ದೇವನಹಳ್ಳಿ: ರಾಜ್ಯದಲ್ಲಿ ಕೋವಿಡ್ ಸೋಂಕು ಆತಂಕ ಸೃಷ್ಟಿಸಿರುವ ವೇಳೆ ಶಾಲೆಗಳು ಬಂದ್ ಆಗಿದ್ದರೂ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಕಲಿಕೆಯಿಂದ ದೂರ ಉಳಿಯ ಬಾರದೆಂದು ಸರ್ಕಾರ ಜಾರಿಗೆ ತಂದಿರುವ “ವಿದ್ಯಾ ಗಮ’ ಕಾರ್ಯಕ್ರಮ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿದೆ.
ವಿದ್ಯಾರ್ಥಿಗಳಲ್ಲಿ ಸ್ವಯಂ ಕಲಿಕಾ ತಂತ್ರ ರೂಪಿಸಲು ಪಠ್ಯ ಪುಸ್ತಕ, ಅಭ್ಯಾಸ ಪುಸ್ತಕ ಸೇರಿ ಎಲ್ಲಾ ಬಗೆಯ ಕಲಿಕಾ ಸಾಮಗ್ರಿ ಗಳನ್ನು ಮನೆಗೆ ತಲುಪಿಸುವ ಕೆಲಸ ಪ್ರಾರಂಭಿಸಿದೆ. ಶಿಕ್ಷಕರು ಶಾಲಾ ಉಸ್ತುವಾರಿ ಸಮಿತಿ ಸದ ಸ್ಯರು, ಸ್ವಯಂ ಸೇವಕರು ಹಾಗೂ ಪೋಷಕ ರನ್ನು ಈ ಯೋಜನೆಯಡಿ ನಿಯೋಜಿಸಲಾಗಿದೆ. “ವಿದ್ಯಾಗಮ’ ಯೋಜನೆಯಡಿ ಕಲಿಕಾ ಕಾರ್ಯಕ್ರಮ ರೂಪಿಸಿದ್ದರೂ ಕಡ್ಡಾಯವಾಗಿ ಎಲ್ಲರೂ ಕೋವಿಡ್ ನಿಯಮ ಪಾಲಿಸಬೇಕು. ಮಾಸ್ಕ್, ಮುಖ್ಯವಾಗಿ ಸಾಮಾಜಿಕ ಅಂತರ, ಸ್ಯಾನಿ ಟೈಸರ್ ಕಡ್ಡಾಯವಾಗಿ ಬಳಕೆ ಆಗ ಬೇಕಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ.
ಪ್ರತಿ ಶಾಲಾ ವ್ಯಾಪ್ತಿಯಲ್ಲಿ 20-25 ಮಕ್ಕಳಿಗೆ ಮಾರ್ಗದರ್ಶಿ ಶಿಕ್ಷಕರನ್ನು ನೇಮಿಸಲಾಗುವುದು. ವಿದ್ಯಾರ್ಥಿಗಳು ವಾಸವಿರುವ ಸ್ಥಳ ಆಧಾರಿಸಿ ಅಂತಹ ಮಕ್ಕಳನ್ನು ಒಗ್ಗೂಡಿಸಿ ಮಾರ್ಗದರ್ಶಿ ಶಿಕ್ಷಕರ ಮೂಲಕ ಕಲಿಕೆ ಪ್ರಾರಂಭಿಸಲಾಗುವುದು. ಇಂತಹ ಶಿಕ್ಷಕರು ನೆರೆ ಹೊರೆ ಮಕ್ಕಳನ್ನು ಒಗ್ಗೂಡಿಸಿ ಚಿಕ್ಕ ತಂಡಗಳನ್ನು ರೂಪಿಸಿ ನೆರೆ ಹೊರೆ ಗುಂಪು ಎಂಬ ಹೆಸರಿನಲ್ಲಿ ಕಲಿಕೆ ಆರಂಭಿಸುವುದು “ವಿದ್ಯಾಗಮ’ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಕಲಿಕೆಯಿಂದ ಸರ್ಕಾರಿ ಶಾಲೆ ಮಕ್ಕಳು ಹಿಂದುಳಿಯುತ್ತಿರುವುದು ಆತಂಕ ಎದುರಾದ ಹಿನ್ನೆಲೆಯಲ್ಲಿ ಸರ್ಕಾರ ರೂಪಿಸಿರುವ ಯೋಜ ನೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಸಿದ್ಧತೆ ಪ್ರಾರಂಭವಾಗಿದೆ. ಶಾಲೆಗಳು ಮರು ಪ್ರಾರಂಭಗೊಳ್ಳು ವವರೆಗೆ ಆಯಾ ಶಾಲಾ ವ್ಯಾಪ್ತಿಯ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ ವಾಗಲು ಶಿಕ್ಷಕರನ್ನು ಸಿದ್ಧಗೊಳಿಸಲಾಗುತ್ತಿದೆ.
ಶಿಕ್ಷಕರಿಗೆ ಪೋಷಕರಿಂದಲೂ ಮೆಚ್ಚುಗೆ: ಗಂಗಮಾರೇಗೌಡ “ವಿದ್ಯಾಗಮ’ ಯೋಜನೆಯನ್ನು ಸಮರ್ಪಕವಾಗಿ ಜಿಲ್ಲೆಯಲ್ಲಿ ಅನುಷ್ಠಾನ ಗೊಳಿಸಲು ಅಗತ್ಯ ಸಿದ್ಧತೆ ನಡೆಸಲಾಗಿದೆ. ಜಿಲ್ಲೆಯ ನಾಲ್ಕು ತಾಲೂಕುಗಳ ಬಿಇಒಗಳೊಂದಿಗೆ ಚರ್ಚಿಸಿದ್ದು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳು ಕಲಿಕೆಯಿಂದ ದೂರ ಉಳಿಯಬಾರದೆಂಬ ದೂರದೃಷ್ಟಿಯಿಂದ ಸರ್ಕಾರ ರೂಪಿಸಿರುವ ಯೋಜನೆಗೆ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗಂಗಮಾರೇಗೌಡ ತಿಳಿಸಿದ್ದಾರೆ.
–ಎಸ್ ಮಹೇಶ್