Advertisement

ವಿಶ್ವದ ಮುಂದೆ ಪಾಕ್ ಸೈನ್ಯ ಮತ್ತು ಉಗ್ರರ ಸಂಬಂಧವನ್ನು ಒಪ್ಪಿಕೊಂಡ ಇಮ್ರಾನ್

09:42 AM Sep 25, 2019 | keerthan |

ನ್ಯೂಯಾರ್ಕ್: ಪಾಕಿಸ್ಥಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ತನ್ನ ದೇಶದ ಘನ ಕಾರ್ಯದ ಬಗ್ಗೆ ವಿಶ್ವಮಟ್ಟದಲ್ಲಿ ಹೇಳಿಕೊಂಡು ಈಗ ಸುದ್ದಿಯಾಗಿದ್ದಾರೆ. ಆಲ್ ಖೈದಾ ಸೇರಿದಂತೆ ಇತರ ಉಗ್ರ ಸಂಘಟನೆಗಳಿಗೆ ತರಬೇತಿ ನೀಡಿದ್ದೇ  ಪಾಕಿಸ್ಥಾನದ ಸೈನ್ಯ ಎಂದು ಒಪ್ಪಿಕೊಂಡಿದ್ದಾರೆ.

Advertisement

ಅಮೇರಿಕಾದ ನ್ಯೂಯಾರ್ಕ್ ನಲ್ಲಿ ನಡೆದ ಕೌನ್ಸಿಲ್ ಆಫ್ ಫಾರಿನ್ ರಿಲೇಶನ್ ಸಭೆಯಲ್ಲಿ ಮಾತನಾಡುತ್ತಾ ಇಮ್ರಾನ್ ಖಾನ್ ಈ ಹೇಳಿಕೆ ನೀಡಿದರು. ಪಾಕ್ ಸೈನ್ಯ ಮತ್ತು ಗುಪ್ತಚರ ದಳ ಐಎಸ್ ಐ, ಆಲ್ ಖೈದಾ ಸೇರಿದಂತೆ ಉಗ್ರ ಸಂಘಟನೆಗಳಿಗೆ ತರಬೇತಿ ನೀಡಿ ಅಫಘಾನಿಸ್ಥಾನ ವಿರುದ್ಧ ಹೋರಾಡಲು ಕಳುಹಿಸಿತ್ತು. ಹೀಗಾಗಿ ಅವರೊಂದಿಗೆ ನಮಗೆ ಸಂಬಂಧವಿದೆ ಎಂದು ಇಮ್ರಾನ್ ಒಪ್ಪಿಕೊಂಡಿದ್ದಾರೆ.

ಒಸಾಮಾ ಬಿನ್ ಲಾಡೆನ್ ಅಬೋಟಾ ಬಾದ್ ನಲ್ಲಿ ಹೇಗೆ ತಂಗಿದ್ದ ಎಂಬ ಪ್ರಶ್ನೆಗೆ ಉತ್ತರಿಸಿದ ಇಮ್ರಾನ್, ಅಫಘಾನಿಸ್ಥಾನದ ವಿರುದ್ಧ ಹೋರಾಡಲು ನಾವು ಭಯೋತ್ಪಾದಕರಿಗೆ ನೆರವು ನೀಡಿದ್ದೇವೆ. ಹಾಗಾಗಿ ನಮಗೆ ಇದಕ್ಕೆ ಸಂಬಂಧವಿದೆ ಎಂದರು.

ಅಫಘಾನ್ ಹೋರಾಟದ ಬಳಿಕ ನಮ್ಮೊಂದಿಗೆ ಹಿಂದಿರುಗಲು ಎಲ್ಲರೂ ಒಪ್ಪಲಿಲ್ಲ. ನಮ್ಮ ಸೇನೆಯ ಹಲವರು ಇದಕ್ಕೆ ಸಹಕರಿಸಲಿಲ್ಲ. ಹೀಗಾಗಿ ನಮ್ಮೊಳಗೆ ಕೂಡಾ ದಾಳಿಗಳಾದವು ಎಂದು ಇಮ್ರಾನ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next