Advertisement

ಯೋಗಾಭ್ಯಾಸದಿಂದ ದೈಹಿಕ, ಮಾನಸಿಕ ಸಮತೋಲನ ವೃದ್ಧಿ: ರವೀಂದ್ರ

08:34 PM Jun 27, 2019 | Sriram |

ಮಂಜೇಶ್ವರ: ಬದಲಾಗುತ್ತಿರುವ ಜೀವನ ಶೈಲಿಯಿಂದ ರೋಗವನ್ನು ನಿಯಂತ್ರಣದಲ್ಲಿಡಲು ಯೋಗಭ್ಯಾಸದಿಂದ ಮಾತ್ರ ಸಾಧ್ಯ ಎಂಬುದಾಗಿ ಅಧ್ಯಾಪಕ ರವೀಂದ್ರ ಹೇಳಿದರು.

Advertisement

ಬಂಗ್ರ ಮಂಜೇಶ್ವರ ಸರಕಾರಿ ಪ್ರೌಢ ಶಾಲೆಯಲ್ಲಿ ವಿಶ್ವಯೋಗ ದಿನಾಚರಣೆಯಂಗವಾಗಿ ನಡೆದ ಯೋಗ ತರಬೇತಿಯ ಸಮಾರಂಭದಲ್ಲಿ ಅವರು ಮಾತನಾಡಿದರು.

ಯೋಗಭ್ಯಾಸವು ದೈಹಿಕ ಹಾಗೂ ಮಾನಸಿಕ ಸಮತೋಲನವನ್ನು ವೃದ್ಧಿಸುವುದಲ್ಲದೇ, ಉತ್ತಮ ಸಮಾಜ ನಿರ್ಮಾಣದಲ್ಲಿಯೂ ಪ್ರಧಾನ ಪಾತ್ರವಹಿಸುತ್ತದೆ. ಯುವ ಪೀಳಿಗೆಯು ದುಶ್ಚಟ ಗಳನ್ನು ತೊರೆದು ನಿರಂತರ ಯೋಗಭ್ಯಾಸದಲ್ಲಿ ತೊಡಗಿಸಿಕೊಂಡಲ್ಲಿ ರೋಗ ಮುಕ್ತ ಸಮಾಜ ನಿರ್ಮಾಣವಾಗುವುದರಲ್ಲಿ ಎರಡು ಮಾತಿಲ್ಲ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ರೇಣುಕಾ ವಹಿಸಿದ್ದರು. ಪ್ರಭಾರ ಶಿಕ್ಷಕಿ ಗಾಯತ್ರಿ ಯೋಗ ತರಬೇತಿಯನ್ನು ಉದ್ಘಾಟಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ವಿದ್ಯಾರ್ಥಿಗಳಿಗೆ ಯೋಗ ತರಬೇತಿಗಳನ್ನು ನೀಡಿದರು. ಅಧ್ಯಾಪಕರಾದ ಪ್ಯಾಟ್ರಿಕ್‌, ಮೋಹನ ಯು.ಯೋಗ ಪ್ರದರ್ಶನ ನೀಡಿದರು. ಸಮಾರಂಭದಲ್ಲಿ ಸಿಬಂದಿ ಕಾರ್ಯದರ್ಶಿ ಶಾಲಿನಿ ಟೀಚರ್‌,ಪ್ರಸಿದಾ ಟೀಚರ್‌ ಉಪಸ್ಥಿತರಿದ್ದರು. ರಾಜೇಶ್‌ ಮಾಸ್ತರ್‌ ಸ್ವಾಗತಿಸಿದರು. ಸಿಲ್ವಿಯಾ ಟೀಚರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next