Advertisement

ನರೇಗಾ ಯೋಜನೆ ಅನುಷ್ಠಾನಗೊಳಿಸಿ

04:35 PM May 07, 2021 | Team Udayavani |

ಬಂಗಾರಪೇಟೆ: ಕೊರೊನಾ ಕರ್ಫ್ಯೂಹಿನ್ನೆಲೆಯಲ್ಲಿ ಕೂಲಿಕಾರ್ಮಿಕರಿಗೆ ಕೆಲಸನೀಡಲು ನರೇಗಾ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ತಾಪಂ ಇಒಎನ್‌.ವೆಂಕಟೇಶಪ್ಪ ಹೇಳಿದರು.ತಾಲೂಕಿನ ಆಲಂಬಾಡಿ ಜ್ಯೋತೇನಹಳ್ಳಿ ಗ್ರಾಪಂನ ಬನಹಳ್ಳಿ ಗ್ರಾಮದಲ್ಲಿನರೇಗಾ ಯೋಜನೆಯಡಿ ಕೈಗೊಂಡಿದ್ದರಾಜಕಾಲುವೆ ಹಾಗೂ ಕಲ್ಯಾಣಿ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಮಳೆನೀರು ಸಂಗ್ರಹಿಸುವ, ಕೆರೆ ಕುಂಟೆಗಳಿಗೆ ಸರಾಗವಾಗಿ ನೀರು ಹರಿಯುವ ಕೆಲಸಗಳಿಗೆ ಚಾಲನೆ ನೀಡಲಾಗಿದೆ ಎಂದುಹೇಳಿದರು.

Advertisement

ತಾಲೂಕಿನಲ್ಲಿ ಯಾವುದೇನದಿ ಮೂಲ ಇಲ್ಲ, ಮಳೆ ಕೊರತೆಯೊಂದಿಗೆ ಸದಾ ಬರ ಪರಿಸ್ಥಿತಿ ಎದುರಿಸುತ್ತಿದೆ. ಕಾರ್ಮಿಕರಿಗೆ ನಿತ್ಯ ಕೂಲಿನೀಡಲು ಎಲ್ಲಾ ಗ್ರಾಪಂಗಳಲ್ಲಿ ಕಾಮಗಾರಿ ಆರಂಭಿಸಲಾಗಿದೆ ಎಂದುಹೇಳಿದರು. ಜಿಲ್ಲೆಯ ರೈತರು ಕೇವಲ ಅಂತರ್ಜಲ ನಂಬಿ ಕೃಷಿಮಾಡಬೇಕಾಗಿದೆ. ಕೊಳವೆಬಾವಿಗಳುಬತ್ತಿ ಹೋಗಿವೆ. ಸಣ್ಣ, ಅತಿಸಣ್ಣ ರೈತರುತಮ್ಮ ಜಮೀನಿನಲ್ಲಿ ಕೃಷಿ ಮಾಡಲುಸಾಧ್ಯವಾಗದೇ ಹೊಟ್ಟೆ ಪಾಡಿಗಾಗಿ ಕೂಲಿ ಅರಸಿ ಪಟ್ಟಣ ಪ್ರದೇಶ ಗಳಿಗೆ ವಲಸೆಹೋಗುತ್ತಾರೆ.

ಕೊರೊನಾ ಸಂಕಷ್ಟದಲ್ಲಿಯಾವುದೇ ಕೆಲಸಗಳಿಲ್ಲದೇ ಕೂಲಿಕಾರ್ಮಿ ಕರಿಗೆ ಸಹಾಯಹಸ್ತವಾಗಿಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಖಾತ್ರಿ ಯೋಜನೆ ಅನುಷ್ಠಾನಗೊಳಿಸಲಾಗಿದೆ ಎಂದು ವಿವರಿಸಿದರು.

ಆಲಂಬಾಡಿ ಜ್ಯೋತೇನಹಳ್ಳಿ ಗ್ರಾಪಂಅಧ್ಯಕ್ಷೆ ನಾರಾಯಣಮ್ಮ, ಸದಸ್ಯರಾದವಿಜಯಕುಮಾರ್‌, ಶೋಭಮ್ಮ, ರಾಮಚಂದ್ರ, ಪಿಡಿಒ ಗಂಗೋಜಿರಾವ್‌, ತಾಂತ್ರಿಕ ಸಂಯೋಜಕ ಸುಬ್ರಮಣಿ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next