Advertisement
ರಾಜ್ಯದಲ್ಲಿ ಅನುಷ್ಠಾನಕ್ಕೆ ಬಂದಿರುವ ರೈತ ಉತ್ಪಾದಕ ಸಂಸ್ಥೆಯ (ಪಿಎಫ್‌ಒ)ಸ್ವರೂಪದಲ್ಲಿ ಮೀನುಗಾರರಿಗೆ ಸೀಮಿತವಾಗಿ ಮೀನು ಕೃಷಿಕರ ಉತ್ಪಾದಕ ಸಂಸ್ಥೆ (ಎಫ್‌ಎಫ್‌ಪಿಒ) ರಚಿಸಲಾಗುತ್ತದೆ. ಈ ಮೂಲಕ ಮೀನು ಕೃಷಿಕರಿಗೆ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನೀಡಲು ಸಂಸ್ಥೆ ಸಹಕಾರ ನೀಡಲಿದೆ.
Related Articles
ಉತ್ಪಾದಕರಾಗಿರುವ ಮೀನುಗಾರರ ಉತ್ಪನ್ನಗಳಿಗೆ ಹಲವು ಬಾರಿ ಸೂಕ್ತ ಬೆಲೆ ಪಡೆಯಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಉತ್ಪಾದಕರ ಸಂಸ್ಥೆಗಳ ರಚನೆಯು ಉತ್ಪಾದಕರ ಸಂಘಟನೆಗೆ ಕಾರಣವಾಗುತ್ತದೆ. ಇದರಿಂದ ಉತ್ಪಾದಕರು ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆಗಾಗಿ ಒಗ್ಗಟ್ಟಿನಿಂದ ಎದುರಿಸಬಹುದು. ಈ ಮೂಲಕ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಸಾಧ್ಯ. ಹಾಗೂ ಉತ್ಪಾದಕ ಸಂಸ್ಥೆಗಳ ಮೂಲಕ ಗುಣಮಟ್ಟದ ಪರಿಕರ, ಯಂತ್ರಗಳು, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬಹುದಾಗಿದೆ. ಈ ಮೂಲಕ ಉತ್ಪಾದನೆಗೆ ಸೂಕ್ತ ಬೆಲೆ ದೊರಕಿಸಿ ಸದಸ್ಯರ ಆದಾಯ ಹೆಚ್ಚಿಸಬಹುದು.
Advertisement
ಸರಕಾರದ ಅಭಿವೃದ್ಧಿ ಇಲಾಖೆ, ವಿ.ವಿ., ಸರಕಾರೇತರ ಸಂಸ್ಥೆಗಳು, ಸಾರ್ವಜನಿಕ-ಖಾಸಗಿ ಪಾಲುದಾರರೊಂದಿಗೆ ಸಂಬಂಧ ವೃದ್ಧಿಸುವ ಮೂಲಕ ಉತ್ಪಾದಕ ಸಂಸ್ಥೆಗಳ ಪ್ರಭಾವ ಹೆಚ್ಚಿಸಬಹುದು. ನವೀನ ಕಲಿಕೆಯನ್ನು ರಾಜ್ಯಕ್ಕೆ ಹಾಗೂ ಸಹಭಾಗಿ ಸಂಸ್ಥೆಗಳಿಗೆ ನೀಡಲು ಪ್ರಖ್ಯಾತ ಸಂಸ್ಥೆಗಳೊಂದಿಗೆ ಸಹಯೋಗ ಬೆಳೆಸಬಹುದಾಗಿದೆ.
750 ವಿವಿಧ ಉತ್ಪಾದಕ ಸಂಸ್ಥೆರೈತರು, ಮೀನುಗಾರರು, ನೇಕಾರರ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರಾಟಕ್ಕೆ ರಾಜ್ಯದಲ್ಲಿ 750 ಉತ್ಪಾದಕರ ಸಂಸ್ಥೆಗಳನ್ನು ಸ್ಥಾಪಿಸಲು ಸರಕಾರ ಈಗಾಗಲೇ ಅನುಮೋದನೆ ನೀಡಿದೆ. ಈ ಪೈಕಿ ಉತ್ಪಾದಕ ಸಂಸ್ಥೆಗಳ ಇಲಾಖಾವಾರು ಹಾಗೂ ವರ್ಷವಾರು ಗುರಿ ನಿಗದಿ ಮಾಡಲಾಗಿದೆ. ಈ ಪೈಕಿ ಮೀನುಗಾರಿಕೆ ಇಲಾಖೆಗೆ ಒಟ್ಟು 93 ಸಂಸ್ಥೆಯ ವಾರ್ಷಿಕ ಗುರಿ ನಿಗದಿ ಮಾಡಲಾಗಿದೆ. ಈಗಾಗಲೇ ವಿವಿಧ ಜಿಲ್ಲೆಗಳಿಂದ 15 ಎಫ್‌ಎಫ್‌ಪಿಒಗಳನ್ನು ನೋಂದಣಿ ಮಾಡಲಾಗಿದೆ. ಸಂಸ್ಥೆಯಲ್ಲಿ 100 ಮಂದಿ
ಕನಿಷ್ಠ 100 ಮಂದಿಯ ಸೇರುವಿಕೆಯಿಂದ ಮೀನು ಕೃಷಿಕರ ಉತ್ಪಾದಕ ಸಂಸ್ಥೆ ಸ್ಥಾಪನೆಗೆ ಅವಕಾಶ ಕಲ್ಪಿಸಲಾಗಿದೆ. ಮೀನು ಕೃಷಿಯ ಉತ್ಪಾದನೆ ಹಾಗೂ ಮಾರಾಟಕ್ಕೆ ಈ ಸಂಸ್ಥೆಯಿಂದ ಲಾಭವಾಗಲಿದೆ. ಮುಂಬರುವ ದಿನಗಳಲ್ಲಿ ವಿವಿಧ ಕಡೆಗಳಲ್ಲಿ ಇಂತಹ ಸಂಸ್ಥೆ ರಚಿಸಲು ಕ್ರಮ ಕೈಗೊಳ್ಳಲಾಗುವುದು.
-ದಿಲೀಪ್ ಕುಮಾರ್,
ಸಹಾಯಕ ನಿರ್ದೇಶಕರು,
ಮೀನುಗಾರಿಕಾ ಇಲಾಖೆ -ದಿನೇಶ್ ಇರಾ