Advertisement

ಮಹಾಭಿಯೋಗ ತಿರಸ್ಕಾರ ಸರಿ

06:00 AM Apr 26, 2018 | |

ಹೊಸದಿಲ್ಲಿ: ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ವಿರುದ್ಧ ಪ್ರತಿಪಕ್ಷಗಳು ಸಲ್ಲಿಸಿದ್ದ ಮಹಾಭಿಯೋಗ ಪ್ರಸ್ತಾಪ ತಿರಸ್ಕರಿಸಿದ ರಾಜ್ಯಭೆ ಸಭಾಪತಿ ವೆಂಕಯ್ಯ ನಾಯ್ಡು ಕ್ರಮವನ್ನು ಹಿರಿಯ ನ್ಯಾಯವಾದಿ ಫಾಲಿ ಎಸ್‌.ನಾರೀಮನ್‌ (89) ಸಮರ್ಥಿಸಿಕೊಂಡಿದ್ದಾರೆ. 

Advertisement

ವಿವಿಧ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು ಇದೊಂದು ಸಮಂಜಸ ನಿರ್ಧಾರ ಎಂದು ಹೇಳಿದ್ದಾರೆ. ಈ ಕ್ರಮದ ವಿರುದ್ಧ ಪ್ರತಿಪಕ್ಷಗಳು ನಾಯ್ಡು ವಿರುದ್ಧ ಆಕ್ಷೇಪ ಮಾಡುವುದು ಸರಿಯಲ್ಲ. ಪ್ರಕರಣದಲ್ಲಿ ಸೋತವರು ಸಾಮಾನ್ಯವಾಗಿ ಹಪಹಪಿಸುವಂಥ ಸಾಮಾನ್ಯ ನಡೆಯಾಗಿದೆ ಎಂದು ಹಿರಿಯ ನ್ಯಾಯವಾದಿ ಫಾಲಿ ನಾರಿಮನ್‌ ತಿಳಿಸಿದ್ದಾರೆ. 

“ಮಹಾಭಿಯೋಗ ಪ್ರಸ್ತಾಪವನ್ನು ರಾಜ್ಯಸಭೆ ಸಭಾಪತಿ ತರಾತುರಿಯಲ್ಲಿ ತಿರಸ್ಕರಿಸಿರವ ಆರೋಪ ಗಳಲ್ಲಿ ಹುರುಳಿಲ್ಲ. ಏಕೆಂದರೆ, ಮಹಾಭಿಯೋಗ ತಿರಸ್ಕರಿಸಲು ಭಾರೀ ಸಮಯ ಬೇಕಿಲ್ಲ” ಎಂದು ನಾಯ್ಡು ಅವರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. 

“ನನಗೆ ತಿಳಿದಿರುವ ಪ್ರಕಾರ, ಮಹಾಭಿಯೋಗವನ್ನು ಸಭಾಧ್ಯಕ್ಷರಾದ ನಾಯ್ಡು ಅವರಿಗೆ ಸಲ್ಲಿಸಿದ ನಂತರ, 8-10 ದಿನಗಳ ತರುವಾಯ ಅದನ್ನು ತಿರಸ್ಕರಿಸಲಾಗಿದೆ. ನನ್ನ ಪ್ರಕಾರ, ಇಂಥ ನಿರ್ಧಾರ ಕೈಗೊಳ್ಳಲು 8ರಿಂದ 10 ದಿನಗಳು ಸಾಕಷ್ಟಾಯಿತು ಎಂದಿದ್ದಾರೆ. ಈ ಹಿಂದೆ, ಮಹಾಭಿಯೋಗ ಮಂಡನೆ ವಿರುದ್ಧ ಕಿಡಿಕಾರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next