Advertisement

ಉಕ್ಕಿನಡ್ಕ ಶಾಲೆಯಲ್ಲಿ ಡ್ರಿಂಕ್‌ ವಾಟರ್‌ ಯೋಜನೆಗೆ ಚಾಲನೆ

11:59 PM Sep 27, 2019 | Sriram |

ಪೆರ್ಲ: ಉಕ್ಕಿನಡ್ಕ ವಿಎಎಲ್‌ಪಿ ಶಾಲೆಯಲ್ಲಿ ಮಕ್ಕಳಿಗೆ ಶುದ್ದ , ಕುದಿಸಿ ತಣಿಸಿದ ನೀರನ್ನು ಕುಡಿಯುವ ಅಭ್ಯಾಸವನ್ನು ಬೆಳೆಸುವ ಉದ್ದೇಶದಿಂದ ಡ್ರಿಂಕ್‌ ವಾಟರ್‌ ಯೋಜನೆಗೆ ಚಾಲನೆ ನೀಡಲಾಯಿತು.

Advertisement

ಶಾಲಾ ಮುಖ್ಯ ಶಿಕ್ಷಕಿ ಗೀತಾ,ಶಾಲೆ ಗಂಟೆ ಬಾರಿಸುವುದರ ಮೂಲಕ ಉದ್ಘಾಟಿಸಿ ಚಾಲನೆ ನೀಡಿ,ಶುದ್ಧ ನೀರು ಆರೋಗ್ಯವನ್ನು ಕಾಪಾಡುತ್ತದೆ.ನಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡಿ ತಂಪಾಗಿಡಲು ಸಹಾಯ ಮಾಡುತ್ತದೆ.ನೀರನ್ನು ಕಡಿಮೆ ಕುಡಿಯುವವರಲ್ಲಿ ಆಗಾಗ್ಗೆ ಶರೀರದಲ್ಲಿ ನೀರಿನಂಶವು ಕಡಿಮೆಯಾದಂತೆ ಡಿ ಹೈಡ್ರೆಷನ್‌ ಉಂಟಾಗುತ್ತದೆ.ಆದ್ದರಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗದಂತೆ ನೋಡಿಕೊಳ್ಳ ಬೇಕು ಎಂದರು.

ಶಾಲಾ ಶಿಕ್ಷಕ ಹರೀಶ್‌ ಗೋಳಿತ್ತಡ್ಕ ನೀರಿನ ಮಹತ್ವದ ಕುರಿತು ತಿಳಿಸುತ್ತಾ ಶಾಲಾ ಮಕ್ಕಳು ಆಟೋಟಗಳಲ್ಲಿ ಭಾಗವಹಿಸುವುದರಿಂದ ಅವರ ದೇಹಕ್ಕೆ ಹೆಚ್ಚಿನ ನೀರಿನ ಅಗತ್ಯವಿದೆ.ನೀರಿನ ಕೊರತೆಯಿಂದ ಶಾರೀರಿಕ ಬಳಲಿಕೆ,ಇನ್ನಿತರ ಆರೋಗ್ಯ ಸಮಸ್ಯೆ ಉಂಟಾಗುತ್ತದೆ.

ಆದ್ದರಿಂದ ಶಾಲೆಯಲ್ಲಿ ಮಕ್ಕಳು ನೀರು ಕುಡಿಯುವುದು ದೃಢಪಡಿಸುವ ಉದ್ದೇಶದಿಂದ ಡ್ರಿಂಕ್‌ ವಾಟರ್‌ ಆಯೋಜಿಸಲಾಗಿದೆ ಎಂದು ನುಡಿದರು. ಶಿಕ್ಷಕ ವೃಂದ ,ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next