Advertisement
ಮೇಲ್‌ಗಂಗೊಳ್ಳಿ ವಾಟರ್ ಟ್ಯಾಂಕ್‌ನಿಂದ ಗಂಗೊಳ್ಳಿ ಪಂಚಾಯತ್ ಕಚೇರಿವರೆಗಿನ ಸುಮಾರು 700 ಮೀ. ಉದ್ದದ ಮುಖ್ಯ ರಸ್ತೆಯನ್ನು ನೆರೆ ಪರಿಹಾರದಲ್ಲಿ ಮಂಜೂ ರಾಗಿದ್ದ 1.08 ಕೋ.ರೂ. ವೆಚ್ಚದಲ್ಲಿ ಕಳೆದ ಎಪ್ರಿಲ್ – ಮೇಯಲ್ಲಿ ಕಾಂಕ್ರೀಟೀಕರಣ ಕಾಮಗಾರಿ ಮಾಡಲಾಗಿತ್ತು. ಆದರೆ ಈ ಬಾರಿಯ ಭಾರೀ ಮಳೆಯಿಂದಾಗಿ ಇದನ್ನು ಹೊರತು ಪಡಿಸಿ ಬಾಕಿ ಹಲವೆಡೆಗಳಲ್ಲಿ ರಸ್ತೆಯಿಡೀ ಹೊಂಡ – ಗುಂಡಿಗಳೇ ಕಾಣಿಸಿಕೊಂಡಿವೆ.
ಇದು ಗಂಗೊಳ್ಳಿಯ ಮೀನುಗಾರಿಕಾ ಬಂದರಿಗೆ ತೆರಳುವ ಮುಖ್ಯ ರಸ್ತೆಯಾಗಿದೆ. ಈ ಬಂದರಿನಿಂದ ಬೇರೆ ಬೇರೆ ಕಡೆಗಳಿಗೆ ಮೀನು ಸಾಗಾಟ ಮಾಡಲಾಗುತ್ತದೆ. ಮೀನು ಸಾಗಾಟದ ಲಾರಿಗಳು, ಐಸ್ ಸಾಗಾಟದ ವಾಹನ, ಸಾರಿಗೆ ಬಸ್‌ಗಳು, ಶಾಲಾ ವಾಹನಗಳು, ಕಾರು, ಆಟೋ ರಿಕ್ಷಾ ಸೇರಿದಂತೆ ಸಾವಿರಾರು ವಾಹನಗಳು ಪ್ರತಿನಿತ್ಯ ಇದೇ ಮಾರ್ಗವಾಗಿ ಸಂಚರಿಸುತ್ತವೆ. ಮುಖ್ಯವಾಗಿ ಈ ಹೊಂಡ – ಗುಂಡಿಗಳ ರಸ್ತೆಯಿಂದಾಗಿ ಮೀನುಗಾರಿಕಾ ವಹಿವಾಟಿಗೆ ತೊಂದರೆಯಾಗುತ್ತಿದೆ.
Related Articles
ಈಗಾಗಲೇ 700 ಮೀ. ರಸ್ತೆ ಕಾಂಕ್ರೀಟೀಕರಣ ಕಾಮಗಾರಿ ನಡೆಸಲಾಗಿದೆ. ಇನ್ನು ಗಂಗೊಳ್ಳಿ ಬಂದರು ಕಡೆಯಿಂದ ಬರುವ ರಸ್ತೆಗೆ ಕಾಂಕ್ರೀಟಿಕರಣಕ್ಕೆ 1.05 ಕೋ.ರೂ. ಮಂಜೂರಾಗಿದ್ದು, ಮಳೆ ಕಡಿಮೆಯಾದ ಬಳಿಕ ಕಾಮಗಾರಿ ಆರಂಭಿಸಲಾಗುವುದು. ಇನ್ನು ಸುಮಾರು 500 ಮೀ. ರಸ್ತೆ ಕಾಂಕ್ರೀಟೀಕರಣಕ್ಕೆ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಡಿ ಪ್ರಸ್ತಾವನೆ ಸಲ್ಲಿಸಲಾಗಿದೆ.
– ದುರ್ಗಾದಾಸ್,
ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ
Advertisement