Advertisement

ವಿದೇಶಿಯರಿಂದ ಭಾರತೀಯ ಸಂಸ್ಕೃತಿ ಅನುಕರಣೆ

11:41 PM Feb 22, 2020 | Sriram |

ಉಡುಪಿ: ಮಹಿಳೆಯ ರಿಂದಾಗಿ ಭಾರತ ದೇಶದ ಸಂಸ್ಕೃತಿ ಗುರುತಿಸಲ್ಪಟ್ಟಿದೆ. ವಿದೇಶಿಯರು ಕೂಡ ಭಾರತೀಯ ಸಂಸ್ಕೃತಿಗೆ ಮಾರುಹೋಗಿ ಅದನ್ನು ಅನುಕರಣೆ ಮಾಡುತ್ತಿದ್ದಾರೆ. ಲಯನ್ಸ್‌ನಂತಹ ಸಮಾಜಮುಖೀ ಕಾರ್ಯಕ್ರಮಗಳಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಮಹಿಳೆಯರು ತೊಡಗಿಸಿಕೊಳ್ಳಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್‌. ಕುಂದರ್‌ ಹೇಳಿದರು.

Advertisement

ಶನಿವಾರ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಲಯನ್ಸ್‌ ಕ್ಲಬ್‌ ಜಿಲ್ಲೆ 317ಸಿಯ ಪ್ರಾಂತ್ಯ 4ರ ವತಿಯಿಂದ ನಡೆದ 2019-20 ಸಾಲಿನ “ಸ್ವಾತಿ ಮುತ್ತು’ ಪ್ರಾಂತೀಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಲಯನ್ಸ್‌ ಸಂಸ್ಥೆಯು ಸಮಾಜದಲ್ಲಿ ರುವ ಬಡವರನ್ನು ಗುರುತಿಸಿ ಅವ ರನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಿದೆ. ಸಮಾಜಮುಖೀ ಚಟುವಟಿಕೆಗಳು ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕು. ಮಹಿಳೆಯರರಕ್ಷಣೆಗೆ ಹಲವಾರು ರೀತಿಯ ಕಾನೂನು ಗಳಿದ್ದು, ಸದುಪಯೋಗಪಡಿಸಿಕೊಳ್ಳ ಬೇಕು ಎಂದರು.

ಲಯನ್ಸ್‌ ಜಿಲ್ಲಾ 317ಸಿಯ 4ನೆಯ ಪ್ರಾಂತ್ಯದ ಅಧ್ಯಕ್ಷೆ ವಿದ್ಯಾಲತಾ ಯು. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಂತ್ಯದ ಪ್ರಥಮ ವ್ಯಕ್ತಿ ಉದಯ ಕುಮಾರ್‌ ಶೆಟ್ಟಿ ಉದ್ಘಾಟಿಸಿದರು.

ಹೊಲಿಗೆ ಯಂತ್ರ ವಿತರಣೆ, ಸೋಲಾರ್‌ ವಾಟರ್‌ ಪ್ಯೂರಿಫ‌ಯರ್‌, ನಗದು ಸಹಾಯ ಸೇರಿದಂತೆ 1 ಲಕ್ಷ ಮೇಲ್ಪಟ್ಟ ಸೇವಾಕಾರ್ಯಗಳು ನಡೆದವು. 700ಕ್ಕೂ ಹೆಚ್ಚು ಲಯನ್ಸ್‌ ಸದಸ್ಯರು ಭಾಗವಹಿಸಿದ್ದರು.

Advertisement

ಉದ್ಯಮಿ ಪುರುಷೋತ್ತಮ ಶೆಟ್ಟಿ, ಅಮ್ಮಣಿ ರಾಮಣ್ಣ ಶೆಟ್ಟಿ ಹಾಲ್‌ನ ಅಧ್ಯಕ್ಷ ಜಯರಾಜ್‌ ಹೆಗ್ಡೆ, ಲಯನ್ಸ್‌ ಜಿಲ್ಲೆ 317 ಸಿಯ ಪ್ರಥಮ ಉಪಗವರ್ನರ್‌ ಎನ್‌.ಎಂ. ಹೆಗ್ಡೆ, ಎರಡನೆಯ ಉಪಗವರ್ನರ್‌ ವಿಶ್ವನಾಥ್‌ ಶೆಟ್ಟಿ, ಪ್ರಾಂತ್ಯದ ಕಾರ್ಯದರ್ಶಿ ಶೇಖರ್‌ ಶೆಟ್ಟಿ ಕೆ., ಸಮ್ಮೇಳನ ಸಮಿತಿ ಕಾರ್ಯದರ್ಶಿ ಉಮೇಶ್‌ ನಾಯಕ್‌, ಆತಿಥೇಯ ಕ್ಲಬ್‌ನ ಅಧ್ಯಕ್ಷ ಪ್ರಕಾಶ್‌ ಚಂದ್ರ, ಖಜಾಂಚಿ ನಂದಕಿಶೋರ್‌, ವಲಯ ಅಧ್ಯಕ್ಷರಾದ 1ರ ಶೇಖರ್‌ ಬಿ.ಪೂಜಾರಿ, 2ರ ಶೇಖರ್‌ ಅಂಚನ್‌, 3ರ ಗಣೇಶ್‌ ಎನ್‌.ಸುವರ್ಣ, ಜಿಲ್ಲೆಯ ಅಧ್ಯಕ್ಷ ಪ್ರಕಾಶ್‌ ಚಂದ್ರ, ಕಾರ್ಯದರ್ಶಿ ಅನುಪಮಾ ಜಯ ಕುಮಾರ್‌, ಖಜಾಂಚಿ ಕುಸುಮಾ ವಿಶ್ವನಾಥ್‌, ರೀಜನ್‌ ಜಿಎಂಟಿ ಕೋ-ಆರ್ಡಿನೇಟರ್‌ ನಂದಕಿಶೋರ್‌ ಭಾಗವಹಿಸಿದ್ದರು.

ಸಮ್ಮೇಳನದ ಅಧ್ಯಕ್ಷ ಸತೀಶ್‌ ಶೆಟ್ಟಿ ಸ್ವಾಗತಿಸಿದರು. ವೀಣಾ ಬಾಯರಿ ಹಾಗೂ ಪ್ರತಾಪ್‌ ಕುಮಾರ್‌ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next