Advertisement

ಹನಿ ನೀರಾವರಿ ಅಳವಡಿಸಿ

03:23 PM May 18, 2020 | Suhan S |

ಘಟಪ್ರಭಾ: ನೀರು ಅತ್ಯಮೂಲ್ಯ. ಹನಿ ನೀರಾವರಿಯಂತಹ ಯೋಜನೆಗಳನ್ನು ರೈತರು ಅಳವಡಿಸಿಕೊಳ್ಳುವ ಮೂಲಕ ಜಲ ಸಂಪನ್ಮೂಲ ಕಾಪಾಡುವತ್ತ ರೈತರು ಗಮನಹರಿಸಬೇಕೆಂದು ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

Advertisement

ಸಮೀಪದ ಪಾಮಲದಿನ್ನಿಯಲ್ಲಿ ರವಿವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಭಾಗದ ಬಹುತೇಕ ಪ್ರದೇಶಗಳಲ್ಲಿ ಕಬ್ಬು ಬೆಳೆಯಲಾಗುತ್ತಿದ್ದು, ನೀರಲ್ಲೇ ಬೆಳೆ ಬೆಳೆಯುವ ಬದಲು ಹನಿ ನೀರಾವರಿ ಪದ್ಧತಿ ರೂಢಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಮಾರ್ಗದರ್ಶನ ನೀಡುತ್ತ ಆರ್ಥಿಕವಾಗಿ ಬಲಾಡ್ಯಗೊಳ್ಳಬೇಕೆಂದು ಸಲಹೆ ನೀಡಿದರು. ಲಾಕ್‌ಡೌನ್‌ ನಿಯಮಗಳು ಸಡಿಲಿಕೆಗೊಳ್ಳುವ ಸಾಧ್ಯತೆಗಳಿವೆ. ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ತೊಡಗಬೇಕು ಎಂದರು.

ಹುಲಿಕಟ್ಟಿಯ ಭಾರ್ಗವಾನಂದಗಿರಿ ವೇದಾಂತ ಆಚಾರ್ಯ, ಮಲ್ಲಪ್ಪ ಕೌಜಲಗಿ, ಪೃಥ್ವಿರಾಜ ಕತ್ತಿ, ಸುಭಾಸ ಢವಳೇಶ್ವರ, ಶಿವಾನಂದ ಡೊಣಿ, ಟಿ.ಆರ್‌. ಕಾಗಲ, ಮಡ್ಡೆಪ್ಪ ತೋಳಿನವರ, ಪಾಮಲದಿನ್ನಿ ಪಿಕೆಪಿಎಸ್‌ ಸದಸ್ಯರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next