Advertisement

ಸುಧಾರಿಸಿದೆ ಆಹಾರ ಉತ್ಪಾದನೆ

10:05 AM Jun 10, 2018 | Team Udayavani |

ಕಾಳಗಿ: ಹಸಿರು ಕಾಂತ್ರಿಯಲ್ಲಿ ಸುಧಾರಿತ ಬೇಸಾಯ ಪದ್ಧತಿ ಅಳವಡಿಸಿಕೊಂಡಿದ್ದರಿಂದ ಆಹಾರ ಉತ್ಪಾದನೆ ಹೆಚ್ಚಾಗಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಜಾಲಿಂದರ ಗುಂಡಪ್ಪ ಹೇಳಿದರು.

Advertisement

ಪಟ್ಟಣದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ರೈತ ಸಂಪರ್ಕ ಕೇಂದ್ರದಿಂದ ಹಮ್ಮಿಕೊಳ್ಳಲಾಗಿದ್ದ 2018-19ನೇ ಸಾಲಿನ
ಸಮಗ್ರ ಕೃಷಿ ಅಭಿಯಾನ ಯೊಜನೆಯಡಿ ರೈತರೊಂದಿಗೆ ವಿಜ್ಞಾನಿಗಳ ಸಂವಾದ ಮತ್ತು ಕೃಷಿ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಜನಸಂಖ್ಯೆಗೆ ಅನುಗುಣವಾಗಿ ಹಸಿರು ಕಾಂತ್ರಿ ಸಮಯದಲ್ಲಿ ಹೊಸ ಬೇಸಾಯ ಪದ್ಧತಿಗಳನ್ನು ಅಳವಡಿಸಿಕೊಂಡು
ನೀರಾವರಿ ಸೌಲಭ್ಯ, ಭೂ ಸುಧಾರಣೆ, ಕೃಷಿ ಯಾಂತ್ರಿಕರಣದಿಂದ ನೂರಾರು ಎಕರೆ ಭೂಮಿಯಲ್ಲಿ ಭೂಸಾಗುವಳಿ ಮಾಡಿ ಹೆಚ್ಚಿನ ಆಹಾರವನ್ನು ಉತ್ಪಾದನೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಬೆಳೆ ರೋಗತಜ್ಞ ದಯಾನಂದ ಮಹಾಲಿಂಗ ಮಾತನಾಡಿ, ಏಷ್ಯಾ ಖಂಡದಲ್ಲಿಯೇ ಅತಿ ಹೆಚ್ಚು ತೊಗರಿ ಬೆಳೆ ಬೆಳೆಯುವ ಪ್ರದೇಶ ಕಲಬುರಗಿ ಜಿಲ್ಲೆಯಾಗಿದ್ದು, ಈ ಭಾಗದ ರೈತರಿಗೆ ತೊಗರಿಯೇ ಆಧಾರವಾಗಿದೆ. ನಿರಂತರವಾಗಿ ತೊಗರಿ ಬೆಳೆ ಬೆಳೆಯುವುದರಿಂದ ನೆಟೆ ರೋಗ ಹರಡುವ ಸಾಧ್ಯತೆಯಿದ್ದು ಎರಡು ಅಥವಾ ಮೂರು ವರ್ಷಕ್ಕೊಮ್ಮೆ ಬೆಳೆ ಬದಲಾವಣೆ ಮಾಡಿ ಸಾವಯುವ ಗೊಬ್ಬರ, ತಿಪ್ಪೆ ಗೊಬ್ಬರ ಹಾಕುವುದರಿಂದ ಈ ರೋಗ ತಡೆಯಬಹುದು ಎಂದು ಸಲಹೆ ನೀಡಿದರು.

ನೆಟೆ ರೋಗ ಹರಡುತ್ತಿರುವ ಹೊಲದಲ್ಲಿ ಟಿಎಸ್‌3ಆರ್‌, ಜಿಆರ್‌ಜಿ 811 ತಳಿಯ ತೊಗರಿ ಬೀಜಗಳನ್ನು ಬೀಜೋಪಚಾರ ಮಾಡಿ ಬಿತ್ತುವುದರಿಂದ ನೆಟೆ ರೋಗ ನಿಯಂತ್ರಿಸಬಹುದು ಎಂದು ಹೇಳಿದರು. ತೋಟಗಾರಿಕಾ ಸಹಾಯಕ ನಿರ್ದೇಶಕ ಜಗದಿಧೀಶ ದರ್ಜೆ ತೋಟಗಾರಿಕೆ ಸೌಲಭ್ಯಗಳ ಕುರಿತು ರೈತರಿಗೆ ಮಾಹಿತಿ ನೀಡಿದರು.

Advertisement

ಪಟ್ಟಣದ ಮಂಜುನಾಥ ಆಗ್ರೋ ಏಜೆನ್ಸಿ ವತಿಯಿಂದ 100ರೈತರಿಗೆ ಬಿಜೋಪಚಾರಕ್ಕಾಗಿ ಉಚಿತವಾಗಿ ರೈಬೊಸಿಯಂ, ಟ್ರೆ„ಕೊರ್ಡಮಾ, ಪಿಎಸ್‌ಬಿ ವಿತರಿಸಲಾಯಿತು. ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರುಚಿ ಕೆಂಗಾಪುರ, ಎಎಒ ಬಸವರಾಜ ಬಂಗರಗಿ, ಚಂದ್ರಕಾಂತ ವನಮಾಲಿ, ಶರಣು ವಚ್ಚಾ, ಮಲ್ಲಿಕಾರ್ಜುನ
ಟೆಂಗಳಿಕರ್‌, ರೈತರಾದ ಅಶೋಕ ಕಲಶೆಟ್ಟಿ, ಶಿವಪುತ್ರಪ್ಪ ಸಣ್ಣೂರ, ಬಂಡಪ್ಪ ತಳವಾರ, ಸೂರ್ಯಕಾಂತ ನೈಕೊಡಿ, ಕಾಳಶೆಟ್ಟಿ ಸಲಗೂರ ಇದ್ದರು. ಕೃಷ್ಣ ಕಟ್ಟಿಮನಿ ಸ್ವಾಗತಿಸಿದರು, ನಾಗರಾಜ ಸಜ್ಜನ ನಿರೂಪಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next