Advertisement
ಶುಕ್ರವಾರ ಮಧ್ಯಾಹ್ನ 12 ಗಂಟೆಯಿಂದ 12.30ರ ವರೆಗೆ ಕಾಶ್ಮೀರಕ್ಕಾಗಿ ಎದ್ದು ನಿಲ್ಲುವ ಮೂಲಕ ನಾವು ಕಾಶ್ಮೀರದ ಜನರೊಂದಿಗೆ ಇದ್ದೇವೆ ಎಂಬ ಸಂದೇಶ ನೀಡಿದ್ದೇವೆ ಎಂದಿರುವ ಇಮ್ರಾನ್ ಖಾನ್, ಪ್ರತಿ ಶಾಲೆ, ವಿ.ವಿ. ಹಾಗೂ ಕಚೇರಿಗಳಲ್ಲಿ ಇದನ್ನು ಪ್ರತೀ ವಾರ ಆಚರಿಸಬೇಕು ಎಂದಿದ್ದಾರೆ. ಇದೇ ವೇಳೆ ಇಡೀ ಜಗತ್ತು ಕಾಶ್ಮೀರ ವಿಚಾರದಲ್ಲಿ ಪಾಕಿಸ್ಥಾನದ ಜತೆಗಿಲ್ಲ ಎಂದು ಹೇಳುವ ಮೂಲಕ ತಮ್ಮ ರಾಜತಾಂತ್ರಿಕ ವೈಫಲ್ಯವನ್ನೂ ಅವರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
ಕಾಶ್ಮೀರದ ಕುಪ್ವಾರದಲ್ಲಿ ಶುಕ್ರವಾರ ಮೊಬೈಲ್ ಸೇವೆಗಳನ್ನು ಭಾಗಶಃ ಆರಂಭಿಸಲಾಗಿದೆ. ಪೋಸ್ಟ್ ಪೇಯ್ಡ ಸಂಪರ್ಕಗಳಿಗೆ ಮಾತ್ರ ಮೊಬೈಲ್ ನೆಟ್‌ವರ್ಕ್ ಲಭ್ಯವಾಗಿದೆ. ಹೊರಹೋಗುವ ಕರೆಗಳಿಗೆ ಇನ್ನೂ ನಿಷೇಧ ಮುಂದುವರಿದಿದೆ ಎಂದು ಮೂಲಗಳು ಹೇಳಿವೆ. ಮೋದಿ ಟೀಕೆ ವೇಳೆ ಕರೆಂಟ್ ಶಾಕ್!
ಪಾಕಿಸ್ಥಾನದ ರೈಲ್ವೇ ಸಚಿವ ಶೇಖ್ ರಶೀದ್ ಅಹಮದ್ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡುತ್ತಿರುವಾಗ ಮೈಕ್‌ನಿಂದ ವಿದ್ಯುತ್ ಶಾಕ್ ಹೊಡೆದಿದೆ. ಕಾಶ್ಮೀರ್ ಹವರ್ ರ್ಯಾಲಿಯಲ್ಲಿ ರಶೀದ್ ಅಹಮದ್ ಮಾತನಾಡುತ್ತಿದ್ದರು. ಮೋದಿ ನಿಮ್ಮ ಉದ್ದೇಶ ಏನು ಎಂದು ನಮಗೆ ಗೊತ್ತಿದೆ. ಎಂದು ಹೇಳುತ್ತಿದ್ದಂತೆಯೇ ಕೈಯಲ್ಲಿ ಹಿಡಿದಿದ್ದ ಮೈಕ್‌ನಿಂದ ಶಾಕ್ ಹೊಡೆದಿದೆ. ಆದರೂ ಭಾಷಣ ಮುಂದುವರೆಸಿ ಮೋದಿಗೆ ಈ ರ್ಯಾಲಿ ತಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.