ದರು.
ಇದನ್ನೂ ಓದಿ :ಹೆಲಿಕಾಪ್ಟರ್ ದುರಂತ: ಸೇನಾ ಮುಖ್ಯಸ್ಥ ರಾವತ್ ಸ್ಥಿತಿ ಗಂಭೀರ;ಪತ್ನಿ ಸೇರಿ 11 ಮಂದಿ ಶವ ಪತ್ತೆ
ದಿಮಾಪುರದಲ್ಲಿ ಹೆಲಿಕಾಪ್ಟರ್ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿತ್ತು. ಎಂಜಿನ್ ವೈಫಲ್ಯದಿಂದ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಪೈಲಟ್‌ಗಳು ಮತ್ತು ಕರ್ನಲ್ ಕೂಡ ಬದುಕುಳಿದಿದ್ದರು.
ಜನರಲ್ ರಾವತ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರು.