Advertisement

ಅಕ್ರಮಗಳ ಮೇಲೆ ನಿರ್ದಾಕ್ಷಿಣ್ಯ ದಾಳಿ: ಐಜಿಪಿ

01:18 AM Mar 19, 2020 | Sriram |

ಕುಂದಾಪುರ: ಸಾರ್ವಜನಿಕರು ಯಾವುದೇ ಅಕ್ರಮಗಳ ಕುರಿತು ನಿರ್ಭೀತಿಯಿಂದ ನೇರ ತಮಗೆ ಮಾಹಿತಿ ನೀಡಬಹುದು. ಮರಳು, ಗಣಿ ಸೇರಿದಂತೆ ಎಲ್ಲ ರೀತಿಯ ಅಕ್ರಮಗಳ ಮೇಲೆ ದಾಳಿ ನಡೆಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳಿಗೆ ಆಸ್ಪದ ನೀಡುವುದಿಲ್ಲ ಎಂದು ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಹೇಳಿದರು.

Advertisement

ಅವರು ಬುಧವಾರ ಇಲ್ಲಿನ ಎಎಸ್‌ಪಿ ಕಚೇರಿಗೆ ಭೇಟಿ ನೀಡಿ ಮಾಧ್ಯಮದ ಜತೆ ಮಾತನಾಡಿದರು.

ಕೋಟ ಠಾಣೆ ಉದ್ಘಾಟನೆಗೆ ಬಾಕಿ ಅಧಿಕಾರ ವಹಿಸಿಕೊಂಡು ಕೆಲವೇ ದಿನಗಳಷ್ಟೇ ಆಗಿದ್ದು ವ್ಯಾಪ್ತಿಯ ಪರಿಚಯ ಹಾಗೂ ಅಧಿಕಾರಿಗಳ ಜತೆ ವಿಚಾರ ವಿನಿಮಯ ನಡೆಸುವ ಸಲುವಾಗಿ ಆಗಮಿಸಿದ್ದೇನೆ ಎಂದ ಅವರು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ಕೋಟ ಠಾಣೆ ಉದ್ಘಾಟನೆಗೆ ಬಾಕಿ ಇರುವ ಕುರಿತು ಕೇಳಿದಾಗ, ಎಸ್‌ಪಿಯಿಂದ ಮಾಹಿತಿ ಪಡೆದುಕೊಂಡರು. ಠಾಣಾ ಕಟ್ಟಡದ ಕಾಮಗಾರಿಯಲ್ಲಿ ಲೋಪ ಉಂಟಾಗಿದ್ದು ಅದನ್ನು ಸರಿಪಡಿಸಿಕೊಡಲು ಸೂಚಿಸಲಾಗಿದೆ. ಇನ್ನು 15 ದಿನದೊಳಗೆ ಉದ್ಘಾಟನೆ ನಡೆಯಲಿದೆ ಎಂದರು.

ನಕ್ಸಲ್‌ ಚಟುವಟಿಕೆ ಕುರಿತು ಸದ್ಯದ ಮಟ್ಟಿಗೆ ಮಾಹಿತಿಗಳಿಲ್ಲ. ಪೊಲೀಸರು ನಿಗಾದಲ್ಲಿ ಇದ್ದಾರೆ. ಚಟುವಟಿಕೆ ಕಂಡುಬಂದರೆ ಅಗತ್ಯಕ್ರಮ ಕೈಗೊಳ್ಳಲಿ ದ್ದಾರೆ. ಆನ್‌ಲೈನ್‌ ಬೆಟ್ಟಿಂಗ್‌ ಕುರಿತು ದೂರುಗಳಿದ್ದು ಎರಡು ಬಾರಿ ಪ್ರಕರಣ ದಾಖಲಿಸಿ ಬ್ಯಾಂಕ್‌ ಖಾತೆಗಳನ್ನು ಮುಟ್ಟುಗೋಲು ಹಾಕಲಾಗಿದೆ. ಆದರೆ ನ್ಯಾಯಾಲಯದ ಮೂಲಕ ಪ್ರಕರಣವೇ ರದ್ದಾಗಿದ್ದು ದೂರುದಾರರೇ ಪ್ರಕರಣ ಹಿಂಪಡೆದಿದ್ದಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ ಮತ್ತೆ ಈ ಕುರಿತು ಕ್ರಮಕೈಗೊಳ್ಳಲಾಗುವುದು. ಗಾಂಜಾ ಮಾರಾಟ ಜಾಲವನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಜರಗಿಸಲಾಗುವುದು. ಮರಳು ದಂಧೆ ವಿರುದ್ಧ ಕಠಿನ ಕ್ರಮ ವಹಿಸಲಿದ್ದೇವೆ. ದಾಳಿಗಳನ್ನು ನಡೆಸಲಿದ್ದೇವೆ ಎಂದವರು ತಿಳಿಸಿದರು.

