ನವದೆಹಲಿ: ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಒಬ್ಬ ಚಪ್ರಾಸಿ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಕಟುವಾಗಿ ಟೀಕಿಸಿದ್ದು, ಇಸ್ಲಾಮಾಬಾದ್ ನಲ್ಲಿ ಆಡಳಿತ ನಡೆಸುತ್ತಿರುವವರು ಮಿಲಿಟರಿ, ಐಎಸ್ ಐ ಮತ್ತು ಭಯೋತ್ಪಾದಕರು ಎಂದು ಆರೋಪಿಸಿದ್ದಾರೆ.
ಇಮ್ರಾನ್ ಖಾನ್ ಒಬ್ಬ ಚಪ್ರಾಸಿ(ಗುಮಾಸ್ತ) ಇದ್ದಂತೆ ಅಷ್ಟೇ..ಯಾಕೆಂದರೆ ಪಾಕಿಸ್ತಾನವನ್ನು ನಡೆಸುತ್ತಿರುವವರು ಐಎಸ್ಐ ಮತ್ತು ಉಗ್ರರು. ಹೀಗಾಗಿ ಇಮ್ರಾನ್ ಖಾನ್ ಸರ್ಕಾರದಲ್ಲಿ ಒಬ್ಬ ಚಪ್ರಾಸಿ ಅಷ್ಟೇ ಎಂದು ವ್ಯಂಗ್ಯವಾಡಿದರು.
ಬಹುಶಃ ಪ್ರಧಾನ ಮಂತ್ರಿ ಅಂತ ಕರೆಯುತ್ತಿದ್ದಾರೆ. ಆದರೆ ಆತ ಒಬ್ಬ ಚಪ್ರಾಸಿ ಎಂದು ಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಪಾಕಿಸ್ತಾನಕ್ಕೆ ಸಂಬಂಧಪಟ್ಟಂತೆ ಒಂದೇ ಒಂದು ಪರಿಹಾರ ಇದೆ. ಬಲೂಚಿಗಳಿಗೆ ಪಾಕಿಸ್ತಾನದ ಭಾಗವಾಗೋದು ಇಷ್ಟವಿಲ್ಲ, ಸಿಂಧೀಸ್ ಗೂ ಪಾಕ್ ಜೊತೆ ಹೋಗಲು ಇಷ್ಟವಿಲ್ಲ. ಪಶ್ತುನ್ಸ್ ಗಳಿಗೂ ಕೂಡಾ..ಆ ನಿಟ್ಟಿನಲ್ಲಿ ಪಾಕಿಸ್ತಾನವನ್ನು ನಾಲ್ಕು ಭಾಗವನ್ನಾಗಿ ಪ್ರತ್ಯೇಕಿಸುವುದು ಉತ್ತಮ ಎಂದರು.