Advertisement

ಸುಧಾರಿತ ಭತ್ತದ ಬೆಳೆ ನಾಟಿ ಪ್ರಾತ್ಯಕ್ಷಿಕೆ

05:47 PM Jan 17, 2022 | Team Udayavani |

ಮಾನ್ವಿ: ರೈತರು ಬೇಸಿಗೆಯಲ್ಲಿ ನೀರಿನ ಕೊರತೆ ಇರುವುದರಿಂದ ಕೃತಕವಾಗಿ ಕಡಿಮೆ ಖರ್ಚಿನಲ್ಲಿ ಸಸಿಗಳನ್ನು ಟ್ರೇಗಳಲ್ಲಿ ಬೆಳೆಸುವುದರಿಂದ 12 ದಿನದಲ್ಲಿ ಸಸಿಯನ್ನು ಭತ್ತನಾಟಿ ಯಂತ್ರ ಬಳಸಿ ನಾಟಿ ಮಾಡಬಹುದು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿ ಮೇಲ್ವಿಚಾರಕ ಪ್ರಕಾಶ್‌ ಕಡ್ಲಿಮಟ್ಟಿ ತಿಳಿಸಿದರು.

Advertisement

ಹಿರೇಕೊಟೆಕಲ್‌ ಗ್ರಾಮದಲ್ಲಿನ ಪ್ರಗತಿಪರ ರೈತ ಮಲ್ಲಿಕಾರ್ಜುನರ ಜಮೀನಿನಲ್ಲಿ ಯಂತ್ರ ಶ್ರೀ ಕಾರ್ಯಕ್ರಮದಡಿ ಸುಧಾರಿತ ಭತ್ತದ ಬೆಳೆ ನಾಟಿ ಮಾಡುವ ಪ್ರಾತ್ಯಕ್ಷಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಟ್ರೇಗಳಿಂದ ಸಸಿಗಳನ್ನು ತೆಗೆದು ಮಡಿಗಳಲ್ಲಿ ಯಂತ್ರದ ಮೂಲಕ ಸಮಾನ ಆಳ ಮತ್ತು ಅಂತರದಲ್ಲಿ ನಾಟಿ ಮಾಡುವುದರಿಂದ ಭತ್ತದ ಬೇರುಗಳು ಆಳವಾಗಿ ಹರಡಿ ಭೂಮಿಯಲ್ಲಿನ ಪೋಷಕಾಂಶಗಳನ್ನು ಬಳಸಿಕೊಂಡು ಸದೃಢವಾಗಿ ಬೆಳೆಯುತ್ತವೆ ಎಂದರು.

ಪೈರಿನಲ್ಲಿ ತೆಂಡೆಗಳ ಸಂಖ್ಯೆ ಹೆಚ್ಚಾಗುತ್ತವೆ. ಸಸಿಗಳ ನಡುವೆ ಉತ್ತಮ ಅಂತರ ಇರುವುದರಿಂದ ಗಾಳಿ-ಬೆಳಕು ಚೆನ್ನಾಗಿ ಸಸಿಗಳಿಗೆ ದೊರೆಯುತ್ತದೆ. ಕಳೆ ತೆಗೆಯಲು ಯಂತ್ರ ಬಳಸಲು ಅನುಕೂಲವಿರುತ್ತದೆ. ಕೇವಲ ಒಂದು ಗಂಟೆಯಲ್ಲಿ ಒಂದು ಎಕರೆ ಮಡಿಯಲ್ಲಿ ಸಸಿ ನಾಟಿ ಮಾಡಬಹುದಾಗಿದೆ. ನಾಟಿ ಮಾಡಿದ ಎಲ್ಲ ಸಸಿಗಳು ಜೀವಂತವಾಗಿರುವುದರಿಂದ ಕಡಿಮೆ ಸಂಖ್ಯೆಯ ಸಸಿಗಳು ಸಾಕಾಗುತ್ತದೆ ಹಾಗೂ ಉತ್ತಮವಾದ ಇಳುವರಿ ಪಡೆಯಲು ಅನುಕೂಲವಾಗುತ್ತದೆ ಎಂದರು.

ತಾಲೂಕು ಸಹಾಯಕ ಕೃಷಿ ನಿರ್ದೇಶಕ ಹುಸೇನ್‌ ಸಾಬ್‌ ಮಾತನಾಡಿ, ಹಿಂಗಾರು ಹಂಗಾಮಿನಲ್ಲಿ ಭತ್ತವನ್ನು ಅಂದಾಜು 12 ಸಾವಿರ ಎಕರೆಯಲ್ಲಿ ರೈತರು ನಾಟಿ ಮಾಡುವ ಸಂಭವವಿದೆ. ಕೃಷಿ ಯಂತ್ರಧಾರೆ ಕೇಂದ್ರಗಳಿಂದ ರೈತರು ಯಂತ್ರಗಳನ್ನು ಬಾಡಿಗೆ ಪಡೆದು ಉತ್ತಮ ಇಳುವರಿ ಪಡೆದುಕೊಳ್ಳುವಂತೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next