Advertisement

ಮತವು ನಿನ್ನದೇ ಮತಿಯು ನಿನ್ನದೆ,

Advertisement

ಯೋಚಿಸಿ ಮತ ಚಲಾಯಿಸು,

ಚುನಾಯಿಸಿ ಯೋಚಿಸಬೇಡ!

ಈ ಮೇಲಿನ ಮಾತು ಎಷ್ಟು ಸೂಕ್ತವೆಂದರೆ ದಗದಗಿಸುತ್ತಿರುವ ಚುನಾವಣೆಯ ಬೇಗೆಯಲ್ಲಿ ಪಕ್ಷಗಳು ನೀಡುವ ಟೊಳ್ಳು ಆಮಿಷಗಳಿಂದ ವಿಮುಖರಾಗಿ ಸಮಾಜನ್ನು ರೂಪಿಸುವ ಸ್ಥಾನದಲ್ಲಿ ನಾವಿದ್ದೇವೆ. ಮತದಾನ ಏಕೆ ಮಾಡಬೇಕು?

ಒಂದು ರೋಗಿಯ ಜೀವ ಉಳಿಸಲು ರಕ್ತದಾನ ಹಾಗೂ ಹಸಿವ ತೀರಿಸಲು ಅನ್ನದಾನವು ,ಸಮಾಜದ ಮೂಲ ಅಡಿಪಾಯಕ್ಕೆ( ಶಿಕ್ಷಣ) ವಿದ್ಯಾದಾನ ಎಷ್ಟು ಮುಖ್ಯವೋ ದೇಶದ ಉಜ್ವಲ ಭವಿಷ್ಯಕ್ಕಾಗಿ ಮತದಾನ ಅಷ್ಟೇ ಮುಖ್ಯ. ಭಾರತ ಅತಿ ದೊಡ್ಡದಾದ ಪ್ರಜಾಪ್ರಭುತ್ವ ಹೊಂದಿರುವ ದೇಶ.

Advertisement

912 ಮಿಲಿಯನ್‌ಗಟ್ಟಲೆ ಬಲಿಷ್ಠ ಸಂಖ್ಯಾ ಮತದಾರ ಬಾಂಧವರಿಂದ ತುಂಬಿದ ದೇಶ ಭಾರತದಲ್ಲಿ ವಿಪರ್ಯಾಸವೆಂದರೆ ಮತ ಚಲಾಯಿಸುತ್ತಿರುವುದು ಕೇವಲ 67 ಶೇಕಡದಷ್ಟು ಮಾತ್ರ. ರಾಜಪ್ರಭುತ್ವವನ್ನು ದಾಟಿ  ಬ್ರಿಟನ್‌ ಕಂಪನಿ ಸರ್ಕಾರಗಳನ್ನು ಮೆಟ್ಟಿ ನಿಂತ ಮೇಲೆ ನಮಗೆ ಸಿಕ್ಕಿದ್ದು ಈ ಪ್ರಜಾಪ್ರಭುತ್ವ ಈ ಪ್ರಜಾಪ್ರಭುತ್ವದ ರಾಯಭಾರಿ ಎಂದೆ ಚುನಾವಣೆಯನ್ನು ಕರೆದರೂ ತಪ್ಪಿಲ್ಲ.

ಕೇವಲ ಹದಿನೆಂಟು ವರ್ಷ ತುಂಬುದರಿಂದ ಒಬ್ಬ ವ್ಯಕ್ತಿ ಮತದಾರನೆನಿಸಿಕೊಳ್ಳಲು ಅರ್ಹನೆನಿಸುವುದಿಲ್ಲ ಬದಲಾಗಿಯಾವ ವ್ಯಕ್ತಿ ಯಾವುದೇ ರೀತಿಯ ಆಮಿಷಗಳಿಗೆ ಒಳಗಾಗದೆ ಪ್ರಾಮಾಣಿಕವಾಗಿ ಮತ ಚಲಾಯಿಸಬಲ್ಲನೇ ಆಥವಾ ಸಾದ್ಯವಿಲ್ಲವೇ ಎನ್ನುದರ ಮೂಲಕವೇ ಒಬ್ಬ ಮತಾದಾರನಾಗಲು ಆರ್ಹ ಇಲ್ಲ ಅನರ್ಹ ಎನ್ನುವುದು ತೀರ್ಮಾನ ಗೊಳ್ಳುತ್ತದೆ.

