Advertisement

ನ್ಯಾ.ಸದಾಶಿವ ಆಯೋಗ ವರದಿ ಜಾರಿ ಅನಿವಾರ್ಯ

12:51 PM Dec 11, 2022 | Team Udayavani |

ನೆಲಮಂಗಲ: ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ನ್ಯಾ.ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಲೇಬೇಕು ಎಂದು ಬಿಜೆಪಿಜಿಲ್ಲಾ ಉಪಾಧ್ಯಕ್ಷ ಬಿ.ಹೊಂಬಯ್ಯ ತಿಳಿಸಿದರು.

Advertisement

ನಗರದ ಕವಾಡಿ ಮಠದಿಂದ ನಗರದ ಮುಖ್ಯಬೀದಿಗಳಲ್ಲಿ ದಲಿತ ಸಂಘಟನೆಗಳಮುಖಂಡರ ನೇತೃತ್ವದಲ್ಲಿ ಸದಾಶಿವ ಆಯೋಗ ಜಾರಿಗೆ ಒತ್ತಾಯಿಸಿ, ಹರಿಹರದಿಂದ ಆರಂಭವಾಗಿರುವ ಪಾದಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದಅವರು, ಪ.ಜಾತಿಯ ಕೆಲವು ಸಮುದಾಯಗಳು ರಾಜಕೀಯವಾಗಿ ಶೈಕ್ಷಣಿಕವಾಗಿ ಪ್ರಾತಿನಿಧ್ಯತೆ ಹೊಂದಿರುವುದಿಲ್ಲ ಎಂಬ ಅಂಶಗಳು ಈಗ ಬಹಿರಂಗಗೊಂಡಿದೆ.

ಪ.ಜಾತಿಗಳ ಒಳಮೀಸಲಾತಿ ಜಾರಿಗಾಗಿ ರಾಜ್ಯ ಪ.ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟಸಮಿತಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಡಿ.11ರಂದು ನಡೆಯಲಿರುವ ಬೃಹತ್‌ಸಮಾವೇಶಕ್ಕೆ ನಾವೆಲ್ಲರೂ ಸಂಪೂರ್ಣ ಬೆಂಬಲ ನೀಡಲಿದ್ದೇವೆ ಎಂದರು.

ನಾವುಗಳು ಎಲ್ಲಾ ರಾಜಕೀಯ ಪಕ್ಷಗಳಿಗೆ ಎಚ್ಚರಿಸುವ ಹಾಗೂ ಎಚ್ಚರಿಕೆ ನೀಡುವ ಸಲುವಾಗಿಸಮುದಾಯದ ಎಲ್ಲಾ ಮುಖಂಡರು ವಿವಿಧ ಸಂಘಗಳ ಪದಾಧಿಕಾರಿಗಳು ಬೃಹತ್‌ ಪಾದಯಾತ್ರೆಯ ಹೋರಾಟಕ್ಕೆ ಧುಮುಕಿದ್ದು, ಪ್ರತಿಯೊಬ್ಬರೂ ಸಮಾವೇಶಕ್ಕೆ ಬೆಂಬಲ ನೀಡಿ ಭಾಗವಹಿಸಬೇಕು ಎಂದು ಹೇಳಿದರು.

ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಬಿ.ಆರ್‌. ಭಾಸ್ಕರ್‌ ಪ್ರಸಾದ್‌ ಮಾತನಾಡಿ, ಯಥಾಸ್ಥಿತಿ ನ್ಯಾ.ಸದಾಶಿವ ಆಯೋಗದ ವರದಿ ಅನುಷ್ಠಾನ ಮಾಡಬೇಕು. ಇಲ್ಲ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಸರ್ಕಾರ ಸಚಿವರು ತಮ್ಮ ಖುರ್ಚಿ ಖಾಲಿ ಮಾಡಲಿ. ಬೃಹತ್‌ ಸಮಾವೇಶಕ್ಕೆ ಸ್ವಯಂ ಆಸಕ್ತಿವಹಿಸಿ ಭಾಗವಹಿಸಿ ಸರ್ಕಾರಕ್ಕೆ ನೇರವಾಗಿ ಎಚ್ಚರಿಕೆ ನೀಡ ಬೇಕು. ನಮ್ಮ ಹಕ್ಕು ಪಡೆಯಬೇಕು ಎಂದರು.

Advertisement

ಮಳೆಯಲ್ಲೇ ಪಾದಯಾತ್ರೆ: ಸದಾಶಿವ ಆಯೋಗದ ವರದಿಗೆ ಆಗ್ರಹಿಸಿ ನಡೆಸಿದ ಪಾದಯಾತ್ರೆಗೆ ಬೆಳಗ್ಗೆ ಮಳೆ ಬಂದು ಅಡ್ಡಿ ಪಡಿಸಿತ್ತು, ಆದರೆ, ಮಳೆಗೂ ಜಗ್ಗದೇ ಹೋರಾಟಗಾರರು ಕೊಡೆಹಿಡಿದು ನಗರದ ಮುಖ್ಯರಸ್ತೆಗಳಲ್ಲಿ ಪಾದಯಾತ್ರೆಯನ್ನು ಮಾಡುವ ಮೂಲಕ ಬೆಂಗಳೂರಿನ ಕಡೆ ಪಯಣ ಆರಂಭಿಸಿದರು.

ಆಮ್‌ ಆದ್ಮಿ ಟಿಕೆಟ್‌ ಆಕಾಂಕ್ಷಿ ಗಂಗಬೈಲಪ್ಪ, ಬಿಜೆಪಿ ಮುಖಂಡ ವೆಂಕಟೇಶ್‌ ದೊಡ್ಡೇರಿ, ಮಾದಿಕ ಸಂಘದ ತಾಲೂಕು ಅಧ್ಯಕ್ಷ ಕನಕರಾಜು, ಮುಖಂಡ ಚಲುವರಾಜು, ದೀಪಕ್‌ ಕಿರಣ್‌, ಮಹದೇವ್‌, ನಾಗರಾಜು ನರಸಿಂಹಯ್ಯ, ಮಲ್ಲೇಶ್‌, ಗ್ರಾಪಂ ಸದಸ್ಯ ರಂಗಸ್ವಾಮಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next