Advertisement

ಬಾಲಕೋಟ್ ದಾಳಿ ನಂತರ ಕಾಶ್ಮೀರ ಸಮಸ್ಯೆ ಸುಧಾರಣೆ

01:42 AM Jul 10, 2019 | mahesh |

ನವದೆಹಲಿ: ಪಾಕಿಸ್ತಾನದ ಬಾಲಕೋಟ್‌ನಲ್ಲಿ ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯು ಪಡೆಯು ದಾಳಿ ನಡೆಸಿದ ನಂತರದಲ್ಲಿ ಜಮ್ಮು ಕಾಶ್ಮೀರದಲ್ಲಿ ಒಳನುಸುಳುವಿಕೆ ಪ್ರಕರಣಗಳು ಕಡಿಮೆಯಾಗಿವೆ ಎಂದು ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ ರಾಯ್‌ ಮಂಗಳವಾರ ಲೋಕಸಭೆಗೆ ತಿಳಿಸಿದ್ದಾರೆ.

Advertisement

ಬಾಲಕೋಟ್ ದಾಳಿ ನಂತರ ಒಳನುಸುಳುವಿಕೆ ಪ್ರಕರಣವು ಶೇ.43ರಷ್ಟು ಕಡಿಮೆಯಾಗಿದೆ. ಅಷ್ಟೇ ಅಲ್ಲ, ಗಡಿಯಲ್ಲಿ ಒಳನುಸುಳುವಿಕೆಯನ್ನು ತಡೆ ಯಲು ರಾಜ್ಯ ಸರ್ಕಾರದೊಂದಿಗೆ ಹಲವು ಕ್ರಮ ಗಳನ್ನು ಕೈಗೊಂಡಿದೆ. ಗಡಿಯಲ್ಲಿ ಸೇನಾ ಸಿಬ್ಬಂದಿ ನಿಯೋಜನೆ, ಗಡಿ ಬೇಲಿ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಲಿಖೀತ ಉತ್ತರ ನೀಡಿದ್ದಾರೆ.

ಇದೇ ವೇಳೆ ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ರಾಯ್‌, ಗಡಿಯಲ್ಲಿ ಅಳವಡಿಸಿರುವ ಒಳನುಸುಳುವಿಕೆ ತಡೆ ವ್ಯವಸ್ಥೆ (ಎಐಒಎಸ್‌) ಅತ್ಯಂತ ಸಮರ್ಥ ವ್ಯವಸ್ಥೆಯಾಗಿದೆ. ಇದರಿಂದ ಒಳನುಸುಳುವಿಕೆ ಗಮನಾರ್ಹವಾಗಿ ಇಳಿಕೆಯಾಗಿದೆ. ಈ ವ್ಯವಸ್ಥೆಗೆ ಅಗತ್ಯವಿರುವ ವಿದ್ಯುತ್‌ ಸೌಲಭ್ಯವನ್ನು ಲಭ್ಯವಿದ್ದಲ್ಲಿ ಗ್ರಿಡ್‌ ಮೂಲಕ ಒದಗಿಸಲಾಗುತ್ತಿದೆ ಮತ್ತು ಇತರೆಡೆ ಜನರೇಟರ್‌ಗಳ ಮೂಲಕ ವಿದ್ಯುತ್‌ ಒದಗಿಸಲಾಗುತ್ತಿದೆ ಎಂದಿದ್ದಾರೆ.

ರೈತರ ಸಾವಿಗೆ ಯುಪಿಎ ಕಾರಣ
2008ರಲ್ಲಿ ಅಂದಿನ ಯುಪಿಎ ಸರ್ಕಾರ ರೈತರ 70 ಸಾವಿರ ರೂ.ಗಳ ಸಾಲ ಮನ್ನಾ ಘೋಷಿಸಿದ ಬಳಿಕವೇ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾದವು ಎಂದು ಲೋಕಸಭೆಗೆ ಕೇಂದ್ರ ಕೃಷಿ ಖಾತೆ ಸಹಾಯಕ ಸಚಿವ ಪರುಷೋತ್ತಮ್‌ ರುಪಾಲಾ ಮಾಹಿತಿ ನೀಡಿದ್ದಾರೆ. ಮೆಗಾ ಸಾಲ ಮನ್ನಾ ಯೋಜನೆ ಘೋಷಣೆ ಬಳಿಕ ನಡೆಸಿದ ಆಡಿಟ್‌ನಲ್ಲಿ, ಸಾಲ ಮನ್ನಾ ಪಡೆದವರ ಪೈಕಿ ಅನೇಕರು ರೈತರೇ ಅಲ್ಲ ಎಂಬ ವಿಚಾರ ಬಹಿರಂಗವಾಗಿದೆ ಎಂದೂ ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next