“ಗೆದ್ದರೆ ನನ್ನ ಬಿಳಿಬಣ್ಣವನ್ನ ನಿಮಗೆ  ಕೊಡುತ್ತೇನೆ ಎಂದಿತಂತೆ ಬೆಳ್ಳಕ್ಕಿ ಕಾಗೆಗಳೆಲ್ಲ ಮತಹಾಕಿ ಕೂತವಂತೆ” ಜನಸಾಮಾನ್ಯರ ಪ್ರಸ್ತುತ ಪರಿಸ್ಥಿತಿಯೂ ಇದೆ ಆಗಿದೆ ಯಾವುದು ಸತ್ಯ ಯಾವುದು ವಾಸ್ತವದಲ್ಲಿ ಆಗಬಹುದು ಅರಿಯದೆ ಯಾವುದೋ  ಪ್ರಣಾಳಿಕೆಯಲ್ಲಿರುವ ಮಾತುಗಳನ್ನ ನಂಬಿಕೊಂಡು ಸಮಾಜದ ನಾಗರಿಕರು ತಮ್ಮ ಮತಗಳನ್ನ ಮಾರಿಕೊಳ್ಳುತಿದ್ದಾರೆ.ಸಮಾಜದ ಭವಿಷ್ಯದ ನಾಗರಿಕರು ಯಾವುದೋ ಮೀಸಲಾತಿಗಳಲ್ಲಿ ಸಾಲಮನ್ನಾಗಳಲ್ಲಿ ಅಥವಾ ಸಹಾಯ ವೇತನಗಳಲ್ಲಿ ತಮ್ಮ ಮತವನ್ನ ಮಾರಿದ್ದಲ್ಲದೇ ಮತ್ತಷ್ಟು ಮನಕರಗಿಸುವ  ಮಾತುಗಳು ಅವರನ್ನು ಸೆಳೆಯುತ್ತದೆ ಮನಸ್ಸನ್ನು ಮತ್ತೂ ಕರಗಿಸಲು  ಸಾರಾಯಿ ಬಟ್ಟೆಗಳ  ಪಾತ್ರವು ಹಿಂದೆ ಸರಿಯುದಿಲ್ಲ.

ಇಲ್ಲಿ ಯೋಚಿಸಬೇಕಾರುವುದು ಸಾರಾಯಿ, ಬಟ್ಟೆ,ಕಾಸು ಒಂದು ದಿನ ಬರಬಹುದು ಎರಡು ದಿನ ಅಬ್ಟಾಬ್ಟಾ ಎಂದರೆ ಎರಡು ತಿಂಗಳು ಬರಬಹುದು ಆದರೆ ಜೀವನಕ್ಕೆ ಇನ್ನೇನಿದೆ ಜೀವನ ಎನ್ನುವುದು ಅನಂತವಾದ ಸಾಗರ ಅದರಲ್ಲಿ ಹನಿ ನೀರು ತುಂಬಿಸಿ ಏನಾಗಬಹುದು?? ಸರ್ಕಾರದಲ್ಲಿರುವ ಯಾವುದೇ ಪಕ್ಷವಾದರೂ ತಮ್ಮ ನಾಗರಿಕರನ್ನು ಸ್ವಾವಲಂಬಿಯಾಗಲು ಪ್ರರೇಪಿಸೇಬೇಕೇ ಹೊರತು ಸರ್ಕಾರದ ಮೇಲೆ ತಮ್ಮೆಲ್ಲ ಹೊಣೆಗಳನ್ನ ಹಾಕಿ ಬೇಜವಾಬ್ದಾರಿ ಯಾಗಲಿಕ್ಕಲ್ಲ, ಜನರು ಆಮಿಷವನ್ನು ನೋಡಿ ಅಲ್ಲ ಬದಲಾಗಿ ನಾವು ಚುನಾಯಿಸುತ್ತಿರುವ ವ್ಯಕ್ತಿಯು ಅರ್ಹನೆ ಅರ್ಹನೆ ಎನ್ನುವುದರ ಮೂಲಕ ಆಯ್ಕೆ ಮಾಡಬೇಕು ಅವನಲ್ಲಿರುವ ಬ್ಯಾಂಕ್‌ ಬ್ಯಾಲೆನ್ಸ್ ಅನ್ನು ಕಂಡಲ್ಲ. ‌

