Advertisement

ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಮಹತ್ವದ ಸಭೆ, ಸ್ವಾಮೀಜಿಗಳ ಭೇಟಿ

02:23 PM Aug 20, 2022 | Team Udayavani |

ಬೆಂಗಳೂರು : ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾಗಿ ಆಯ್ಕೆಯಾದ ಬೆನ್ನಲ್ಲೇ ಅಖಾಡಕ್ಕೆ ಇಳಿದಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪಕ್ಷವನ್ನು ಚುನಾವಣಾ ಮೂಡ್‌ಗೆ ಅಣಿಗೊಳಿಸಲು ಸಿದ್ಧತೆ ನಡೆಸಿದ್ದಾರೆ.

Advertisement

ಶನಿವಾರ ಬೆಳಗ್ಗೆ ಬಿಜೆಪಿ ಕಚೇರಿಯಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಚುನಾವಣಾ ಸಭೆ ನಡೆದಿದ್ದು, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ , ಸಿಎಂ ಬಸವರಾಜ್‌ ಬೊಮ್ಮಾಯಿ, ಸಂಘಟನಾ ಕಾರ್ಯದರ್ಶಿ ರಾಜೇಶ ಕೂಡಾ ಭಾಗವಹಿಸಿದ್ದಾರೆ. 2018ರ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿಗಳ ಜತೆಗೆ ಈ ಸಭೆ ನಡೆಯುತ್ತಿದೆ.

ಪಕ್ಷದ ಚಟುವಟಿಕೆಯಲ್ಲಿ ಭಾಗವಹಿಸಲು ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಯಡಿಯೂರಪ್ಪ, ವರಿಷ್ಠರು ಅವಕಾಶ ನೀಡುತ್ತಿದ್ದಂತೆ ತಮ್ಮ ಚಟುವಟಿಕೆ ಆರಂಭಿಸಿದ್ದಾರೆ. ಮುಂಬರುವ ದಿನಗಳಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯ ಪ್ರವಾಸ ಮಾಡುವುದಕ್ಕೂ ಅವರು ತೀರ್ಮಾನ ಮಾಡಿದ್ದಾರೆ ಎಂದು ಆಪ್ತ ವರ್ಗ ತಿಳಿಸಿದೆ.

ಇಂದೇ ಅಂತಿಮ
ಇದೆಲ್ಲದರ ಜತೆಗೆ ಸಿಎಂ ಬಸವರಾಜ್‌ ಬೊಮ್ಮಾಯಿ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ ಕಟೀಲ್‌ ಅವರು ನಡೆಸಲಿರುವ ತಲಾ ಐವತ್ತು ಕ್ಷೇತ್ರಗಳ ಪ್ರವಾಸದ ರೂಪುರೇಷೆ ಬಹುತೇಕ ಇಂದೇ ಅಂತಿಮಗೊಳ್ಳಲಿದೆ. ಕಳೆದ ವಿಧಾನಸಭೆಯಲ್ಲಿ ಗೆದ್ದ ಕ್ಷೇತ್ರಗಳು ಹಾಗೂ ಗೆಲುವಿನ ಅಂಚಿನ ವರೆಗೆ ಬಂದ ಕ್ಷೇತ್ರಗಳಲ್ಲಿ ಈ ಪ್ರವಾಸ ನಡೆಯುತ್ತದೆ.

ಮುಖ್ಯಮಂತ್ರಿ ಪ್ರವಾಸ ರಾಜಕೀಯ ದೃಷ್ಟಿಕೋನದಿಂದ ನಡೆಯಲಿದೆ. ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಪ್ರವಾಸ ಸಂಘಟನಾತ್ಮಕವಾಗಿರಲಿದೆ. ಈ ಎರಡೂ ತಂಡದ ಜತೆಗೆ ಬಿ.ಎಸ್.ಯಡಿಯೂರಪ್ಪ ಭಾಗಿಯಾಗಲಿದ್ದು, ಪಕ್ಷ ಹಾಗೂ ಸರಕಾರದ ಸಮತೋಲನಕ್ಕೆ ಅವರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಸಭೆ ಮುಕ್ತಾಯದ ಬೆನ್ನಲ್ಲೇ ಅವರು ಬೆಂಗಳೂರಿನಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ಜತೆಗೂ ಚರ್ಚೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next