Advertisement
ಪ್ರಜಾಪ್ರಭುತ್ವ ಅಭಿವೃದ್ಧಿ ಕುರಿತ ಸಮಿತಿ (ಎಡಿಆರ್) ಮತ್ತು ರಾಷ್ಟ್ರೀಯ ಚುನಾವಣಾ ವೀಕ್ಷಕ (ಎನ್‌ಇಡಬ್ಲೂé)ರಾಜಕೀಯ ಪಕ್ಷಗಳ ಆದಾಯದ ಕುರಿತಂತೆ ಪರಾಮರ್ಶೆ ನಡೆಸಿದ್ದು, ಒಟ್ಟು ಆದಾಯದ ಕುರಿತ ವರದಿ ಬಿಡುಗಡೆ
ಮಾಡಿದೆ. 2015-16ರಲ್ಲಿ ಬಿಎಸ್‌ಪಿ, ಎನ್‌ಸಿಪಿ, ಸಿಪಿಎಂ, ಸಿಪಿಐ, ಟಿಎಂಸಿಗಳ ಒಟ್ಟು ಆದಾಯ 200.76 ಕೋಟಿ ರೂ.
4.75 ಕೋಟಿ ದಾನಿಗಳಿಂದ ಪಡೆದಿದ್ದು, ಶೇ.66.92ರಷ್ಟು (134.35 ಕೋಟಿ ರೂ.) ಆಸ್ತಿ ಮಾರಾಟ, ಸದಸ್ಯತ್ವ ಶುಲ್ಕ,
ಬ್ಯಾಂಕ್ ಬಡ್ಡಿ ಇತ್ಯಾದಿಗಳಿಂದ ಸಂಗ್ರಹಿಸಿದ್ದಾಗಿದ್ದು, ಉಳಿದ ಶೇ.30.71 (61.66 ಕೋಟಿ ರೂ.) ಅಪರಿಚಿತ ಮೂಲಗಳಿ ಂದ ಸಂಗ್ರಹಿಸಿವೆ. ಬಿಜೆಪಿ, ಕಾಂಗ್ರೆಸ್ ಲೆಕ್ಕಪತ್ರ ಸಲ್ಲಿಸಿಲ್ಲ. ಇದೇ ವೇಳೆ ಕೇಂದ್ರ ಸರ್ಕಾರ ವಿದೇಶಿ ದೇಣಿಗೆ ಮೂಲಗಳನ್ನು ಬಹಿರಂಗ ಪಡಿಸುವಂತೆ ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್ ಮತ್ತು ಆಪ್‌ಗೆ ನೋಟಿಸ್ ಜಾರಿ ಮಾಡಿದೆ.