Advertisement

IMD; ದೇಶದಲ್ಲಿ ಇನ್ನೂ 2 ತಿಂಗಳು ಭಾರೀ ಮಳೆ

12:48 AM Aug 02, 2024 | Team Udayavani |

ಹೊಸದಿಲ್ಲಿ: ಜೂನ್‌ ಮತ್ತು ಜುಲೈ 2 ತಿಂಗಳ ಮಳೆಗೇ ದೇಶದ ಬಹಳಷ್ಟು ರಾಜ್ಯಗಳು ಹೈರಾಣಾ ಗಿರುವ ಹೊತ್ತಿನಲ್ಲಿ ಭಾರತೀಯ ಹವಾಮಾನ ಇಲಾಖೆ (IMD), ಈ ತಿಂಗಳಲ್ಲಿ ಮತ್ತು ಮುಂದಿನ ತಿಂಗಳು ದೇಶದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

Advertisement

ಇದರಿಂದ ಮತ್ತಷ್ಟು ಭೂಕುಸಿತ ಮತ್ತು ಪ್ರವಾಹದಂತಹ ದುರಂತಗಳು ಎದುರಾಗುವ ಸಾಧ್ಯತೆಗಳು ದಟ್ಟವಾಗಿವೆ. ವಾತಾ ವರಣ ದಲ್ಲಿನ “ಲಾ ನಿನಾ’ ಪರಿಸ್ಥಿತಿ ಅಭಿವೃದ್ಧಿ ಆಗುವ ಸಾಧ್ಯತೆ ಹೆಚ್ಚಿದ್ದು, ಅಧಿಕ ಮಳೆ ಬೀಳಲಿದೆ ಎಂದು ಐಎಂಡಿ ಅಂದಾಜಿಸಿದೆ. ದೇಶದಲ್ಲಿ ಆಗಸ್ಟ್‌ ಮತ್ತು ಸೆಪ್ಟಂಬರ್‌ ತಿಂಗಳಲ್ಲಿ ಶೇ.106 ರಷ್ಟು (422.8 ಮಿ.ಮೀ.) ಮಳೆ ಸುರಿಯುವ ಸಾಧ್ಯತೆ ಇದೆ. ದೇಶದಲ್ಲಿ ಜೂ.1ರಿಂದ ಸಾಮಾನ್ಯ ಮಳೆ 445.8 ಮಿ.ಮೀ.ಗಿಂತ 453.8 ಮಿ.ಮೀ. ಮಳೆ ದಾಖ ಲಾಗಿದೆ. ಜೂನ್‌ಗಿಂತ ಜುಲೈ ಯಲ್ಲೇ ಅತೀ ಹೆಚ್ಚು ಮಳೆಯಾಗಿದೆ. ದೇಶದ ಬಹುತೇಕ ಭಾಗದಲ್ಲಿ ಸಾಮಾನ್ಯಕ್ಕಿಂತ ಅಧಿಕ ಮಳೆಯಾಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next