ಮಹಾನಗರ: ಕುಳಾಯಿ ಸ್ಪಂದನಾ ಫ್ರೆಂಡ್ಸ್ ಸರ್ಕಲ್ ಸಹಯೋಗದಲ್ಲಿ ಮಳೆನೀರುಕೊಯ್ಲು ಬಗ್ಗೆ ವಿಚಾರ ಸಂಕಿರಣ ಆ. 4ರಂದು ಬೆಳಗ್ಗೆ 10 ಗಂಟೆಗೆ ಕುಳಾಯಿ ಶ್ರೀ ವಿಷ್ಣು ಮೂರ್ತಿ ದೇವಸ್ಥಾನದಲ್ಲಿ ನಡೆಯಲಿದೆ. ನಿರ್ಮಿತಿ ಕೇಂದ್ರದ ಯೋಜನ ನಿರ್ದೇಶಕ ರಾಜೇಂದ್ರ ಕಲ್ಬಾವಿ ಮಳೆ ನೀರು ಕೊಯ್ಲು ವಿಷಯದಲ್ಲಿ ವಿಚಾರ ಮಂಡಿಸಲಿದ್ದಾರೆ. ‘ಉದಯವಾಣಿ’ ಅಭಿ ಯಾನದಿಂದ ಪ್ರೇರಿತರಾಗಿ ಈ ವಿಚಾರ ಸಂಕಿರಣವನ್ನು ಆಯೋಜಿಸಲಾಗುತ್ತಿದೆ.
ಮಹಾನಗರ: ಮಂಗಳೂರು ಮ್ಯಾನೇಜ್‌ಮೆಂಟ್ ಅಸೋಸಿಯೇಶನ್ ಮತ್ತು ಎಸ್‌ಡಿಎಂ ಉದ್ಯಮಾಡಳಿತ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ವತಿಯಿಂದ ಎಸ್‌ಡಿಎಂ ಕಾಲೇಜಿನಲ್ಲಿ ಮಳೆಕೊಯ್ಲು ಮಾಹಿತಿ ಕಾರ್ಯಕ್ರಮ ಇತ್ತೀಚೆಗೆ ಜರಗಿತು.
ಮತ್ತಷ್ಟು ನೀರುಳಿತಾಯಕ್ಕೆ ಮಳೆಕೊಯ್ಲು
‘ಉದಯವಾಣಿ’ ಅಭಿಯಾನದ ಪ್ರೇರಣೆಯಿಂದ ಕಿನ್ನಿಗೋಳಿ ಸಮೀಪದ ಬಳಕುಂಜೆಯ ನಿವಾಸಿಗಳಾದ ಫ್ರಾನ್ಸಿಸ್ ಮತ್ತು ಸಿಲ್ವಿಯಾ ಮಿನೇಜಸ್ ಅವರು ತಮ್ಮ ಮನೆ ಅಂಗಳದ ಬಾವಿಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಮಳೆ ನೀರು ಕೊಯ್ಲು ಅಳವಡಿಸಿದ್ದಾರೆ.
ಛಾವಣಿ ನೀರನ್ನು ಶುದ್ಧೀಕೃತಗೊಳಿಸಿ ಪೈಪ್ ಮುಖಾಂತರ ಬಾವಿಗೆ ಬಿಡುವ ವ್ಯವಸ್ಥೆಯನ್ನು ಮಾಡಿಕೊಂಡಿದ್ದು, ನೀರುಳಿತಾಯಕ್ಕೆ ಸರಳ ಹಾದಿಯನ್ನು ಕಂಡುಕೊಂಡಿದ್ದಾರೆ.
ಅವರು ಕೆಲವು ವರುಷಗಳ ಹಿಂದೆಯೇ ತಮ್ಮ 1.5 ಎಕ್ರೆ ಜಮೀನಿನಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಮಳೆಗಾಲದ ನೀರನ್ನು ಇಂಗಿಸುವ ಕ್ರಮವನ್ನು ಕಾರ್ಯಗತ ಮಾಡಿ ಅಂತರ್ಜಲ ಮಟ್ಟ ಕಾಪಾಡಲು ಸಹಕಾರಿಯಾಗಿದ್ದಾರೆ. ಇದರಿಂದಾಗಿ ಅವರ ಕೃಷಿಗೆ ಸಾಕಷ್ಟು ನೀರಿನ ಲಭ್ಯತೆ ಇದೆ. ಫ್ರಾನ್ಸಿಸ್ ಅವರು ತಮ್ಮ ಜಲಯೋಧರ ತಂಡದ ಮೂಲಕ ತಮ್ಮ ಪರಿಸರದಲ್ಲಿ ಜಲ ಸಾಕ್ಷರತೆಯನ್ನು ಹೆಚ್ಚಿಸಲು ಪ್ರಯತ್ನ ಮಾಡುತ್ತಿದ್ದಾರೆ. ಶಿಕ್ಷಕಿಯಾದ ಸಿಲ್ವಿಯಾ ಮಿನೇಜಸ್ ಅವರು ತಮ್ಮ ವಿದ್ಯಾರ್ಥಿಗಳಿಗೆ ಜಲ ಮತ್ತು ಪರಿಸರ ಸಂರಕ್ಷಣೆ ಮಾಡುವ ಬಗ್ಗೆ ಹೆಚ್ಚಿನ ಪ್ರೇರಣೆ ನೀಡುತ್ತಾರೆ.