Advertisement

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

01:24 AM Apr 20, 2024 | Team Udayavani |

ಪುಣೆ: ದೇಶದ ಬಹುತೇಕ ಭಾಗದಲ್ಲಿ ಒಣಹವೆ ಮುಂದುವರಿದಿರು ವಂತೆಯೇ, ಭಾರತೀಯ ಹವಾಮಾನ ಇಲಾಖೆಯು(ಐಎಂಡಿ) “ಬರ’ಸಿಡಿಲಿನ ಸುದ್ದಿಯೊಂದನ್ನು ನೀಡಿದೆ. ದೇಶದ ಸುಮಾರು 125 ಜಿಲ್ಲೆಗಳು ಭಾರೀ ಪ್ರಮಾಣದ ಬರ ಪರಿಸ್ಥಿತಿ ಎದುರಿಸುತ್ತಿದೆ ಎಂದು ಇಲಾಖೆಯ ದತ್ತಾಂಶ ತಿಳಿಸಿದೆ.

Advertisement

ಮಾ. 14ರಿಂದ ಎ. 10ರ ವರೆಗಿನ ದತ್ತಾಂಶಗಳ ಆಧಾರದಲ್ಲಿ ಐಎಂಡಿ ಈ ವರದಿ ನೀಡಿದೆ. 2023ರ ಇದೇ ಅವಧಿ ಯಲ್ಲಿ 33 ಜಿಲ್ಲೆಗಳಲ್ಲಿ ಬರಗಾಲ ಇತ್ತು. ಈ ವರ್ಷದ ಮಾರ್ಚ್‌ ಆರಂಭದ ವೇಳೆಗೆ 98 ಜಿಲ್ಲೆಗಳಲ್ಲಿ ಬರ ಆವರಿಸಿತ್ತು. ಅನಂತರದಲ್ಲಿ ಕರ್ನಾಟಕ ಸೇರಿ ಒಟ್ಟು 23 ರಾಜ್ಯಗಳು, ಕೇಂದ್ರಾ ಡಳಿತ ಪ್ರದೇ ಶ ಗಳ ಒಟ್ಟು 125 ಜಿಲ್ಲೆಗಳಿಗೆ ಬರದ ಬಿಸಿ ತಟ್ಟಿತು ಎಂದು ವರದಿ ಹೇಳಿದೆ.

ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಗುಜರಾತ್‌, ಹರಿಯಾಣ, ಹಿಮಾ ಚಲ, ಕರ್ನಾಟಕ, ಮಹಾರಾಷ್ಟ್ರ, ಉತ್ತರಾಖಂಡ ಮತ್ತು ತಮಿಳುನಾಡಿನ ಮೇಲೆ ಬರವು ಹೆಚ್ಚಿನ ದುಷ್ಪರಿಣಾಮ ವನ್ನು ಬೀರಿದೆ. ಈ ರಾಜ್ಯಗಳಲ್ಲಿನ ಹಲವು ಜಿಲ್ಲೆಗಳಲ್ಲಿ ಒಣಹವೆಯ ಜತೆಗೆ ಬಿಸಿಲಿನ ಧಗೆಯೂ ಹೆಚ್ಚಿದೆ. ಮಳೆಯ ಕೊರತೆಯ ಪರಿಣಾಮ ವೆಂಬಂತೆ, ನೀರಿಗೂ ತತ್ವಾರ ಉಂಟಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next