Advertisement

ಅಪ್ಪಣ್ಣ ಜೀವನ ಪಠ್ಯದಲ್ಲಿ ಅಳವಡಿಸಿ: ಕಂಬಳೇಶ್ವರ ಶ್ರೀ

02:37 PM Jul 28, 2018 | Team Udayavani |

ಚಿತ್ತಾಪುರ: 12ನೇ ಶತಮಾನದಲ್ಲಿ ಸಮಾಜದ ಅಂಕು ಡೊಂಕನ್ನು ತಮ್ಮ ವಚನಗಳ ಮೂಲಕ ತಿದ್ದಿ, ಸಮಾಜ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜೀವನ ಚರಿತ್ರೆಯನ್ನು ಪಠ್ಯಕ್ರಮದಲ್ಲಿ ಜಾರಿ ಮಾಡಬೇಕು ಎಂದು ಕಂಬಳೇಶ್ವರ ಮಠದ ಶ್ರೀ ಸೊಮಶೇಖರ ಶಿವಾಚಾರ್ಯರು ನುಡಿದರು.

Advertisement

ಪಟ್ಟಣದ ತಹಶೀಲ್‌ ಕಚೇರಿ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರ ಆಪ್ತರಲ್ಲಿ ಒಬ್ಬರಾಗಿದ್ದ ಅಪ್ಪಣ್ಣನವರು ಜಾತಿ, ಮತ, ಪಂಥವನ್ನು ಮೀರಿ ಸಮಾಜದಲ್ಲಿನ ಮೂಢನಂಬಿಕೆ ಹೊಗಲಾಡಿಸಲು ಶ್ರಮಿಸಿದ್ದರು ಎಂದರು.

ವಿಶ್ವನಾಥ ಹಡಪದ ಮಾತನಾಡಿ, ಅಪ್ಪಣ್ಣ ಸಮಾಜದಲ್ಲಿ ತಮ್ಮ ತನು ಹಾಗೂ ತಮ್ಮ ಕಸುಬನ್ನು ಕೀಳರಿಮೆಯಿಂದ ಕಾಣಬಾರದು ಎನ್ನುವ ತತ್ವವನ್ನು ತಿಳಿಸಿ, ಅದರಂತೆ ನಡೆದುಕೊಂಡಿದ್ದರು ಎಂದು ಹೇಳಿದರು.

ತಾಲೂಕು ಅಧ್ಯಕ್ಷ ರಾಮಲಿಂಗಪ್ಪ ಹಡಪದ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರೇಡ್‌-2 ತಹಶೀಲ್ದಾರ ರವೀಂದ್ರ ಧಾಮಾ
ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಹೋತಿಮಮಡಿ, ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳೂಂಡಗಿ, ರುಕೊದ್ದಿನ್‌, ರಾಜಣ್ಣ ಕರದಾಳ, ನರಹರಿ ಕುಲ್ಕರ್ಣಿ, ಶಿವಶರಣಪ್ಪ, ಮುರಳಿ ಸಾತನೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next