Advertisement

ಮಾನವನಿಗೆ ಲಸಿಕೆ ಪ್ರಯೋಗ ಶುರು ; ಲಂಡನ್‌ ಇಂಪೀರಿಯಲ್‌ ಕಾಲೇಜು ವಿಜ್ಞಾನಿಗಳ ತಂಡದ ಪ್ರಯತ್ನ

11:22 AM Jun 17, 2020 | mahesh |

ಹೊಸದಿಲ್ಲಿ /ಲಂಡನ್: ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಕೋವಿಡ್ ವೈರಸ್‌ ಸೋಂಕು ವ್ಯಾಪಕ­ವಾಗು­ತ್ತಿರುವ ನಡುವೆಯೇ ಭರವಸೆಯ ಬೆಳಕೊಂದು ಮೂಡಿದೆ. ಅದೇನೆಂದರೆ, ಲಂಡನ್‌ನ ಇಂಪೀರಿ­ಯಲ್‌ ಕಾಲೇಜು ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಕೋವಿಡ್ ವೈರಸ್‌ ಲಸಿಕೆಯ ಮಾನವ ಪ್ರಯೋಗ ಆರಂಭವಾಗಿದೆ. ಈ ಹೊಸ ಲಸಿಕೆಯನ್ನು ವೈದ್ಯಕೀಯ ಸಂಶೋಧ­ಕರು ಇದೇ ಮೊದಲ ಬಾರಿ ಮಾನವನ ಮೇಲೆ ಪ್ರಯೋಗಿಸುತ್ತಿದ್ದಾರೆ. ಸೋಂಕು ನಿವಾ­ರಿಸುವಲ್ಲಿ ಲಸಿಕೆಯು ಪರಿಣಾಮ ಕಾರಿಯಾಗಿ ಕಾರ್ಯ­ನಿರ್ವಹಿಸುವುದೇ, ಇಲ್ಲವೇ ಎಂಬುದನ್ನು ತಿಳಿಯಲು ಪ್ರಯೋಗ ನಡೆಸಲಾಗುತ್ತಿದೆ ಎಂದು ಈ ಪ್ರಯೋಗದ ನೇತೃತ್ವ ವಹಿಸಿರುವ ಪ್ರೊ| ರಾಬಿನ್‌ ಶಟ್ಟಾಕ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಅತಿ ಪ್ರಬಲ ಪ್ರತಿಕಾಯಗಳ ಪತ್ತೆ: ಚೇತರಿಸಿಕೊಂಡ ವ್ಯಕ್ತಿಗಳ ರಕ್ತದಲ್ಲಿನ ಅತಿಪ್ರಬಲ ಪ್ರತಿಕಾಯಗಳನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಈ ಆ್ಯಂಟಿಬಾಡಿಗಳನ್ನು ಲಸಿಕೆ ರೂಪದಲ್ಲಿ ಬಳಸಿ ಕೊರೊನಾವನ್ನು ನಿಯಂತ್ರಿಸ­ಬಹುದು ಎಂಬ ಆಶಾವಾದ ವ್ಯಕ್ತಪಡಿಸಿದ್ದಾರೆ.

“ಆರೋಗ್ಯ ಕಾರ್ಯಕರ್ತರು, ವೃದ್ಧರು ಮತ್ತು ಸಾಂಪ್ರದಾಯಿಕ ಲಸಿಕೆಗಳಿಗೆ ಸ್ಪಂದಿಸದೇ ಇರುವ ರೋಗಿಗಳಿಗೆ ಈ ಪ್ರಬಲ ಪ್ರತಿಕಾಯಗಳ ಲಸಿಕೆ ನೀಡಬಹುದು. ಸೋಂಕನ್ನು ಆರಂಭಿಕ ಹಂತದಲ್ಲಿ ತಡೆಗಟ್ಟಲು, ತೀವ್ರ ಸೋಂಕಿಗೊಳಗಾದವರ ಜೀವ ರಕ್ಷಿಸಲು ಇದನ್ನು ಬಳಸಬಹುದು’ ಎಂದು ಅಮೆರಿಕದ ಸ್ಕ್ರಿಪ್ಟ್ ಸಂಶೋಧನಾ ಸಂಸ್ಥೆಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next