Advertisement

ಬಹುಕೋಟಿ ವಂಚಕ ಮನ್ಸೂರ್‌ ಖಾನ್‌ ಸೆರೆ

09:27 AM Jul 21, 2019 | mahesh |

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮೊಹಮದ್‌ ಮನ್ಸೂರ್‌ ಖಾನ್‌ ಕಡೆಗೂ ವಿಶೇಷ ತನಿಖಾ ತಂಡದ ಬಲೆಗೆ ಬಿದ್ದಿದ್ದಾನೆ.
ಗುರುವಾರ ತಡರಾತ್ರಿ ದುಬಾೖನಿಂದ ವಿಮಾನದ ಮೂಲಕ ಮನ್ಸೂರ್‌ ಖಾನ್‌ ದಿಲ್ಲಿಗೆ ಆಗಮಿಸುತ್ತಿದ್ದಾನೆ ಎಂಬ ಖಚಿತ ಮಾಹಿತಿ ಆಧರಿಸಿ ಎಸ್‌ಐಟಿ ಹಾಗೂ ಇ.ಡಿ. ಅಧಿಕಾರಿಗಳ ಎರಡು ಪ್ರತ್ಯೇಕ ತಂಡಗಳು ವಿಮಾನ ನಿಲ್ದಾಣದಲ್ಲಿಯೇ ಬೀಡುಬಿಟ್ಟಿದ್ದವು.

Advertisement

ತಡರಾತ್ರಿ 1.30ರ ಸುಮಾರಿಗೆ ವಿಮಾನದಿಂದ ಕೆಳಗಿಳಿದ ಮನ್ಸೂರ್‌ ಖಾನ್‌ನನ್ನು ಎಸ್‌ಐಟಿ ಬಂಧಿಸಿದೆ. ಸದ್ಯ ಎಸ್‌ಐಟಿ ಹಾಗೂ ಇ.ಡಿ. ಜಂಟಿ ವಶದಲ್ಲಿರುವ ಮನ್ಸೂರ್‌ನ ವಿಚಾರಣೆ ನಡೆಯುತ್ತಿದೆ ಎಂದು ಎಸ್‌ಐಟಿ ಉನ್ನತ ಮೂಲಗಳು ತಿಳಿಸಿವೆ.

ಐಎಂಎ ವಂಚನೆ ಪ್ರಕರಣದ ತನಿಖೆಯನ್ನು ಎಸ್‌ಐಟಿ ಹಾಗೂ ಇ.ಡಿ. ಪ್ರತ್ಯೇಕ ವಾಗಿ ನಡೆಸುತ್ತಿವೆ. ಎರಡೂ ತನಿಖಾ ತಂಡಗಳು ಮನ್ಸೂರ್‌ ವಿರುದ್ಧ ರೆಡ್‌ಕಾರ್ನರ್‌ ನೋಟಿಸ್‌  ಹೊರಡಿಸಿದ್ದವು.

ಆರೋಪಿ ಮನ್ಸೂರ್‌ನನ್ನು ಶನಿವಾರ ಬೆಂಗಳೂರಿಗೆ ಕರೆತರುವ ಸಾಧ್ಯತೆಯಿದೆ. ನ್ಯಾಯಾಲಯದ ಅನುಮತಿ ಮೇರೆಗೆ ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸಲಾಗುವುದು ಎಂದು ಎಸ್‌ಐಟಿ ಮೂಲಗಳು ಹೇಳಿವೆ. ಐಎಂಎ ವಂಚನೆ ಪ್ರಕರಣದ ಆಳ ಕ್ಕಿಳಿದಿರುವ ಎಸ್‌ಐಟಿ, ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ್‌ ಶಂಕರ್‌, ಉಪವಿಭಾಗಾಧಿಕಾರಿ ಎಲ್‌.ಸಿ. ನಾಗರಾಜು, ಇಬ್ಬರು ಮೌಲ್ವಿಗಳು ಸಹಿತ ಇದುವರೆಗೂ 16 ಮಂದಿ ಯನ್ನು ಬಂಧಿಸಿದೆ.

ಮತ್ತೂಂದು ಮಜಲಿಗೆ ತನಿಖೆ?
ಮನ್ಸೂರ್‌ ಖಾನ್‌ ದೇಶ ಬಿಟ್ಟು ಪರಾರಿಯಾಗುವ ಮುನ್ನ ಶಿವಾಜಿ ನಗರ ಸ್ಥಳೀಯ ಶಾಸಕ, ಇತರ ರಾಜ ಕಾರಣಿಗಳು, ಕೇಂದ್ರ, ರಾಜ್ಯ ಸರಕಾರದ ಅಧಿಕಾರಿಗಳು ಹಣ ಪಡೆದಿದ್ದಾರೆ ಎಂಬ ಆರೋಪ ಮಾಡಿ ಆಡಿಯೋ ಹರಿಬಿಟ್ಟಿದ್ದ.

Advertisement
Advertisement

Udayavani is now on Telegram. Click here to join our channel and stay updated with the latest news.

Next