ಸರ್ಕಾರದ ವ್ಯವಸ್ಥೆ ಅತ್ತಿ ಹಣ್ಣಿನಂತಾಗಿ ಬಿಟ್ಟಿದೆ ಹೊರಗಿನಿಂದ ಕೆಂಪು ಕೆಂಪಾಗಿ ಹೊಳೆಯುವ ಸರ್ಕಾರ ಒಳಗಿನ ನೋಟಕ್ಕೆ ಬರೀ ಕೀಟಗಳನ್ನೇ ತುಂಬಿಕೊಂಡಿವೆ, ಕೇಂದ್ರದಲ್ಲಿ ಮಂಜೂರು ಆಗುತಿರುವ ಯೋಜನೆಯ ಫಲಾಂಶ ಅದರ ನಿಜವಾದ ಹಕ್ಕುದಾರನ ಕೈಗೆ ಸೇರುತ್ತಿಲ್ಲ.  ಅರ್ಹ ರಾಜಕಾರಣಿಗೆ ಓಟು ಕೊಟ್ಟರೆ ಅನರ್ಹ ರಾಜಕಾರಣಿಗೆ ಓಟಿನೇಟು ಕೊಡಬೇಕು”. 100 ಆಮಿಷ ಕೊಳಗಾಗುವ ಮತದಾರನಿಗಿಂತ, ಭ್ರಷ್ಟ ನಾಗಿರುವ ರಾಜಕಾರಣಿಯೇ ಲೇಸು ಎನ್ನುವುದು ನನ್ನ ಅಭಿಪ್ರಾಯ.

ಎಲ್ಲಿ ತನಕ ಪ್ರಜೆ ತನ್ನ ಹಕ್ಕನ್ನ ಮಾರುತ್ತಾನೊ ಅಲ್ಲಿಯ ಆಳುವ ನಾಯಕ ಭ್ರಷ್ಟಾಚಾರಿಯಾಗುತ್ತಾನೆ.ಅಲ್ಲಿಯತನಕ   ಭವ್ಯ ಭಾರತ ಕನಸು ತಿರುಕನ ಕನಸಾಗಿಯೇ ಉಳಿಯುತ್ತದೆಯೋ ಹೊರತು ರಾಮರಾಜ್ಯವಾಗದು.ಹಂಸಕ್ಷೀರ ನ್ಯಾಯದಂತೆ ದೇಶದ ನಾಗರಿಕ ಪ್ರಜೆಯಾಗಿ  ಒಳ್ಳೆಯ  ನಾಯಕನನ್ನ ಆಯ್ಕೆ ಮಾಡುವುದು  ನಮ್ಮ ಕೈಯಲ್ಲಿದೆ. ಮತದಾನವಿದು ಪ್ರಜಾಪ್ರಭುತ್ವದ ಹಬ್ಬ. ಪ್ರಾಮಾಣಿಕತೆ  ಹಾಗೂ ನಿರ್ಪಕ್ಷಪಾತಿಯಾಗಿ ಮತ ಚಲಾಯಿಸುವುದರ ಮೂಲಕ ಈ ಹಬ್ಬವನ್ನು ಆಚರಿಸೋಣ.

-ಅಭಿನಯ. ಎ. ಶೆಟ್ಟಿ

ಡಾ| ಬಿ. ಬಿ.. ಹೆಗ್ಡೆ ಪ್ರಥಮ ದರ್ಜೆ ಕಾಲೇಜು , ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next