Advertisement

ಎಲ್ಲಾ ಬಾರ್ ಗಳ ಪರವಾನಗಿ ರದ್ದು: ಜನವರಿಯಿಂದ ಜಾರಿಗೆ ಬರಲಿದೆ ಹೊಸ ನಿಯಮ

09:49 AM Nov 24, 2019 | Mithun PG |

ಅಮರಾವತಿ: ಆಂಧ್ರಪ್ರದೇಶ ಸರ್ಕಾರ ತನ್ನ ರಾಜ್ಯದಲ್ಲಿರುವ ಎಲ್ಲಾ ಮದ್ಯದಂಗಡಿಗಳ ಪರವಾನಗಿಯನ್ನು ಶುಕ್ರವಾರ ರದ್ದುಪಡಿಸಿದ್ದು, ಮುಂದಿನ ಎರಡು ವರುಷಗಳಿಗೆ ಅನುಗುಣವಾಗಿ ಹೊಸ ನಿಯಮವನ್ನು ಜಾರಿಗೆ ತಂದಿದೆ.

Advertisement

ಈ ಯೋಜನೆಯ ಭಾಗವಾಗಿ ಈಗಾಗಲೇ ಸರ್ಕಾರ ಹಂತಹಂತವಾಗಿ ಬಾರ್ ಗಳನ್ನು ಮುಚ್ಚಲು ತೀರ್ಮಾನಿಸಿದ್ದು ಶೇ 40 ರಷ್ಟು ಜಾರಿಗೆ ತಂದಿದೆ. ಹೊಸ ನೀತಿಯಿಂದ  ಕುಡಿದು ವಾಹನ ಚಲಾಯಿಸುವುದು, ಕೌಟುಂಬಿಕ ಹಿಂಸಾಚಾರ,  ರಸ್ತೆ ಅಪಘಾತಗಳು. ಅಪರಾಧ ಮತ್ತು ಇತರ ಸಾಮಾಜಿಕ ದುಷ್ಕೃತ್ಯಗಳು ತಪ್ಪುವುದು ಮಾತ್ರವಲ್ಲದೆ ಬಡ ವರ್ಗಗಳನ್ನು ಆರ್ಥಿಕ ಉನ್ನತಿಯನ್ನು ಸಾಧಿಸುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗಿದೆ.

ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ ಆರ್ ಸಿಪಿ ಸರ್ಕಾರ ಈ ಹೊಸ ಬಾರ್ ನೀತಿಯನ್ನು ಜಾರಿಗೊಳಿಸಿದ್ದು 2020ರ ಜನವರಿಯಿಂದ ಜಾರಿಗೆ ಬರುತ್ತದೆ ಮತ್ತು ಎರಡು ವರ್ಷಗಳ ಕಾಲ ಜಾರಿಯಲ್ಲಿರುತ್ತದೆ. ಹೊಸ ನೀತಿಯ ಅನ್ವಯ ಬಾರ್ ಪರವಾನಗಿ ಅರ್ಜಿ ಶುಲ್ಕವನ್ನು 10 ಲಕ್ಷ ರೂ ಎಂದು ನಿಗದಿಪಡಿಸಲಾಗಿದೆ. ಪರವಾನಗಿಯನ್ನು ಎರಡು ವರ್ಷಗಳವರೆಗೂ ಲಾಟರಿ ಮುಖೇನ ಆಯ್ಕೆ ಮಾಡಲಾಗುತ್ತದೆ ಮತ್ತು ಯಾವುದೇ ಕಾರಣಕ್ಕೂ ಹಣವನ್ನು ಹಿಂದಿರುಗಿಸುವುದಿಲ್ಲ.

ಇದಲ್ಲದೆ ಪರವಾನಗಿ ಪಡೆಯಲು  50,000 ಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಪ್ರದೇಶಗಳಲ್ಲಿ 25 ಲಕ್ಷ ರೂ,  5 ಲಕ್ಷದವರೆಗಿನ ಜನಸಂಖ್ಯೆ ಇರುವ ಪ್ರದೇಶಗಳಲ್ಲಿ 50 ಲಕ್ಷ ರೂ, ಮತ್ತು 75,00,000 ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಪ್ರದೇಶಗಳಲ್ಲಿ 75 ಲಕ್ಷ ರೂ. ಪಾವತಿಸಬೇಕಾಗುತ್ತದೆ.  ಜನವರಿ 1, 2020 ರಿಂದ ರಾಜ್ಯದ ಬಾರ್‌ಗಳು ಬೆಳಿಗ್ಗೆ 11 ರಿಂದ ರಾತ್ರಿ 10 ರವರೆಗೆ ತೆರೆದಿರುತ್ತವೆ

ಪ್ರಸ್ತುತ, 3,500 ಮದ್ಯದಂಗಡಿಗಳಿದ್ದು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಈಗಾಗಲೇ ಬಾರ್‌ಗಳ ಸಂಖ್ಯೆಯನ್ನು ಶೇಕಡಾ 40 ರಷ್ಟು ಇಳಿಸುವುದಾಗಿ ಘೋಷಿಸಿದ್ದರು. ಅದರ ಜೊತೆಗೆ ಮದ್ಯ ಸೇವಿಸುವ ಉತ್ಸಾಹವನ್ನು ಕಡಿಮೆಗೊಳಿಸಲು ಬೆಲೆಗಳನ್ನು ಕೂಡ ಹೆಚ್ಚಿಸಲಾಗುವುದು ಎಂದು ಪ್ರಸ್ತಾಪಿಸಿದ್ದರು.

Advertisement

ಶುಕ್ರವಾರ ಹೊರಡಿಸಿದ ಆದೇಶದಲ್ಲಿ, ಬಾರ್‌ಗಳ ಸಂಖ್ಯೆಯನ್ನು ಕಡಿಮೆ ಮಾಡುವುದು, ಪರವಾನಗಿ ಶುಲ್ಕವನ್ನು ಹೆಚ್ಚಿಸುವುದು ಮತ್ತು ಹೊಸ ನೀತಿಯಡಿಯಲ್ಲಿ ಬಾರ್‌ಗಳ ವ್ಯವಹಾರ ಸಮಯವನ್ನು ಕಡಿಮೆ ಮಾಡುವುದು, ಸಾಮಾನ್ಯ ಜನರಿಗೆ ಮದ್ಯಗಳ ಲಭ್ಯತೆಯನ್ನು ಮತ್ತಷ್ಟು ಕಡಿತಗೊಳಿಸುವ ಗುರಿಯನ್ನು ಹೊಂದಿದೆ ಎಂದು ಸರ್ಕಾರ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next