Advertisement
2004ರಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ ಹಾಗೂ ಮಂಗಳೂರು ಮತ್ತು ಬೆಂಗಳೂರು ಹೆದ್ದಾರಿಯ ಬಿ.ಸಿ. ರೋಡ್‌ನಮಧ್ಯದಲ್ಲಿರುವ ಎರಡು ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ, ನಿರ್ವಹಣೆಗಾಗಿ ನ್ಯೂ ಮಂಗಳೂರು ಪೋರ್ಟ್ ರೋಡ್ ಕಂಪೆನಿಯನ್ನು ಅಸ್ತಿತ್ವಕ್ಕೆ ತರಲಾಗಿತ್ತು.
Related Articles
Advertisement
ಹಣದ ಕೊರತೆ
ಇದೀಗ ಸುರತ್ಕಲ್ನಿಂದ ನಂತೂರು ಬಿ.ಸಿ. ರೋಡ್ ಜಂಕ್ಷನ್‌ವರೆಗಿನ 35 ಕಿ.ಮೀ. ರಸ್ತೆ ಎರಡು ವರ್ಷಗಳಿಂದ ಹಣದ ಕೊರತೆಯಿಂದ ನಿರ್ವಹಣೆ ಇಲ್ಲದೆ ನಲುಗುತ್ತಿದೆ.
ಕೂಳೂರಿನಿಂದ ಕೊಟ್ಟಾರ ಚೌಕಿರಸ್ತೆ ಗಮನಿಸಿದರೆ ಪಾದಚಾರಿಗಳು ನಡೆದಾ ಡಲೂ ಜಾಗವಿಲ್ಲದ ಸ್ಥಿತಿಯಿದೆ. ಹೆದ್ದಾರಿ ಬದಿ ಸರ್ವಿಸ್ ರಸ್ತೆ ಮಾಡಿದ್ದರೆ ಇನ್ನೊಂದೆಡೆ ಮಾಡಲು ಭೂಮಿಯ ಕೊರತೆ ಎದುರಾಗಿದೆ. ಭೂಸ್ವಾಧೀನವನ್ನೇ ಮಾಡಲಾಗಿಲ್ಲ. ಇನ್ನು ಕೋಡಿಕಲ್ ತಿರುವಿನಿಂದ ಕೂಳೂರುವರೆಗೆ ಏಕ ಸಂಚಾರದಲ್ಲಿ ಸರ್ವಿಸ್ ರಸ್ತೆ ನಿರ್ಮಿಸಿ ಇಲಾಖೆ ಕೈ ತೊಳೆದುಕೊಂಡಿದೆ. ಕೂಳೂರಿನಿಂದ ಬರುವವರಿಗೆ ಕೋಡಿಕಲ್ ಬಳಿಯೇ ತಿರುಗಿ ಮತ್ತೆ ಚಲಿಸಬೇಕಾಗುತ್ತದೆ. ಇದರಿಂದ ಸಮಯ ವ್ಯರ್ಥ, ಡೀಸೆಲ್ ವ್ಯರ್ಥವಾಗುತ್ತದೆ.
ಮಳೆ ಬಂದರೆ ದ್ವೀಪ!
ಮಳೆ ಏನಾದರೂ ಒಂದೆರಡು ದಿನ ಬಂದರೆ ಕೊಟ್ಟಾರಚೌಕಿ ಪ್ರದೇಶ ಮುಳುಗಡೆಯಾಗುತ್ತದೆ. ರಾಜಕಾಲುವೆ ಸಂಪರ್ಕ ಕೇಂದ್ರವಿರುವುದರಿಂದ ಸುವ್ಯ ವಸ್ಥಿತ ಚರಂಡಿ ಅಗತ್ಯ. ಪ್ರಮುಖ ರಾಜ ಕಾಲುವೆಯೂ ಇಲ್ಲಿ ಸೇರು ವುದರಿಂದ ಮಳೆ ನೀರು ಸರಿಯಾಗಿ ಹರಿಯದೆ ವಿವಿಧ ರೋಗಗಳ ಕೇಂದ್ರ ವಾಗಿಯೂ ಕೊಟ್ಟಾರಚೌಕಿ ಸಮಸ್ಯೆಯನ್ನು ಎದುರಿ ಸುತ್ತಿದೆ.ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲ ಗಳಲ್ಲಿ ಸರ್ವಿಸ್ ರಸ್ತೆ, ಮಳೆ ನೀರು ರಾಜಕಾಲುವೆಗೆ ಸೇರಲು ವ್ಯವಸ್ಥೆ, ಪಾದಚಾರಿಗಳ ಓಡಾಟಕ್ಕೆ ಸೂಕ್ತ ವ್ಯವಸ್ಥೆ ಮಾಡಿ ಕೊಡಬೇಕಿದೆ.
ಸ್ಮಾರ್ಟ್ ಸಿಟಿಗೆ ಸಂಪರ್ಕ ಕಲ್ಪಿಸುವ ಇಲ್ಲಿನ ಹೆದ್ದಾರಿಗಳು ಇದುವರೆಗೂ ಸ್ಮಾರ್ಟ್ ಆಗದಿರುವುದು ನಮ್ಮನ್ನಾಳುವ ಮಂದಿಗೆ ಕಣ್ಣಿಗೆ ಕಂಡಂತಿಲ್ಲ. ಇದರ ಪರಿಣಾಮ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಗುಂಡಿಗಳು ಬಿದ್ದಿವೆ. ಅನೇಕ ಪ್ರಾಣಾಪಾಯಗಳು ಸಂಭವಿಸಿದೆ. ನೂರಾರು ಸವಾರರು ಅಂಗ ವೈಕಲ್ಯವನ್ನು ಹೊಂದಿದ್ದಾರೆ. ಎರಡು ಟೋಲ್ಗಳಿಂದ ಕೋಟಿಗಟ್ಟಲೆ ಟೋಲ್ ಸಂಗ್ರಹ ವಾಗುತ್ತಿದೆ. ಆದರೆ ನಿರ್ವಹಣೆ ಮಾತ್ರ ಆಗುತ್ತಿಲ್ಲ.