Advertisement

ನೋಟು ಅಮಾನ್ಯ, ಜಿಎಸ್‌ಟಿ: ಮೋದಿ ಕ್ರಮಕ್ಕೆ ಐಎಂಎಫ್ ಪ್ರಶಂಸೆ

05:50 PM Dec 22, 2017 | udayavani editorial |

ಹೊಸದಿಲ್ಲಿ : ‘ನೋಟು ಅಮಾನ್ಯ ಮತ್ತು ಜಿಎಸ್‌ಟಿ ಅನುಷ್ಠಾನ ಕ್ರಮದಿಂದ ಭಾರತದ ಆರ್ಥಿಕತೆ ಶಾಶ್ವತವಾಗಿ ಕುಂಠಿತಗೊಳ್ಳುವಂತಾಗಿದೆ’ ಎಂಬ ಕೆಲವರ ಅಭಿಮತವನ್ನು  ಐಎಂಎಫ್ ತಿರಸ್ಕರಿದ್ದು ಇದು ಕೇವಲ ಕಿರು ಅವಧಿಯ ನೋವಾಗಿರುತ್ತದೆ ಎಂದು ಹೇಳಿದೆ. ಆ ಮೂಲಕ ಐಎಂಎಫ್ ಮೋದಿ ಸರಕಾರದ ಈ ಎರಡು ಕ್ರಾಂತಿಕಾರದ ಸುಧಾರಣಾ ಕ್ರಮಗಳನ್ನು ಪ್ರಶಂಸಿಸಿದೆ.

Advertisement

ಸಿಎನ್‌ಬಿಸಿ-ಟಿವಿ 18 ಗೆ ನೀಡಿದ ಸಂದರ್ಶನದಲ್ಲಿ ಐಎಂಎಫ್ ಅಧಿಕಾರಿಯೋರ್ವರು, “ನೋಟು ಅಮಾನ್ಯ ಮತ್ತು ಜಿಎಸ್‌ಟಿಯಿಂದ ಭಾರತದ ಆರ್ಥಿಕತೆಗೆ ಕಿರು ಅವಧಿಯ ನೋವುಂಟಾಗಿರಬಹುದು; ಆದರೆ ಅದರಿಂದ ದೀರ್ಘ‌ಕಾಲೀನ ಲಾಭವಾಗಲಿದೆ’ ಎಂದು ಹೇಳಿದ್ದಾರೆ.

ಮೋದಿ ಸರಕಾರ ಕಳೆದ ವರ್ಷ ನ.8ರಂದು ನೋಟು ಅಮಾನ್ಯ ಕ್ರಮ ಕೈಗೊಂಡಿತ್ತು; ಈ ವರ್ಷ ಜು.1ರಂದು ದೇಶಾದ್ಯಂತ ಜಿಎಸ್‌ಟಿಯನ್ನು ಜಾರಿಗೆ ತಂದಿತ್ತು. 

ಭಾರತದ ಆರ್ಥಿಕ ಪ್ರಗತಿಯು ಈ ವರ್ಷ ಸೆಪ್ಟಂಬರ್‌ಗೆ ಅಂತ್ಯಗೊಂಡ ಮೂರು ತಿಂಗಳ ಅವಧಿಯಲ್ಲಿ ದೇಶದ ಆರ್ಥಿಕ ಪ್ರಗತಿ ಶೇ.6.3ಕ್ಕೆ ಏರಿತ್ತು. ಆ ಮೂಲಕ ಐದು ತ್ತೈಮಾಸಿಕಗಳ ನಿರಂತರ ಹಿನ್ನಡೆಯನ್ನು ತಡೆದಿತ್ತು. ಇದಕ್ಕೆ ಜಿಎಸ್‌ಟಿ ಅನುಷ್ಠಾನದ ಬಾಲಗ್ರಹ ಪೀಡೆ ಕಾರಣವಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next