Advertisement

ಅಪಘಾತ ವಲಯದಲ್ಲಿ ಜಾಗೃತಿ ಫಲಕ ಅಳವಡಿಸಿ

07:21 PM Oct 21, 2020 | Suhan S |

ಚಿತ್ರದುರ್ಗ: ಜಿಲ್ಲೆಯಲ್ಲಿ ಅಪಘಾತದಿಂದ ಸಾವಿನ ಪ್ರಮಾಣ ಹೆಚ್ಚುತ್ತಿದ್ದು, ಅಪಘಾತ ವಲಯಗಳಲ್ಲಿ ಜಾಗೃತಿ ಮೂಡಿಸುವ ಫಲಕಗಳನ್ನು ಅಳವಡಿಸಬೇಕು. ರಸ್ತೆಗಳ ಮೇಲೆ ವೈಟ್‌ ಪೇಂಟಿಂಗ್‌ ಮಾಡಿಸಿ ಸರಿಪಡಿಸಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ. ರಾಧಿಕಾ ಸೂಚಿಸಿದರು.

Advertisement

ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಷ್ಟ್ರೀಯ ಹೆದ್ದಾರಿಯ ಅಪಘಾತ ವಲಯಗಳಲ್ಲಿ ಸ್ಪೀಡ್‌ ಲಿಮಿಟ್‌ ಮೀಟರ್‌ ಅಳವಡಿಸುವುದರಿಂದ ಅಪಘಾತಗಳನ್ನುಕಡಿಮೆ ಮಾಡಬಹುದು. ರಸ್ತೆಗಳಲ್ಲಿರುವಗುಂಡಿಗಳನ್ನು ಮುಚ್ಚಿಸುವುದು, ರಸ್ತೆ ಬದಿ ಸಂಚಾರಕ್ಕೆ ಅಡಚಣೆ ಮಾಡುವ ಮರಗಳನ್ನು ತೆರವುಗೊಳಿಸುವಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಸಿ. ಸಂಗಪ್ಪ ಮಾತನಾಡಿ, ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಅಪಘಾತಗಳಲ್ಲಿ ನಡೆಯುವ ಮರಣ ಪ್ರಮಾಣಕಡಿಮೆ ಮಾಡಲು ರಸ್ತೆಗಳ ಗುಣಮಟ್ಟವನ್ನು ತಾಂತ್ರಿಕವಾಗಿ ಅಭಿವೃದ್ಧಿಪಡಿಸಬೇಕು. ಜಿಲ್ಲೆಯಲ್ಲಿಸಾವಿನ ಪ್ರಮಾಣ ದಿನೇ ದಿನೇ ಹೆಚ್ಚಳವಾಗುತ್ತಿದೆ. ಇದನ್ನು ತಗ್ಗಿಸಲು ರಸ್ತೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮುಂದಾಗಬೇಕೆಂದರು.

2020 ಜನವರಿಯಿಂದ ಮಾರ್ಚ್‌ವರೆಗೆ 393 ಅಪಘಾತಗಳು ಸಂಭವಿಸಿವೆ. ಏಪ್ರಿಲ್‌ನಲ್ಲಿ 38,ಮೇ 100, ಜೂನ್‌ 134, ಜುಲೈ 115, ಆಗಸ್ಟ್‌ 140,  ಸೆಪ್ಟೆಂಬರ್‌ 131 ಸೇರಿ ಜನವರಿಯಿಂದ ಸೆಪ್ಟೆಂಬರ್‌ಅಂತ್ಯದವರೆಗೆ 1051 ಅಪಘಾತ ಸಂಭವಿಸಿವೆ. ಇದೇ ವೇಳೆ ಸಾರಿಗೆ ಇಲಾಖೆಯಿಂದ ರಸ್ತೆಗಳಮೇಲೆ ಸಂಚರಿಸುವ ವಾಹನಗಳ ತನಿಖೆ ಮಾಡುವ ವೇಳೆ ನಿಯಮ ಉಲ್ಲಂಘನೆ ಮಾಡಿದದವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಮೇ ತಿಂಗಳಲ್ಲಿ 658 ತನಿಖೆ ಮಾಡಿ 112 ಪ್ರಕರಣ ದಾಖಲಿಸಲಾಗಿದೆ. ಜೂನ್‌ನಲ್ಲಿ 593 ತನಿಖೆ, 4 ಪ್ರಕರಣ, ಜುಲೈನಲ್ಲಿ 634 ತನಿಖೆ, 4 ಪ್ರಕರಣ, ಆಗಸ್ಟ್‌ನಲ್ಲಿ 1025 ತನಿಖೆ, 97 ಪ್ರಕರಣ, ಸೆಪ್ಟಂಬರ್‌ನಲ್ಲಿ 1296 ತನಿಖೆ ನಡೆಸಿ 187 ಪ್ರಕರಣ ದಾಖಲಿಸಲಾಗಿದೆ ಎಂದು ಆರ್‌ಟಿಒ ಜಿ.ಎಸ್‌. ಹೆಗಡೆ ಮಾಹಿತಿ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಂದಗಾವಿ, ನಗರಸಭೆ ಆಯುಕ್ತ ಜಿ.ಟಿ. ಹನುಮಂತರಾಜು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಪೊಲೀಸ್‌ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

Advertisement

ಅಪಘಾತಗಳ ಬಗ್ಗೆ ಜಾಗೃತಿ ಮೂಡಿಸುವ ಸ್ಟಿಕ್ಕರ್‌ ಅಳವಡಿಸಿಕೊಳ್ಳಬೇಕು. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಧರಿಸಬೇಕು. ಸೀಟ್‌ ಬೆಲ್ಟ್ ಧರಿಸದೆ ಚಾಲನೆ ಮಾಡುವ ಸವಾರರಿಗೆ ಮೂರು ತಿಂಗಳ ಅವಧಿಗೆ ಚಾಲನಾ ಪರವಾನಗಿರದ್ದುಗೊಳಿಸಲಾಗುತ್ತದೆ. – ಜಿ. ರಾಧಿಕಾ, ಎಸ್ಪಿ

Advertisement

Udayavani is now on Telegram. Click here to join our channel and stay updated with the latest news.

Next