Advertisement

ಪಾಕ್‌ ಪ್ರಧಾನಿಯಾಗಿ ಇಮ್ರಾನ್‌ ಖಾನ್‌ ಪ್ರಮಾಣ ವಚನ ಆ.14/15ರಂದು ?

05:12 PM Aug 04, 2018 | udayavani editorial |

ಇಸ್ಲಾಮಾಬಾದ್‌ : ಪಾಕಿಸ್ಥಾನದ ನೂತನ ಪ್ರಧಾನಿಯಾಗಲಿರುವ ಪಿಟಿಐ ಪಕ್ಷದ ಮುಖ್ಯಸ್ಥ ಇಮ್ರಾನ್‌ ಖಾನ್‌ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಮುಂದಿನ ಶನಿವಾರ ಆಗಸ್ಟ್‌ 11ರ ಬದಲು ಪಾಕ್‌ ಸ್ವಾತಂತ್ರ್ಯ ದಿನವಾಗಿರುವ ಆ.14ರಂದು ಅಥವಾ ಮರುದಿನ ಆ.15ರಂದು ನಡೆಯುವ ಸಾಧ್ಯತೆ ಇದೆ ಎಂದು ಪಾಕ್‌ ಮಾಧ್ಯಮಗಳು ಹೇಳಿವೆ. 

Advertisement

ಇಮ್ರಾನ್‌ ಖಾನ್‌ ಪ್ರಮಾಣ ವಚನ ಸಮಾರಂಭ ಆ.14ರಂದು ಇಲ್ಲವೇ ಆ.15ರಂದು ನಡೆಯಬೇಕೆಂದು ಪಾಕ್‌ ಉಸ್ತವಾರಿ ಕಾನೂನು ಸಚಿವ ಅಲಿ ಝಫ‌ರ್‌ ಮತ್ತು ಉಸ್ತುವಾರಿ ಪ್ರಧಾನಿ ನಸೀರಲ್‌ ಮುಲ್ಕ್ ಬಯಸಿರುವುದಾಗಿ ಹೇಳಿಕೆ ನೀಡಿರುವುದನ್ನು ಪಾಕಿಸ್ಥಾನದ ಡಾನ್‌ ನ್ಯೂಸ್‌ ವರದಿ ಮಾಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next