Advertisement

ಅಫ್ಘಾನಿಸ್ಥಾನ ಶಾಂತಿ ಪ್ರಕ್ರಿಯೆ ಯಶಸ್ಸಿಗೆ ಸಕಲ ಯತ್ನ: ಇಮ್ರಾನ್‌

04:48 PM Dec 18, 2018 | udayavani editorial |

ಇಸ್ಲಾಮಾಬಾದ್‌ : ಅಫ್ಘಾನಿಸ್ಥಾನ ಶಾಂತಿ ಪ್ರಕ್ರಿಯೆಯನ್ನು ಫ‌ಲಪ್ರದವಾಗಿ ಮುಂದಕ್ಕೊಯ್ಯುವ ನಿಟ್ಟಿನಲ್ಲಿ ತನ್ನಿಂದ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಪಾಕಿಸ್ಥಾನ ಮಾಡಲಿದೆ ಎಂದು ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದಾರೆ.

Advertisement

ಪಾಕ್‌ ಪ್ರವರ್ತನೆಯಲ್ಲಿ ಯುಎಇ ಯಲ್ಲಿ ಅಮೆರಿಕ ಮತ್ತು ತಾಲಿಬಾನ್‌ ನಡುವಿನ ಶಾಂತಿ ಮಾತುಕತೆಗಳು ಸಾಗುತ್ತಿದ್ದು 17 ವರ್ಷಗಳ ರಕ್ತಪಾತದ ಸಂಘರ್ಷವನ್ನು ಕೊನೆಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಇಮ್ರಾನ್‌ ಹೇಳಿದರು. 

ಅಮೆರಿಕ ಮತ್ತು ತಾಲಿಬಾನ್‌ ಈಗಾಗಲೇ ಕನಿಷ್ಠ ಎರಡು ಸುತ್ತಿನ ಮಾತುಕತೆಯನ್ನು ಕತಾರ್‌ ನಲ್ಲಿ ನಡೆಸಿದೆ; ಆದರೆ ಇದೇ ಮೊದಲ ಬಾರಿಗೆ ಅದು ತನ್ನ ರಾಜಕೀಯ ಕಚೇರಿ ಇರುವ ದೋಹಾ ದ ಹೊರಗೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next