Advertisement

ಸೋಲೊಪ್ಪಿಕೊಂಡ ಪಾಕ್‌ ಪ್ರಧಾನಿ

07:44 PM Feb 12, 2022 | Team Udayavani |

ಇಸ್ಲಾಮಾಬಾದ್‌: “ಚುನಾವಣೆಗೂ ಮೊದಲು ಆಶ್ವಾಸನೆ ಕೊಟ್ಟಿದ್ದ, ನವ ಪಾಕಿಸ್ತಾನದ ನಿರ್ಮಾಣದಲ್ಲಿ ನಾನು ಸೋತಿದ್ದೇನೆ’ ಎಂದು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದಾರೆ.

Advertisement

ಇತ್ತೀಚೆಗೆ ಪಾಕ್‌ನಲ್ಲಿ ಅತ್ಯುತ್ತಮ ಕೆಲಸ ಮಾಡಿದ 10 ಮಂತ್ರಿಗಳು ಹಾಗೂ ಇಲಾಖೆಗಳಿಗೆ ಪ್ರಶಸ್ತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ಮಾತನಾಡಿದ ಇಮ್ರಾನ್‌ ಖಾನ್‌, ನಮ್ಮ ಮಂತ್ರಿಗಳು ನಾವು ನಿರೀಕ್ಷಿಸಿದಂತೆ ಕೆಲಸ ಮಾಡಲಿಲ್ಲ. ನಮ್ಮ ವ್ಯವಸ್ಥೆಯೇ ಸರಿ ಇಲ್ಲದ ಕಾರಣ ನಯಾ ಪಾಕಿಸ್ತಾನ ನಿರ್ಮಾಣ ಸಾಧ್ಯವಾಗಲಿಲ್ಲ. ದೇಶದ ಹಿತಾಸಕ್ತಿ ಮತ್ತು ಸರ್ಕಾರದ ನಡುವೆ ಸಂಬಂಧವೇ ಇಲ್ಲ. ಅದೇ ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next