ಮಹಿಳಾ ಠಾಣೆಗೆ ಬೇಡಿಕೆ
ಮಹಿಳಾ ಠಾಣೆ ಕುಂದಾಪುರಕ್ಕೆ ಅಗತ್ಯ ಎಂಬ ಬೇಡಿಕೆ ಕುರಿತು ಕೇಳಿದಾಗ, ಸದ್ಯ ಜಿಲ್ಲೆಗೊಂದು ಮಹಿಳಾ ಠಾಣೆ ಎಂಬಂತೆ ಉಡುಪಿಯಲ್ಲಿ ಠಾಣೆ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಈ ಕುರಿತು ಪರಿಶೀಲಿಸಿ ಪ್ರಸ್ತಾವನೆ ಸಲ್ಲಿಸಲಾಗುವುದು. ಹೆಡ್‌ಕಾನ್‌ಸ್ಟೆಬಲ್‌, ಸಿಬಂದಿಗಳ ವರ್ಗಾ ವಣೆ ಸದ್ಯಕ್ಕೆ ಇಲ್ಲ. ಯಾವುದಾದರೂ ದೂರು ಗಳಿದ್ದರೆ ಮಾತ್ರ ಅಂತಹ ಸಿಬಂದಿಯನ್ನು ವರ್ಗಾಯಿಸಲಾಗುವುದು. ಉಳಿದಂತೆ ಎಲ್ಲರನ್ನೂ ಅಲ್ಲೇ ಉಳಿಸಿಕೊಳ್ಳಲಾಗುವುದು. ಸಿಬಂದಿ ಕೊರತೆಯಿದ್ದು ಠಾಣೆಗಳಲ್ಲಿ ಕಾನೂನು ಸುವ್ಯವಸ್ಥೆಗೆ ಪೊಲೀಸರ ಸಂಖ್ಯೆ ಕಡಿಮೆ ಇದೆ ಎಂದರು.

Advertisement

ವಾಹನಕ್ಕೆ ಬೇಡಿಕೆ: ತತ್‌ಕ್ಷಣ ಮಂಜೂರು
ಪೊಲೀಸ್‌ ವಾಹನಗಳ ಹಳೆಯದಾದ ಕುರಿತು ಕೇಳಿದಾಗ, ಉಡುಪಿ ಜಿಲ್ಲೆಗೆ ಒಂದು ವಾಹನ ನೀಡಲಾಗಿದ್ದು ಯಾವುದೇ ಠಾಣೆಯಿಂದ ವಾಹನಕ್ಕೆ ಬೇಡಿಕೆ ಬಂದಾಗ ತತ್‌ಕ್ಷಣ ಮಂಜೂರು ಮಾಡಲಾಗುವುದು. ಈ ನಿಟ್ಟಿನಲ್ಲಿ ಸರಕಾರ ಕೂಡಾ ವಾಹನಗಳನ್ನು ನೀಡಲು ವಿಳಂಬ ಮಾಡುತ್ತಿಲ್ಲ ಎಂದರು.

ಕೋವಿಡ್‌ 19 ಕುರಿತು ಸಾರ್ವಜನಿಕರು ಹಾಗೂ ಪೊಲೀಸರು ಕೂಡ ಜಾಗರೂಕತೆ ವಹಿಸಬೇಕು. ಆರೋಗ್ಯದ ಕಾಳಜಿ ಮುಖ್ಯ. ಸರಕಾರದ ನಿರ್ದೇಶನಪಾಲಿಸಬೇಕು. ಹೆಚ್ಚು ಜನ ಒಂದೇ ಕಡೆ ಸೇರು ವಂತಹ ಕಾರ್ಯಕ್ರಮ ಹಮ್ಮಿಕೊಳ್ಳಬಾರದು. ವಿದೇಶಗಳಿಂದ ಆಗಮಿಸಿದವರು ಇದ್ದರೆ ಅಂತಹವರು 14 ದಿನಗಳ ಕಾಲ ಮನೆ ಬಿಟ್ಟು ಸಾರ್ವಜನಿಕ ವಾಗಿ ತೊಡಗಿಸಿಕೊಳ್ಳಬಾರದು ಎಂದರು.

ಉಡುಪಿ ಎಸ್‌ಪಿ ವಿಷ್ಣುವರ್ಧನ್‌, ಕುಂದಾಪುರ ಎಎಸ್‌ಪಿ ಹರಿರಾಮ್‌ ಶಂಕರ್‌ ಉಪಸ್ಥಿತರಿದ್ದರು. ವಿವಿಧ ಠಾಣೆಗಳ ಎಸ್‌ಐಗಳ ಜತೆ ಅವರು ಸಭೆ ನಡೆಸಿದರು. ಐಜಿ ಅವರಿಗೆ ಗೌರವರಕ್ಷೆ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next