Advertisement

ಉತ್ತಮ ಮೌಲ್ಯ ಅಳವಡಿಸಿಕೊಳ್ಳಿ 

05:14 PM Apr 30, 2018 | |

ಹಾರೂಗೇರಿ: ಮಕ್ಕಳಿಗೆ ಪ್ರೀತಿ ಕೊಡುವುದೇ ಶಿಕ್ಷಣದ ಮೊದಲನೇ ಪಾಠ. ಬಿಇಡಿ ಕೇವಲ ಶಿಕ್ಷಕರ ಹುದ್ದೆಯಲ್ಲ. ಅದು ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನು ನಿರ್ಮಾಣ ಮಾಡುತ್ತದೆ ಎಂದು ಮೂಡಲಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಆರ್‌.ಬಿ. ಕೊಕಟನೂರ ಹೇಳಿದರು.

Advertisement

ಸ್ಥಳೀಯ ಶ್ರೀ ಸಿದ್ಧಿವಿನಾಯಕ ಗ್ರಾಮೀಣ ಶಿಕ್ಷಣ (ಬಿಇಡಿ) ಮಹಾವಿದ್ಯಾಲಯದಲ್ಲಿ ನಡೆದ ಬಿಇಡಿ ಪ್ರಶಿಕ್ಷಣಾರ್ಥಿಗಳ ವಿದ್ಯಾರ್ಥಿ ಒಕ್ಕೂಟ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ, ಸಹನೆ, ತಾಳ್ಮೆ, ಶಿಸ್ತು ಹಾಗೂ ಸಹಕಾರ ಉತ್ತಮ ಶಿಕ್ಷಕನಲ್ಲಿವೆ. ಶಿಕ್ಷಕರು ಮೌಲ್ಯಾಧಾರಿತ ಶಿಕ್ಷಣ ಮತ್ತು ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಮುಖ್ಯಅತಿಥಿಗಳಾಗಿ ಪಾಲ್ಗೊಂಡಿದ್ದ ಕುಡಚಿ ಬಿ.ಶಂಕರಾನಂದ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಅಶೋಕ ಕಾಂಬಳೆ ಮಾತನಾಡಿ, ಪ್ರಶಿಕ್ಷಣಾರ್ಥಿಗಳು ನಿರಂತರ ಓದು, ಪರಿಶ್ರಮ, ಬರಹ, ಹಾಗೂ ಸಂವಹನ ಕೌಶಲದ ಮೂಲಕ ತಮ್ಮ ಹಾಗೂ ಮಕ್ಕಳ ಭವಿಷ್ಯವನ್ನು ಕಟ್ಟಬೇಕು. ಪುಸ್ತಕಗಳನ್ನು ಪ್ರೀತಿಸಬೇಕು. ಪುಸ್ತಕ ನಮ್ಮನ್ನು ಪುರಸ್ಕಾರದ ಸ್ಥಾನದಲ್ಲಿರಿಸುತ್ತದೆ. ಸ್ನೇಹಿತರಂತೆ ಸದಾ ಜತೆಗಿರಬೇಕು ಎಂದರು.

ಸಂಸ್ಥೆ ಅಧ್ಯಕ್ಷ ಡಾ|ಎಲ್‌. ಎಸ್‌. ಜಂಬಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಚಾರ್ಯ ಡಾ| ಡಿ.ಎಚ್‌.ಹುಸೇನಮಿಯ್ನಾ, ಪ್ರೊ| ಎನ್‌.ಬಿ. ನಾಗನೂರ, ಡಾ| ಪಿ.ಯು. ಪೂಜಾರಿ, ಪ್ರೊ|ಎಸ್‌. ಎಸ್‌. ನಿಡಗುಂದಿ, ಪ್ರೊ| ಎಸ್‌.ಬಿ. ಸದಲಗಿ, ಪ್ರೊ|ಕೆ.ಎಸ್‌. ಪೋತದಾರ, ಪ್ರೊ|ಎಂ.ಡಿ. ಕಂಬಾರ ಮೊದಲಾದ ಗಣ್ಯರು ವೇದಿಕೆಯಲ್ಲಿದ್ದರು. ಸಂಜೆ ಪ್ರಶಿಕ್ಷಣಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮಗಳು ನಡೆದವು. ಅಕ್ಷತಾ ಬಾಬಣ್ಣವರ ಸ್ವಾಗತಿಸಿದರು. ಕೆ.ಎಂ. ಪೋತದಾರ ಮತ್ತು ವಿ.ಎಸ್‌. ದಳವಾಯಿ ನಿರೂಪಿಸಿದರು. ಮಹಾಂತೇಶ ಕಂಬಾರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next