ಬೆಂಗಳೂರು: ಐಎಂಎ ಮಾದರಿ ಮತ್ತೊಂದು ಹಗರಣ ಬೆಳಕಿಗೆ ಬಂದಿದ್ದು ಯೆಲ್ಲೋ ಎಕ್ಸ್‌ಪ್ರೆಸ್, ಯಲ್ಲೋ ಫೈನಾನ್ಸ್ ಅರ್ನಿಂಗ್ಸ್ ಹೆಸರಿನಲ್ಲಿ ಭಾರೀ ವಂಚನೆ ನಡೆಸಲಾಗಿದೆ.
ಕಂದಾಯ ಸಚಿವ ಆರ್.ಅಶೋಕ್ ರಿಂದ ಈ ಮಾಹಿತಿ ಸುದ್ದಿಗೋಷ್ಟಿಯಲ್ಲಿ ಬಹಿರಂಗವಾಗಿದ್ದು ಬೆಂಗಳೂರು ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ 2500 ಜನರಿಂದ 2 ರಿಂದ 2.5 ಲಕ್ಷ ಹಣ ಸಂಗ್ರಹ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕೇರಳ ಮೂಲದ ಕಂಪನಿಗಳು ಕ್ಯಾಬ್ ಖರೀದಿಸಿ, ಒಲಾ- ಊಬರ್ ಗೆ ಒಪ್ಪಂದ ಮಾಡಿಕೊಂಡು ಮಾಸಿಕ 20 ರಿಂದ 25 ಸಾವಿರ ಬಾಡಿಗೆ ಕೊಡುವ ಆಮಿಷ ನೀಡುತ್ತಿದ್ದರು.
ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದ್ದು, ವಂಚನೆ ಕಂಪನಿಗಳ, ಆರ್ಥಿಕ ಮಾಫಿಯಾ ಸಂಸ್ಥೆಗಳ ಬಗ್ಗೆ ಮಾಹಿತಿ ನೀಡಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಐಎಂಎ ಕಂಪನಿಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕಂದಾಯ ಇಲಾಖೆ ತೀರ್ಮಾನ ಮಾಡಿದ್ದು ಒಟ್ಟು 21.73 ಕೋಟಿ ರೂ. ಮೌಲ್ಯದ 17 ಆಸ್ತಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳು ಪ್ರಸ್ತುತ ಮಾರುಕಟ್ಟೆ ಮೌಲ್ಯ, ನಗದು 2.84 ಕೋಟಿ ರೂ, 8.65 ಕೋಟಿ ರೂ .ಡಿಡಿ, 5 ವಾಹನಗಳು, 59 ಲಕ್ಷ, 71.5 ಲಕ್ಷ ರೂ. ಅಂದಾಜು ಮೌಲ್ಯದ 2 ಕೆಜಿ ಚಿನ್ನ. 300 ಬೆಳ್ಳಿ ಕಾಯಿನ್, 41 ಕೆಜಿ ಬೆಳ್ಳಿ ಹಾಗೂ 5880 ನಕಲಿ ಚಿನ್ನದ ಬಿಸ್ಕತ್ತು ಗಳನ್ನು ಜಪ್ತಿ ಮಾಡಲು ನಿರ್ಧಾರಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.