Advertisement

ಹವಾಮಾನ ಬದಲಾವಣೆಯಲ್ಲಿ ಸೂಚ್ಯಂಕದಲ್ಲಿ ಸುಧಾರಣೆ

10:15 AM Dec 12, 2019 | sudhir |

ಸ್ಪ್ಯಾನೀಶ್‌ : ಹವಮಾನ ವೈಪರೀತ್ಯದಿಂದ ದೇಶ ನಲುಗುತ್ತಿದೆ. ತಾಪಮಾನ ಏರಿಳಿತದಿಂದ ಜಾಗತಿಕ ಮಟ್ಟದಲ್ಲಿ ದೇಶಕ್ಕೆ ಪೆಟ್ಟು ಬೀಲುತ್ತಿದೆ ಎಂಬಿತ್ಯಾದಿ ಅಭಿಪ್ರಾಯಗಳು ಕೆಲ ತಿಂಗಳಿನಿಂದ ಕೇಳಿ ಬರುತ್ತಿರುವುದು ಸುಳ್ಳಲ್ಲ. ಆದರೆ ಇಂತಹ ಹೇಳಿಕೆಗಳನ್ನು ತಳ್ಳಿಹಾಕುವಂತಹ ಬೆಳವಣಿಗೆಯೊಂದು ನಡೆದಿದ್ದು, ಹವಾಮಾನ ಬದಲಾವಣೆ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ (ಸಿಸಿಪಿಐ) ಭಾರತ ಬೆಳವಣಿಗೆ ಕಂಡಿದೆ.

Advertisement

ಹವಾಮಾನ ಶೃಂಗಸಭೆಯಲ್ಲಿ ವರದಿ
ಮಂಗಳವಾರ ನಡೆದ ಸಿಒಪಿ25 ಹವಾಮಾನ ಶೃಂಗಸಭೆಯಲ್ಲಿ ಸಿಸಿಪಿಐ ಕುರಿತು ವರದಿಯನ್ನು ಬಿಡುಗಡೆ ಮಾಡಿದ್ದು, ಮೊದಲ ಬಾರಿಗೆ ಅಗ್ರ ಹತ್ತು ಸ್ಥಾನಗಳ ಪಟ್ಟಿಯಲ್ಲಿ ಮೊದಲ ಬಾರಿಗೆ ದೇಶ ಗುರುತಿಸಿಕೊಂಡಿದೆ.

9ನೇ ಸ್ಥಾನ
ಉನ್ನತ ವರ್ಗದ ಪಟ್ಟಿಯಲ್ಲಿ 9 ನೇ ಸ್ಥಾನದಲ್ಲಿರುವ ದೇಶ, ಪ್ರಸ್ತುತ ಬಳಕೆ ಮಾಡುತ್ತಿರುವ ಇಂಧನದ ಪ್ರಮಾಣ ಮತ್ತು ಹೊರಸೂಸುತ್ತಿರುವ ಮಾಲಿನ್ಯದ ಮಟ್ಟದಲ್ಲಿ ಸುಧಾರಣೆ ಕಂಡಿದ್ದು, 2030ರ ಹಸಿರು ಮನೆ ಅನಿಲ ಮಹತ್ವಾಕಾಂಕ್ಷೆ ಯೋಜನೆಯ ಉದ್ದೇಶ ಸಾಧನೆಗಾಗಿ ಪೂರಕವಾದ ವಾತಾವರಣ ಕಲ್ಪಿಸಿಕೊಡುತ್ತಿದೆ ಎಂದು ವರದಿ ಹೇಳಿದೆ.

ಉತ್ತಮ ಅಂಕ
ನವೀಕರಿಸಬಹುದಾದ ಇಂಧನಗಳ ಮರುಬಳಕೆಯಲ್ಲಿ ದೇಶಕ್ಕೆ ಉತ್ತಮ ಅಂಕ ಲಭಿಸಿದ್ದು, ನವೀಕರಿಸಬಹುದಾದ ಇಂಧನ ಬಳಕೆ ಹೆಚ್ಚಿಸುವ (2030)ಗುರಿಯ ಅವಧಿಗಿಂತ 2 ಡಿಗ್ರಿ ಸೆಲ್ಸಿಯಸ್‌ ಹೊಂದಾಣಿಕೆಯಷ್ಟು ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.

ಸಂಶೋಧಕರಿಂದ ಶ್ಲಾಘನೆ
ಅಧ್ಯಯನ ನಡೆಸಿದ ಸಂಧೋಧಕರು ಭಾರತೀಯ ನೀತಿಗಳನ್ನು ಶ್ಲಾ ಸಿದ್ದು, ನವೀಕರಿಸಬಹುದಾದ ಇಂಧನಗಳ ಮರುಬಳಕೆಯನ್ನು ಹೆಚ್ಚಿಸಲು ಮತ್ತು ಈ ಯೋಜನೆಯನ್ನು ಉತ್ತೇಜಿಸಲು ದೇಶ ತೆಗೆದುಕೊಂಡಿರುವ ವಿಸ್ತರಣಾ ನೀತಿಗಳು ಮಹತ್ವಾಕಾಂಕ್ಷೆಯ ಗುರಿಯನ್ನು ಪೂರೈಸಲು ಪೂರಕವಾಗಿದೆ ಎಂದು ಅವರು ತಿಳಿಸಿದ್ದಾರೆ.

Advertisement

ಇನ್ನೂ ಆಸ್ಟ್ರೇಲಿಯಾ, ಸೌದಿ ಅರೇಬಿಯಾ ಮತ್ತು ಯುಎಸ್‌ ಮಾಲಿನ್ಯ ಹೊರಸೂಸುವಿಕೆ,ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಮತ್ತು ಹವಾಮಾನ ನೀತಿಯಲ್ಲಿ ಕಳೆಪೆ ಪ್ರದರ್ಶನ ನೀಡಿದ್ದು, ಉತ್ತಮ ಪ್ರದರ್ಶನಗಳ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ, ಸ್ವೀಡನ್‌, ಡೆನ್‌ಮಾರ್ಕ್‌ ಮತ್ತು ಯುಕೆ ರಾಷ್ಟ್ರಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next